ETV Bharat / sports

ಸಾನಿಯಾಗೆ ಪ್ರಧಾನಿಯಿಂದ ಪತ್ರ: ಟ್ವಿಟರ್​ನಲ್ಲಿ ಧನ್ಯವಾದ ಅರ್ಪಿಸಿದ ಮೂಗುತಿ ಸುಂದರಿ - ಪ್ರಧಾನಿ ನರೇಂದ್ರ ಮೋದಿ ಅಭಿನಂದನಾ ಪತ್ರ

ಟೆನಿಸ್​ ವೃತ್ತಿ ಜೀವನಕ್ಕೆ ವಿದಾಯ ಹೇಳಿರುವ ಸಾನಿಯಾ - ಯುವ ಆಟಗಾರ್ತಿಯರಿಗೆ ಸ್ಫೂರ್ತಿ ಎಂದು ಪಿಎಂ ಅವರಿಂದ ವಿರ್ಜಾಗೆ ಪತ್ರ - ಪ್ರಧಾನಿಗೆ ಟ್ವಿಟರ್​ನಲ್ಲಿ ಧನ್ಯವಾದ ತಿಳಿಸಿದ ಮೂಗುತಿ ಸುಂದರಿ

sania mirza shares pm narendra modis letter in twitter
ಟ್ವಿಟರ್​ನಲ್ಲಿ ಧನ್ಯವಾದ ಅರ್ಪಿಸಿದ ಮುಗುತಿ ಸುಂದರಿ
author img

By

Published : Mar 11, 2023, 7:18 PM IST

ಭಾರತೀಯ ಟೆನಿಸ್ ತಾರೆ ಸಾನಿಯಾ ಮಿರ್ಜಾ ಅವರು ಕಳೆದ ತಿಂಗಳು ವೃತ್ತಿಜೀವನಕ್ಕೆ ವಿದಾಯ ಹೇಳಿದರು. ಇತ್ತಿಚೆಗಷ್ಟೇ ಹೈದರಾಬಾದ್​ನಲ್ಲಿ ತವರಿನ ಅಭಿಮಾನಿಗಳಿಗಾಗಿ ವಿದಾಯದ ಪಂದ್ಯವನ್ನೂ ಕೂಡಾ ಆಡಿದರು. ಟೆನಿಸ್​ ಆಟದ ಮೂಲಕ ಕ್ರೀಡೆಗೆ ಸೇರುವ ಯುವತಿಯರಿಗೆ ಸ್ಫೂರ್ತಿಯಾಗಿರುವ ಸಾನಿಯಾಗೆ ಪ್ರಧಾನಿ ನರೇಂದ್ರ ಮೋದಿ ಅಭಿನಂದನಾ ಪತ್ರ ಕಳಿಸಿದ್ದು, ಈ ಬಗ್ಗೆ ಮೂಗುತಿ ಸುಂದರಿ ತಮ್ಮ ಟ್ವಿಟ್​ನಲ್ಲಿ ಹಂಚಿಕೊಂಡಿದ್ದಾರೆ. ​

  • I would like to thank you Honorable Prime Minister @narendramodi Ji for such kind and inspiring words .I have always taken great pride in representing our country to the best of my ability and will continue to do whatever I can to make India proud . Thank you for your support. pic.twitter.com/8q2kZ2LZEN

    — Sania Mirza (@MirzaSania) March 11, 2023 " class="align-text-top noRightClick twitterSection" data=" ">

