ಒಸ್ಲೋ (ನಾರ್ವೆ): ವಿಶ್ವ ಚಾಂಪಿಯನ್ಶಿಪ್ನಲ್ಲಿ ಭಾರತದ ಕುಸ್ತಿಪಟು ಸರಿತಾ ಮೋರ್ ಕಂಚಿನ ಪದಕ ಜಯಿಸಿದ್ದಾರೆ. ಈ ಮೂಲಕ ವಿಶ್ವ ಚಾಂಪಿಯನ್ಶಿಪ್ನಲ್ಲಿ ಕಂಚಿನ ಪದಕ ಪಡೆದ ಭಾರತದ 6ನೇ ಮಹಿಳಾ ಕುಸ್ತುಪಟುವಾಗಿ ಇತಿಹಾಸ ರಚಿಸಿದ್ದಾರೆ.
59 ಕೆಜಿ ವಿಭಾಗದಲ್ಲಿ ಸ್ವಿಡನ್ನ ಸಾರಾ ಲಿಂಡ್ಬೋರ್ಗ್ ವಿರುದ್ಧ ಸರಿತಾ 8-2 ಅಂತರದಿಂದ ಗೆದ್ದು ಪದಕ ಜಯಿಸಿದರು. 2021ರಲ್ಲಿ ವಿಶ್ವ ಚಾಂಪಿಯನ್ಶಿಪ್ನಲ್ಲಿ ಪದಕ ಗೆದ್ದ ದೇಶದ ಎರಡನೇ ಮಹಿಳಾ ಕುಸ್ತಿಪಟು ಎಂಬ ಹೆಗ್ಗಳಿಕೆಗೂ ಪಾತ್ರಾಗಿದ್ದಾರೆ. ಜೊತೆಗೆ ಈವರೆಗೆ ವಿಶ್ವಚಾಂಪಿಯನ್ಶಿಪ್ನಲ್ಲಿ ಕಂಚು ಗೆದ್ದ 6ನೇ ಭಾರತೀಯ ಮಹಿಳಾ ಕುಸ್ತಿಪಟು ಆಗಿಯೂ ಸರಿತಾ ಹೊರಹೊಮ್ಮಿದ್ದಾರೆ.
ಇನ್ನು ಗುರುವಾರವೇ ಭಾರತದ ಇನ್ನೋರ್ವ ಮಹಿಳಾ ಕುಸ್ತಿಪಟು ಅನ್ಶು ಮಲಿಕ್ 57 ಕೆಜಿ ವಿಭಾಗದಲ್ಲಿ ವಿಶ್ವಚಾಂಪಿಯನ್ಶಿಪ್ನಲ್ಲಿ ಬೆಳ್ಳಿ ಪದಕ ಜಯಿಸಿ ಇತಿಹಾಸ ಬರೆದಿದ್ದಾರೆ. ಈ ಮೂಲಕ ಬೆಳ್ಳಿ ಪದಕ ಗೆದ್ದ ದೇಶದ ಮಹಿಳಾ ಕುಸ್ತಿಪಟುವಾಗಿ ಅನ್ಶು ದಾಖಲೆ ಮಾಡಿದ್ದಾರೆ.
(ಇತಿಹಾಸ ಬರೆದ ಅನ್ಶು ಮಲಿಕ್.. ವಿಶ್ವ ಚಾಂಪಿಯನ್ಶಿಪ್ನಲ್ಲಿ ಬೆಳ್ಳಿ ಗೆದ್ದ ಮೊದಲ ಮಹಿಳಾ ಕುಸ್ತಿಪಟು!)