ETV Bharat / sports

ಇತಿಹಾಸ ಸೃಷ್ಟಿಸಿದ ಪ್ರಕಾಶ್​​.. ಒಲಿಂಪಿಕ್​ಗೆ ಅರ್ಹತೆ ಪಡೆದ ಮೊದಲ ಭಾರತೀಯ ಈಜುಪಟು!

ಒಲಿಂಪಿಕ್ ಭರವಸೆಯ ಈಜುಪಟುಗಳಾದ ಸಜನ್ ಪ್ರಕಾಶ್ ಕೊನೆಗೂ ತಮ್ಮ ಆಸೆ ಈಡೇರಿಸಿಕೊಂಡಿದ್ದು, ಟೋಕಿಯೋ ಒಲಿಂಪಿಕ್​ನಲ್ಲಿ ಭಾಗಿಯಾಗುವ ಅವಕಾಶ ಪಡೆದುಕೊಂಡಿದ್ದಾರೆ. ಜತೆಗೆ ಈ ದಾಖಲೆ ಬರೆದ ಭಾರತದ ಮೊದಲ ಈಜು ಪಟುವಾಗಿದ್ದಾರೆ.

Sajan Prakash
Sajan Prakash
author img

By

Published : Jun 26, 2021, 9:34 PM IST

ಹೈದರಾಬಾದ್​: ಭಾರತದ ಈಜುಪಟು ಸಜನ್​ ಪ್ರಕಾಶ್​ ಹೊಸದೊಂದು ದಾಖಲೆ ನಿರ್ಮಾಣ ಮಾಡಿದ್ದು, ಮುಂಬರುವ ಟೋಕಿಯೋ ಒಲಂಪಿಕ್​ನಲ್ಲಿ ಭಾಗಿಯಾಗುವ ಅರ್ಹತೆ ಪಡೆದುಕೊಂಡಿದ್ದಾರೆ. ಈ ಮೂಲಕ ಈ ಸಾಧನೆ ಮಾಡಿರುವ ಮೊದಲ ಭಾರತೀಯ ಈಜುಪಟು ಎಂಬ ಹೆಗ್ಗಳಿಕೆಗೆ ಸಹ ಅವರು ಪಾತ್ರರಾಗಿದ್ದಾರೆ.

ರೋಮ್​​ನಲ್ಲಿ ನಡೆದ ಸೆಸ್ಟೆ ಕೊಲ್ಲಿ ಟ್ರೋಫಿಯಲ್ಲಿ ಪುರುಷರ 200 ಮೀಟರ್ ಬಟರ್​​ಫ್ಲೈ​ ಈಜು ಸ್ಪರ್ಧೆಯಲ್ಲಿ 1:56:38 ನಿಮಿಷದಲ್ಲಿ ಗುರಿ ಮುಟ್ಟುವ ಮೂಲಕ ಈ ಸಾಧನೆ ಮಾಡಿದ್ದಾರೆ. ಒಲಿಂಪಿಕ್​​ನಲ್ಲಿ ಅರ್ಹತೆ ಪಡೆದುಕೊಳ್ಳಬೇಕಾದರೆ ಅವರು ಈ ಗುರಿಯನ್ನ 1:56:48 ನಿಮಿಷದೊಳಗೆ ಮುಟ್ಟಬೇಕಾಗಿತ್ತು. ಇದಕ್ಕೆ ಸಂಬಂಧಿಸಿದಂತೆ ಸ್ಫೋರ್ಟ್ಸ್​ ಅಥಾರಿಟಿ ಆಫ್ ಇಂಡಿಯಾ ಟ್ವೀಟ್ ಮಾಡಿ ಮಾಹಿತಿ ನೀಡಿದೆ. ಜತೆಗೆ ಅವರಿಗೆ ಅಭಿನಂದನೆ ಸಲ್ಲಿಕೆ ಮಾಡಿದೆ.

Sajan Prakash
ಭಾರತೀಯ ಈಜುಪಟು ಸಜನ್ ಪ್ರಕಾಶ್​

27 ವರ್ಷದ ಸಾಜನ್​ ಪ್ರಕಾಶ್​ ಮೂಲತ ಕೇರಳದವರಾಗಿದ್ದು, ಕಳೆದ ಆರು ದಿನಗಳ ಹಿಂದೆ 200 ಮೀಟರ್​​ ಬೆನಾಗ್ರೇಡ್ ಟ್ರೋಫಿ ಈಜು ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದಿದ್ದರು.

ಇದನ್ನೂ ಓದಿರಿ: ಶೂಟಿಂಗ್‌ ವಿಶ್ವಕಪ್​: 10 ಮೀ. ಏರ್‌ ಪಿಸ್ತೂಲ್ ಮಿಶ್ರ ವಿಭಾಗದಲ್ಲಿ ಭಾರತಕ್ಕೆ ಬೆಳ್ಳಿ

ಇದಕ್ಕೂ ಮೊದಲು ನಡೆದಿದ್ದ FINA ಮಾನ್ಯತೆ ಪಡೆದ ಒಲಿಂಪಿಕ್ ಕ್ವಾಲಿಫೈಯರ್‌ನಲ್ಲಿ ಪುರುಷರ 200 ಮೀಟರ್ ಬಟರ್​ಫ್ಲೈ ವಿಭಾಗದಲ್ಲಿ ಪ್ರಕಾಶ್ 1 ನಿಮಿಷ 56.96 ಸೆಕೆಂಡ್​ಗಳಲ್ಲಿ ಗುರಿ ತಲುಪಿ ಚಿನ್ನದ ಪದಕ ಪಡೆದು ಕೊಂಡರು. ಈ ಮೂಲಕ 2018ರಲ್ಲಿ ಒಂದು ನಿಮಿಷ 57.73 ಸೆಕೆಂಡುಗಳಲ್ಲಿ ಗುರಿ ತಲುಪಿ ನಿರ್ಮಿಸಿದ್ದ ರಾಷ್ಟ್ರೀಯ ದಾಖಲೆಯನ್ನು ತಾವೇ ಬ್ರೇಕ್ ಮಾಡಿದರು. ಆದರೆ, 27 ವರ್ಷ ಈಜುಪಟು ಕೇವಲ 0.48 ಸೆಕೆಂಡ್​ಗಳಲ್ಲಿ ಒಲಿಂಪಿಕ್​​ ಕೋಟಾ ತಪ್ಪಿಸಿಕೊಂಡಿದ್ದರು. ಆದರೆ. ಇದೀಗ ಅರ್ಹತೆ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.