ಪ್ಯಾರಿಸ್: ಫ್ರೆಂಚ್ ಓಪನ್ ಗ್ರ್ಯಾನ್‌ಸ್ಲಾಂ ಟೆನ್ನಿಸ್ ಟೂರ್ನಿಯ ಪುರುಷರ ಸಿಂಗಲ್ಸ್ ಪ್ರಶಸ್ತಿಯನ್ನು 14ನೇ ಬಾರಿಗೆ ಸ್ಪೇನ್ನ ರಾಫೆಲ್ ನಡಾಲ್ ಗೆದ್ದು ಬೀಗಿದ್ದಾರೆ. ಫೈನಲ್ನಲ್ಲಿ ನಾರ್ವೆಯ ಯುವ ಆಟಗಾರ ಕ್ಯಾಸ್ಪರ್ ರೂಡ್ ವಿರುದ್ಧ ಭರ್ಜರಿ ಜಯ ದಾಖಲಿಸಿ 22ನೇ ಗ್ರ್ಯಾಂಡ್ ಸ್ಲಾಮ್ ಕಿರೀಟ ಜಯಿಸಿದ್ದಾರೆ.
ರೊಲ್ಯಾಂಡ್ ಗ್ಯಾರೋಸ್ನಲ್ಲಿ ಭಾನುವಾರ ನಡೆದ ಟೂರ್ನಿಯ ಫೈನಲ್ ಹಣಾಹಣಿಯಲ್ಲಿ ಕೆಂಪು ಅಂಗಳದ ರಾಜ(clay court king) ಎಂದೇ ಹೆಸರುವಾಸಿಯಾಗಿರುವ ನಡಾಲ್, ಕ್ಯಾಸ್ಪರ್ ರೂಡ್ರನ್ನು 6-3, 6-3 ಹಾಗೂ ನೇರ ಸೆಟ್ಗಳಲ್ಲಿ ಮಣಿಸಿದರು. ನಡಾಲ್ 14ನೇ ರೋಲ್ಯಾಂಡ್ ಗ್ಯಾರೋಸ್ ಪ್ರಶಸ್ತಿ ಹಾಗೂ ಒಟ್ಟಾರೆ 22 ಗ್ರ್ಯಾಂಡ್ ಸ್ಲಾಮ್ ಟ್ರೋಫಿ ಗೆದ್ದ ಏಕೈಕ ಆಟಗಾರನಾಗಿದ್ದಾರೆ.
-
King of Clay x 14 👑@RafaelNadal remains undefeated in Paris finals, conquering Casper Ruud 6-3, 6-3, 6-0 for a 14th title#RolandGarros pic.twitter.com/GctcC17Ah8
— Roland-Garros (@rolandgarros) June 5, 2022 " class="align-text-top noRightClick twitterSection" data="
">King of Clay x 14 👑@RafaelNadal remains undefeated in Paris finals, conquering Casper Ruud 6-3, 6-3, 6-0 for a 14th title#RolandGarros pic.twitter.com/GctcC17Ah8
— Roland-Garros (@rolandgarros) June 5, 2022King of Clay x 14 👑@RafaelNadal remains undefeated in Paris finals, conquering Casper Ruud 6-3, 6-3, 6-0 for a 14th title#RolandGarros pic.twitter.com/GctcC17Ah8
— Roland-Garros (@rolandgarros) June 5, 2022
36 ವರ್ಷದ ಚಾಂಪಿಯನ್ ಆಟಗಾರ 22ನೇ ಗ್ರ್ಯಾಂಡ್ ಸ್ಲಾಮ್ ಕಿರೀಟದ ಮೂಲಕ ತಮ್ಮ ಸಮಕಾಲೀನ ದಿಗ್ಗಜ ಎದುರಾಳಿಗಳಾದ ನೊವಾಕ್ ಜೊಕೊವಿಕ್ ಮತ್ತು ರೋಜರ್ ಫೆಡರರ್ಗಿಂತ ಮತ್ತೊಂದು ಹೆಜ್ಜೆ ಮುಂದೆ ಸಾಗಿದಂತಾಗಿದೆ. ಸರ್ಬಿಯಾ ಮತ್ತು ಸ್ವಿಟ್ಜರ್ಲೆಂಡ್ ತಾರೆಯರು ತಲಾ 20 ಪ್ರಶಸ್ತಿ ಗೆದ್ದು ಸಮಬಲ ಹೊಂದಿದ್ದಾರೆ. ಅಲ್ಲದೆ, ಒಂದೇ ಋತುವಿನಲ್ಲಿ ನಡಾಲ್ ಆಸ್ಟ್ರೇಲಿಯನ್ ಓಪನ್ ಮತ್ತು ಫ್ರೆಂಚ್ ಓಪನ್ ಟ್ರೋಫಿ ಗೆದ್ದಿರುವುದು ಇದೇ ಮೊದಲಾಗಿದೆ.
