ETV Bharat / sports

ಶೂಟಿಂಗ್ ವಿಶ್ವಕಪ್​ನಲ್ಲಿ ಚಿನ್ನ ಗೆದ್ದ ಸೌರಭ್ ಚೌಧರಿ - ಐಎಸ್​ಎಸ್​ಎಫ್​ ವಿಶ್ವಕಪ್​ನಲ್ಲಿ ಚಿನ್ನದ ಪದಕ ಗೆದ್ದ ಸೌರಭ್​

ಒಲಿಂಪಿಯನ್​ ಮತ್ತು ಯೂತ್​ ಒಲಿಂಪಿಕ್ಸ್ ಚಿನ್ನದ ಪದಕ ವಿಜೇತನಾಗಿರುವ 19 ವರ್ಷದ ಸೌರಭ್ ಅರ್ಹತಾ ಸುತ್ತಿನಲ್ಲಿ 584 ಅಂಕ ಪಡೆದು 3ನೇ ಸ್ಥಾನ ಪಡೆದುಕೊಂಡಿದ್ದರು.​ ನಂತರ 8 ಶೂಟರ್​ಗಳ ಫೈನಲ್​ನಲ್ಲಿ 38 ಅಂಕ ಪಡೆದು ಅಗ್ರಸ್ಥಾನಕ್ಕೇರಿದ್ದರು. ಪದಕ ಸುತ್ತಿನಲ್ಲಿ 42.5 ಅಂಕಗಳೊಂದಿಗೆ ಚಿನ್ನದ ಪದಕಕ್ಕೆ ಕೊರಳೊಡ್ಡಿದ್ದಾರೆ.

Saurabh Chaudhary claims gold in ISSF World Cup in Cairo
ಶೂಟಿಂಗ್ ವಿಶ್ವಕಪ್​ನಲ್ಲಿ ಚಿನ್ನ ಗೆದ್ದ ಸೌರಭ್ ಚೌಧರಿ
author img

By

Published : Mar 1, 2022, 5:21 PM IST

ಕೈರೋ: ಭಾರತದ ಶೂಟಿಂಗ್ ತಾರೆ ಸೌರಭ್ ಚೌಧರಿ ಈಜಿಪ್ಟ್​ನ ಕೈರೋದಲ್ಲಿ ನಡೆಯುತ್ತಿರುವ ಐಎಸ್​ಎಸ್​ಎಫ್​ ವಿಶ್ವಕಪ್​​ನಲ್ಲಿ ಮಂಗಳವಾರ 10 ಮೀಟರ್ ಏರ್​ ಪಿಸ್ತೂಲ್​ನಲ್ಲಿ ಚಿನ್ನದ ಪದಕ ಮುಡಿಗೇರಿಸಿಕೊಂಡಿದ್ದಾರೆ.

ಫೈನಲ್​ನಲ್ಲಿ ಏಷ್ಯನ್ ಗೇಮ್ಸ್ ಚಿನ್ನದ ಪದಕ ವಿಜೇತ 16 ಅಂಕ ಪಡೆದರೆ, ಇವರ ಪ್ರತಿಸ್ಪರ್ಧಿ ಜರ್ಮನಿಯ ಮೈಕಲ್ ಶ್ವಾಲ್ಡ್​ ವಿರುದ್ಧ ಮುನ್ನಡೆ ಸಾಧಿಸಿ ಚಾಂಪಿಯನ್ ಆದರು. ಈ ವಿಭಾಗದಲ್ಲಿ ಕಂಚಿನ ಪದಕವನ್ನು ರಷ್ಯಾದ ಅರ್ಟೆಮ್ ಚೆರ್ನೊಸೊಫ್ ಪಡೆದುಕೊಂಡರು. ಉಕ್ರೇನ್​ ಮೇಲೆ ಆಕ್ರಮಣ ಮಾಡಿರುವ ಕಾರಣ ಅವರು ತಮ್ಮ ರಾಷ್ಟ್ರೀಯ ಧ್ವಜವಿಲ್ಲದೆ ಸ್ಪರ್ಧಿಸಿದ್ದರು.

ಒಲಿಂಪಿಯನ್​ ಮತ್ತು ಯೂತ್​ ಒಲಿಂಪಿಕ್ಸ್ ಚಿನ್ನದ ಪದಕ ವಿಜೇತನಾಗಿರುವ 19 ವರ್ಷದ ಸೌರಭ್ ಅರ್ಹತಾ ಸುತ್ತಿನಲ್ಲಿ 584 ಅಂಕ ಪಡೆದು 3ನೇ ಸ್ಥಾನ ಪಡೆದುಕೊಂಡಿದ್ದರು.​ ನಂತರ 8 ಶೂಟರ್​ಗಳ ಫೈನಲ್​ನಲ್ಲಿ 38 ಅಂಕ ಪಡೆದು ಅಗ್ರಸ್ಥಾನಕ್ಕೇರಿದ್ದರು. ಪದಕ ಸುತ್ತಿನಲ್ಲಿ 42.5 ಅಂಕ ಪಡೆದು ಚಿನ್ನದ ಪದಕಕ್ಕೆ ಕೊರಳೊಡ್ಡಿದರು.

ಮಹಿಳೆಯರ 10 ಮೀಟರ್ ಏರ್​ ಪಿಸ್ತೂಲ್​ನಲ್ಲಿ ಇಶಾ ಸಿಂಗ್, ಶ್ರೀ ನಿವೇತಾ ಮತ್ತು ರುಚಿತಾ ವಿನೆರ್ಕರ್​ ಭಾರತವನ್ನು ಪ್ರತಿನಿಧಿಸಲಿದ್ದಾರೆ. ಕೈರೋ ವಿಶ್ವಕಪ್​ನಲ್ಲಿ 60 ರಾಷ್ಟ್ರಗಳ 500ಕ್ಕೂ ಹೆಚ್ಚು ಶೂಟರ್​ಗಳು 20 ವಿಭಾಗಗಳಲ್ಲಿ ಸ್ಪರ್ಧಿಸಲಿದ್ದಾರೆ.

ಇದನ್ನೂ ಓದಿ:ಉಕ್ರೇನ್​ ಮೇಲಿನ ಆಕ್ರಮಣಕ್ಕೆ ರಷ್ಯಾ ಟೆನಿಸ್​ ಆಟಗಾರ್ತಿ ವಿರೋಧ.. ಯುದ್ಧ ನಿಲ್ಲಿಸಲು ಕೋರಿಕೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.