ETV Bharat / sports

ಇಷ್ಟು ಸಾಕಾಗದು, ಇನ್ನಷ್ಟು ಊಟ ಕೊಡಿ; ಜೈಲು ಆಧಿಕಾರಿಗಳಿಗೆ ಸುಶೀಲ್ ಕುಮಾರ್ ಮೊರೆ

author img

By

Published : Jun 5, 2021, 6:18 PM IST

ಕುಸ್ತಿಪಟು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನವಾಗಿರುವ ಆರೋಪಿ ಸುಶೀಲ್ ಕುಮಾರ್​ಗೆ ಜೈಲಿನಲ್ಲಿ ಸಿಗುವ ಆಹಾರ ಸಾಕಾಗುತ್ತಿಲ್ಲ. ಹೀಗಾಗಿ ಅವರು ತಮಗೆ ಹೆಚ್ಚು ಆಹಾರ ನೀಡುವಂತೆ ಜೈಲು ಆಡಳಿತಾಧಿಕಾರಿಗಳನ್ನು ಒತ್ತಾಯಿಸಿದ್ದಾರೆ.

susheel
susheel

ನವದೆಹಲಿ: ಯುವ ಕುಸ್ತಿಪಟು ಸಾಗರ್​ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ಸುಶೀಲ್ ಕುಮಾರ್, ಎಲ್ಲ ಕೈದಿಗಳಿಗೆ ಸಿಗುಷ್ಟು ಆಹಾರ ಪಡೆಯುತ್ತಿದ್ದಾರೆ. ಆದರೆ ಇಷ್ಟು ಕಡಿಮೆ ಆಹಾರದಿಂದ ಹೊಟ್ಟೆ ತುಂಬುತ್ತಿಲ್ಲ, ತನಗೆ ಹೆಚ್ಚು ಆಹಾರ ನೀಡಬೇಕು ಎಂದು ಅವರು ಜೈಲು ಆಡಳಿತವನ್ನು ಒತ್ತಾಯಿಸಿದ್ದಾರೆ.

ಛತ್ರಸಾಲ್ ಕ್ರೀಡಾಂಗಣದಲ್ಲಿ ಯುವ ಕುಸ್ತಿಪಟು ಹತ್ಯೆ ಆರೋಪದ ಮೇಲೆ ಒಲಿಂಪಿಕ್ ಪದಕ ವಿಜೇತ ಕುಸ್ತಿಪಟು ಸುಶೀಲ್ ಕುಮಾರ್ ಸದ್ಯ ನ್ಯಾಯಾಂಗ ಬಂಧನದಲ್ಲಿದ್ದಾರೆ. ಸುಶೀಲ್ ಅವರನ್ನು ಬುಧವಾರ ತಡರಾತ್ರಿ ಮಂಡೋಲಿ ಜೈಲಿನಲ್ಲಿ ಇರಿಸಲಾಗಿದೆ. ಬುಧವಾರ ರಾತ್ರಿ ಜೈಲಿಗೆ ತಲುಪಿದಾಗ, ಸುಶೀಲ್ ಊಟ ಮಾಡಿಲ್ಲ. ಆದರೆ ಗುರುವಾರ ಮತ್ತು ಶುಕ್ರವಾರ ಊಟ ಮಾಡಿದ್ದಾರೆ. ಜೈಲಿನೊಳಗಿನ ಆಹಾರದಲ್ಲಿ ಪ್ರತಿ ಕೈದಿಗೆ ಎಂಟು ರೊಟ್ಟಿ, ತರಕಾರಿ ಸಾಂಬಾರ್​, 2 ಬಾರಿ ಚಹಾ ಮತ್ತು ನಾಲ್ಕು ಬಿಸ್ಕತ್ತುಗಳನ್ನು ನೀಡಲಾಗುತ್ತದೆ.

ಗುರುವಾರ ಮತ್ತು ಶುಕ್ರವಾರದಂದು ಸುಶೀಲ್‌ಗೆ ಅದೇ ಆಹಾರವನ್ನು ನೀಡಲಾಯಿತು. ಆದರೆ ಕುಸ್ತಿಪಟು ಆಗಿರುವುದರಿಂದ ಅವರ ಆಹಾರವು ಇದಕ್ಕಿಂತ ಹೆಚ್ಚು ಸಮತೋಲಿತವಾಗಿದೆ. ಈ ಕಾರಣದಿಂದಾಗಿ ಅವರ ಹೊಟ್ಟೆಯು ಕೇವಲ ಎಂಟು ರೊಟ್ಟಿಗಳಿಂದ ತುಂಬಿರಲಿಲ್ಲ ಹೀಗಾಗಿ ತಮಗೆ ನೀಡುವ ಆಹಾರದ ಪ್ರಮಾಣ ಹೆಚ್ಚಿಸುವಂತೆ ಜೈಲು ಆಡಳಿತವನ್ನು ಅವರು ಒತ್ತಾಯಿಸಿದ್ದಾರೆ. ಇದಲ್ಲದೆ, ತಮ್ಮ ಆಹಾರದಲ್ಲಿ ಸರಿಯಾದ ಪ್ರಮಾಣದ ಪ್ರೋಟೀನ್ ಕೂಡ ಇರಬೇಕು. ಜೈಲು ಆಡಳಿತವು ಇದನ್ನು ಒದಗಿಸದಿದ್ದರೆ ನ್ಯಾಯಾಲಯದ ಮೊರೆ ಹೋಗುವುದಾಗಿ ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.