ETV Bharat / sports

ಕ್ರಿಸ್ಟಿಯನ್ ರೊನಾಲ್ಡೊಗೆ ಹೊಟ್ಟೆನೋವು: ನೈಜೀರಿಯಾ ಎದುರಿನ ಅಭ್ಯಾಸ ಪಂದ್ಯದಿಂದ ಔಟ್​

author img

By

Published : Nov 17, 2022, 3:36 PM IST

ಇದೇ 20 ರಿಂದ ಸಾಕರ್​ ವಿಶ್ವಕಪ್​ ಆರಂಭವಾಗಲಿದ್ದು, ಅದಕ್ಕೂ ಮೊದಲು ಎಲ್ಲ ತಂಡಗಳು ಅಭ್ಯಾಸ ಪಂದ್ಯಗಳನ್ನಾಡುತ್ತಿವೆ. ಇಂದು ನಡೆಯುವ ಪೋರ್ಚುಗಲ್​- ನೈಜೀರಿಯಾ ಪಂದ್ಯದಿಂದ ಸ್ಟಾರ್​ ಆಟಗಾರ ಕ್ರಿಶ್ಚಿಯನ್​ ರೊನಾಲ್ಡೊ ಹೊರಬಿದ್ದಿದ್ದಾರೆ.

ronaldo-misses-training
ಕ್ರಿಶ್ಚಿಯನ್​ ರೊನಾಲ್ಡೊಗೆ ಹೊಟ್ಟೆನೋವು

ಲಿಸ್ಬನ್: ಯುಎಇ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ಅರ್ಜೆಂಟೀನಾ ತಂಡದ ಸ್ಟಾರ್​ ಆಟಗಾರ ಲಿಯೋನೆಲ್​ ಮೆಸ್ಸಿ ಭರ್ಜರಿ ಪ್ರದರ್ಶನ ನೀಡಿ ತಾವು ವಿಶ್ವಕಪ್​ಗೆ ರೆಡಿ ಎಂದು ಸಾಬೀತು ಮಾಡಿದ್ದಾರೆ. ಇತ್ತ ಪೋರ್ಚುಗಲ್​ ಸ್ಟಾರ್​ ಪ್ಲೇಯರ್​ ಕ್ರಿಸ್ಟಿಯನ್​ ರೊನಾಲ್ಡೊ ನೈಜೀರಿಯಾ ಎದುರಿನ ಅಭ್ಯಾಸ ಪಂದ್ಯದಿಂದ ತಪ್ಪಿಸಿಕೊಂಡಿದ್ದಾರೆ.

ಹೊಟ್ಟೆನೋವಿನಿಂದ ಬಳಲುತ್ತಿರುವ ರೊನಾಲ್ಡೊ ತಂಡದ ತರಬೇತಿ ಅವಧಿಯಲ್ಲೂ ಗೈರಾಗಿದ್ದರು. ಇಂದು ನಡೆಯುವ ನೈಜೀರಿಯಾ ವಿರುದ್ಧದ ಅಭ್ಯಾಸ ಪಂದ್ಯದಿಂದಲೂ ವಿಶ್ವದ ಸ್ಟಾರ್​ ಆಟಗಾರ ಹೊರಗುಳಿಯಲಿದ್ದಾರೆ ಎಂದು ತಂಡ ತಿಳಿಸಿದೆ.

ವಿಶ್ವಕಪ್​ ನಡೆಯುವ ಕತಾರ್‌ಗೆ ತೆರಳುವ ಮೊದಲು ಪೋರ್ಚುಗಲ್ ತಂಡ ಗುರುವಾರ ಲಿಸ್ಬನ್‌ನಲ್ಲಿ ನೈಜೀರಿಯಾ ವಿರುದ್ಧ ಅಭ್ಯಾಸ ಪಂದ್ಯ ಆಡಲಿದೆ. ಹೊಟ್ಟೆನೋವಿನಿಂದ ಬಳಲುತ್ತಿರುವ ರೊನಾಲ್ಡೊ ಪಂದ್ಯದಲ್ಲಿ ಕಣಕ್ಕಿಳಿಯುವುದಿಲ್ಲ ಎಂದು ಕೋಚ್​ ಫರ್ನಾಂಡೊ ಸ್ಯಾಂಟೋಸ್ ತಿಳಿಸಿದರು.

ಇನ್ನು ಕತಾರ್​ನಲ್ಲಿ ವಿಶ್ವದ ಅತಿ ಶ್ರೀಮಂತ ಗೇಮ್​ ಆದ ಫುಟ್ಬಾಲ್​ ವಿಶ್ವಕಪ್​ ನವೆಂಬರ್​ 20 ರಿಂದ ಆರಂಭವಾಗಲಿದೆ. ನವೆಂಬರ್​ 24 ರಂದು ಪೋರ್ಚುಗಲ್‌ ತಂಡ ಘಾನಾ ವಿರುದ್ಧ ಅಭಿಯಾನ ಆರಂಭಿಸಲಿದೆ.

ಓದಿ: ಟಿ20ಗೆ ಬ್ಯಾಟ್​ ಬಾಲ್​ ಮಾಡುವ ಸ್ಪೆಷಲಿಸ್ಟ್​ಗಳು ತಂಡಕ್ಕೆ ಅಗತ್ಯ: ವಿವಿಎಸ್​ ಲಕ್ಷ್ಮಣ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.