ಪ್ರಧಾನಿ ಮೋದಿಯ ಈ ಗೆಸ್ಚರ್‌ಗೆ ಧನ್ಯವಾದ ಅರ್ಪಿಸಿದ್ದಾರೆ. "ತಾನು ಮುಂದೆ ಏನು ಮಾಡಿದರೂ ಭಾರತವನ್ನು ಹೆಮ್ಮೆಪಡುವಂತೆ ಮಾಡುವುದನ್ನು ಮುಂದುವರಿಸುವುದಾಗಿ ಪ್ರತಿಜ್ಞೆ ಮಾಡಿದ್ದಾರೆ. ಪತ್ರದಲ್ಲಿ ಪ್ರಧಾನಿ ಮೋದಿ ಅವರು ಸಾನಿಯಾ ಅವರನ್ನು 'ಚಾಂಪಿಯನ್' ಎಂದು ಕರೆದಿದ್ದು, ಟೆನಿಸ್ ತಾರೆ ಸಾನಿಯಾ "ಭಾರತೀಯ ಕ್ರೀಡೆಗಳಲ್ಲಿ ಅಳಿಸಲಾಗದ ಛಾಪು ಮೂಡಿಸಿದ್ದಾರೆ, ಮುಂಬರುವ ಪೀಳಿಗೆಯ ಕ್ರೀಡಾಪಟುಗಳಿಗೆ ಸ್ಫೂರ್ತಿ" ಎಂದು ಹೇಳಿದ್ದಾರೆ.

ಈ ಪತ್ರವನ್ನು ಟ್ವಿಟ್​ ಮಾಡಿರುವ ಸಾನಿಯಾ "ಗೌರವಾನ್ವಿತ ಪ್ರಧಾನ ಮಂತ್ರಿಯವರಿಗೆ ನಾನು ಧನ್ಯವಾದ ಹೇಳಲು ಬಯಸುತ್ತೇನೆ. ಈ ರೀತಿಯ ಸ್ಪೂರ್ತಿದಾಯಕ ಮಾತುಗಳಿಗಾಗಿ ಮೋದಿ ಅವರಿಗೆ ವಂದನೆಗಳು. ನಮ್ಮ ದೇಶವನ್ನು ನನ್ನ ಸಾಮರ್ಥ್ಯಕ್ಕೆ ತಕ್ಕಂತೆ ಪ್ರತಿನಿಧಿಸುವುದರಲ್ಲಿ ನಾನು ಯಾವಾಗಲೂ ಹೆಮ್ಮೆಪಡುತ್ತೇನೆ. ಭಾರತವನ್ನು ಹೆಮ್ಮೆ ಪಡುವಂತೆ ಮಾಡಲು ನನ್ನಿಂದ ಸಾಧ್ಯವಿರುವ ಎಲ್ಲವನ್ನೂ ಮಾಡುವುದನ್ನು ಮುಂದುವರಿಸುತ್ತೇನೆ. ನಿಮ್ಮ ಸಹಕಾರಕ್ಕೆ ಧನ್ಯವಾದಗಳು ಎಂದು ಬರೆದುಕೊಂಡಿದ್ದಾರೆ.

ಪತ್ರದಲ್ಲಿ ಪ್ರಧಾನಿ ಮೋದಿ ಹೀಗೆ ಬರೆದಿದ್ದಾರೆ: ನೀವು ವೃತ್ತಿಪರ ಟೆನಿಸ್ ಆಡುವುದಿಲ್ಲ ಎನ್ನುವುದನ್ನು ನಿಮ್ಮ ಅಭಿಮಾನಿಗಳು ಅರಗಿಸಿಕೊಳ್ಳಲು ಕಷ್ಟ ಪಡುತ್ತಾರೆ. ಆದರೆ, ಭಾರತದ ಅತ್ಯುತ್ತಮ ಟೆನಿಸ್ ಆಟಗಾರರಲ್ಲಿ ಒಬ್ಬರಾದ ನಿಮ್ಮ ವೃತ್ತಿಜೀವನದ ಮೂಲಕ ನೀವು ಭಾರತೀಯ ಕ್ರೀಡೆಗಳಲ್ಲಿ ಅಳಿಸಲಾಗದ ಛಾಪು ಮೂಡಿಸಿದ್ದೀರಿ. ಮುಂಬರುವ ಪೀಳಿಗೆಯ ಕ್ರೀಡಾಪಟುಗಳಿಗೆ ಸ್ಫೂರ್ತಿಯಾಗಿದ್ದೀರಿ ಎಂದು ಬರೆದಿದ್ದಾರೆ. ಸುಮಾರು ಒಂದೂವರೆ ಪುಟದ ಸುದೀರ್ಘ ಟಿಪ್ಪಣಿಯನ್ನು ಪತ್ರ ಒಳಗೊಂಡಿದೆ.

