ಬುದಪೆಸ್ಟ್(ಹಂಗೇರಿ): ಐಟಿಟಿಎಫ್ ವಿಶ್ವ ಟೂರ್ ಹಂಗೇರಿಯನ್ ಓಪನ್ ಟೇಬಲ್ ಟೆನಿಸ್ ಟೂರ್ನಿಯಲ್ಲಿ ಪುರುಷರ ವಿಭಾಗದಲ್ಲಿ ಭಾರತದ ಜೋಡಿ ಅಚಂತಾ ಶರತ್ ಕಮಲ್ ಹಾಗೂ ಜಿ. ಸತಿಯನ್ ಬೆಳ್ಳಿಪದಕ ಮುಡಿಗೇರಿಸಿಕೊಂಡಿದ್ದಾರೆ.
ಹಂಗೇರಿಯಾ ಬುದಪೆಸ್ಟ್ನಲ್ಲಿ ನಡೆದ ಫೈನಲ್ನಲ್ಲಿ ಅಚಂತಾ ಶರತ್ ಕಮಲ್ -ಜಿ. ಸತಿಯನ್ ಜೋಡಿ 5-11,9-11,11-8, 9-11(1-3) ಅಂತರದಲ್ಲಿ ಜರ್ಮನಿಯ ಬೆನೆಡಿಕ್ತ್ ದುಡಾ ಮತ್ತು ಪ್ಯಾಟ್ರಿಕ್ ಫ್ರಾಂಜಿಸ್ಕಾ ವಿರುದ್ಧ ಸೋಲು ಕಾಣುವ ಮೂಲಕ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟುಕೊಂಡಿತು.
ಇದಕ್ಕೂ ಮುನ್ನ ಸೆಮಿಫೈನಲ್ಸ್ ಹಣಾಹಣಿಯಲ್ಲಿ ಸತಿಯನ್ ಹಾಗೂ ಶರತ್ ಕಮಲ್ ಜೋಡಿ ಅಗ್ರ ಶ್ರೇಯಾಂಕದ ಕ್ವಾನ್ ಕಿಟ್ ಮತ್ತು ಹಾಂಕಾಂಗ್ನ ವಾಂಗ್ ಚುನ್ ಜೋಡಿಯನ್ನು 3-2ರಲ್ಲಿ ಮಣಿಸಿ ಫೈನಲ್ ಪ್ರವೇಶ ಮಾಡಿತ್ತು.
ಅನುಭವಿ ಶರತ್ ಕಮಲ್ಗೆ ಬುದಪೆಸ್ಟ್ನಲ್ಲಿ ಸಿಕ್ಕ ಎರಡನೇ ಪದಕ ಇದಾಗಿದೆ. ಇದಕ್ಕು ಮೊದಲೇ ಮಿಕ್ಸ್ ಡಬಲ್ಸ್ನಲ್ಲಿ ಮನಿತ ಬತ್ರ ಜೊತೆಗೂಡಿ ಕಂಚು ಗೆದ್ದಿದ್ದರು.
ಮಿನಿ-ಕ್ಯಾಡೆಟ್ ಗರ್ಲ್ಸ್ ಸಿಂಗಲ್ ವಿಭಾಗದಲ್ಲಿ 10 ವರ್ಷದ 5ನೇ ತರಗತಿ ಓದುತ್ತಿರುವ ಮಥನ್ ರಾಜನ್ ಕಂಚಿನ ಪದಕ ಪಡೆದಿದ್ದಾರೆ. ಇವರು ರಷ್ಯಾದ ಲುಲಿಯಾ ಪೊಗುವ್ಕಿನ ವಿರುದ್ಧ ಸೆಮಿಫೈನಲ್ನಲ್ಲಿ 3-1ರಲ್ಲಿ ಸೋಲು ಕಂಡು ನಿರಾಶೆಯನುಭಿಸಿದ್ದಾರೆ.