ಅಂತಿಮ ಪಂದ್ಯದಲ್ಲಿ ಯುವ ಆಟಗಾರ ಕ್ಯಾಸ್ಪರ್ ರೂಡ್ ತಮ್ಮ ಎದುರಾಳಿ ದಿಗ್ಗಜನ ವಿರುದ್ಧದ ಸೆಣೆಸಾಟದಲ್ಲಿ ಪ್ರಬಲ ಪೈಪೋಟಿ ನೀಡುವಲ್ಲಿ ಎಡವಿದರು. ಪಂದ್ಯದ ಆರಂಭದಿಂದಲೂ ಹಿಡಿತ ಸಾಧಿಸಿದ ನಡಾಲ್ಗೆ ಮೊದಲೆರಡು ಸೆಟ್ಗಳಲ್ಲಿ ಅಲ್ಪ ಸ್ಪರ್ಧೆಯೊಡ್ಡಿದ ರೂಡ್(6-3, 6-3), ಬಳಿಕ ಅಂತಿಮ ಸೆಟ್ನಲ್ಲಿ ಸಂಫೂರ್ಣ ವಿಫಲತೆ ಕಂಡರು. ದಾಖಲೆಯ 14ನೇ ಸಲ ಫ್ರೆಂಚ್ ಓಪನ್ ಕಿರೀಟ ರಾಫೆಲ್ ನಡಾಲ್ ಪಾಲಾಯಿತು.
-
The stage is yours again, @RafaelNadal#RolandGarros pic.twitter.com/Nhp3e6wrwV
— Roland-Garros (@rolandgarros) June 5, 2022 " class="align-text-top noRightClick twitterSection" data="
">The stage is yours again, @RafaelNadal#RolandGarros pic.twitter.com/Nhp3e6wrwV
— Roland-Garros (@rolandgarros) June 5, 2022The stage is yours again, @RafaelNadal#RolandGarros pic.twitter.com/Nhp3e6wrwV
— Roland-Garros (@rolandgarros) June 5, 2022
ನಡಾಲ್ ತಾವು ಕೆಂಪು ಅಂಗಳದ ರಾಜ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದರು. 2020ರ ಫ್ರೆಂಚ್ ಓಪನ್ನಲ್ಲಿ ಚೋಕೊವಿಕ್ ಮಣಿಸಿ ಪ್ರಶಸ್ತಿ ಗೆದ್ದಿದ್ದ ರಾಫೆಲ್, 2021ರ ಟೂರ್ನಿಯ ಸೆಮಿಫೈನಲ್ನಲ್ಲಿ ಜೋಕೋ ವಿರುದ್ಧವೇ ಸೋತಿದ್ದರು. ಈ ಬಾರಿ ಮತ್ತೆ ಭರ್ಜರಿ ಪುನರಾಗಮನ ಮಾಡಿದ ನಡಾಲ್ ಕಾರ್ಟರ್ ಫೈನಲ್ನಲ್ಲಿ ಚೋಕೊವಿಕ್ಗೆ ಸೋಲುಣಿಸಿದ್ದರು.
ಇದನ್ನೂ ಓದಿ: ಲಾರ್ಡ್ಸ್ ಟೆಸ್ಟ್ : ಕಿವೀಸ್ ವಿರುದ್ಧ ಇಂಗ್ಲೆಂಡ್ಗೆ ಭರ್ಜರಿ ಜಯ.. ಮೈದಾನದಲ್ಲಿ ಮರುಕಳಿಸಿದ 2019ರ ವಿಶ್ವಕಪ್ ಘಟನೆ