ಮಹಿಳಾ ಪ್ರೀಮಿಯರ್ ಲೀಗ್‌ನ ಉದ್ಘಾಟನಾ ಆವೃತ್ತಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮಾರ್ಗದರ್ಶಕರಾಗಿ ಸಾನಿಯಾ ಮಿರ್ಜಾ ಅವರನ್ನು ಸೇರಿಸಿಕೊಳ್ಳಲಾಗಿದೆ. ಸಾನಿಯಾ ಅವರು ಆರು ಗ್ರ್ಯಾಂಡ್ ಸ್ಲ್ಯಾಮ್‌ಗಳು ಮತ್ತು 43 ವುಮೆನ್ಸ್​ ಟೆನಿಸ್​ ಅಸೋಸಿಯೇಶನ್​ ಪ್ರಶಸ್ತಿಗಳನ್ನು ಗೆದ್ದು ಕೊಂಡಿದ್ದಾರೆ.

"ನಾನು RCB ಮಹಿಳಾ ತಂಡಕ್ಕೆ ಮಾರ್ಗದರ್ಶಕನಾಗಿ ಸೇರಲು ಸಂತೋಷವಾಗಿದೆ. ಮಹಿಳಾ ಪ್ರೀಮಿಯರ್ ಲೀಗ್‌ನೊಂದಿಗೆ ಭಾರತೀಯ ಮಹಿಳಾ ಕ್ರಿಕೆಟ್ ಬದಲಾವಣೆಯನ್ನು ಕಂಡಿದೆ. ಈ ಬದಲಾವಣೆಯ ಭಾಗವಾಗಲು ನಾನು ನಿಜವಾಗಿಯೂ ಎದುರು ನೋಡುತ್ತಿದ್ದೇನೆ. RCB ಮಹಿಳಾ ಕ್ರೀಡೆಗೆ ಬೆಂಬಲಿಸುವ ಉದ್ದೇಶದಿಂದ ಮಹಿಳಾ ಪ್ರೀಮಿಯರ್​ ಲೀಗ್​ನಲ್ಲಿ ಹಣ ಹೂಡಿಕೆ ಮಾಡಿದೆ" ಎಂದು ತಂಡ ಸೇರ್ಪಡೆ ಆದಾಗ ಮಿರ್ಜಾ ಹೇಳಿದ್ದರು.

"ಆರ್‌ಸಿಬಿ ಜನಪ್ರಿಯ ತಂಡವಾಗಿದೆ ಮತ್ತು ಐಪಿಎಲ್‌ನಲ್ಲಿ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ತಂಡವಾಗಿದೆ. ಆರ್​ಸಿಬಿ ಮಹಿಳಾ ಪ್ರೀಮಿಯರ್ ಲೀಗ್‌ಗೆ ತಂಡವನ್ನು ಖರೀದಿಸಿರುವುದು ನನಗೆ ಅಪಾರ ಸಂತೋಷವಾಗಿದೆ. ಏಕೆಂದರೆ ಇದು ದೇಶದಲ್ಲಿ ಮಹಿಳಾ ಕ್ರೀಡೆ ಹಾಗೂ ಕ್ರಿಕೆಟ್​ನಲ್ಲಿ ಈ ಲೀಗ್​ ಮಹತ್ತರ ಬದಲಾವಣೆ ತರುವ ನಿರೀಕ್ಷೆ ಇದೆ. ಹೆಣ್ಣು ಮಕ್ಕಳಿಗೆ ಕ್ರೀಡೆಯನ್ನು ವೃತ್ತಿ ಜೀವನವನ್ನಾಗಿ ಆರಿಸಿಕೊಳ್ಳಲು ಈ ರೀತಿಯ ಲೀಗ್​ಗಳು ಪ್ರೋತ್ಸಾಹಿಸುತ್ತದೆ" ಎಂದಿದ್ದರು.

ಇದನ್ನೂ ಓದಿ: ಐಪಿಎಲ್​ನಲ್ಲಿ ಧೋನಿ ಪರಂಪರೆ ಅಂತ್ಯ: ಮ್ಯಾಥ್ಯೂ ಹೇಡನ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.