ಮುಂಬೈ: ಪ್ರೋ ಕಬಡ್ಡಿ ಲೀಗ್‌ನ 10ನೇ ಆವೃತ್ತಿಗೆ ಫ್ರಾಂಚೈಸಿಗಳು ತಮ್ಮ ರಿಟೈನ್ಡ್ ಆಟಗಾರರ ಪಟ್ಟಿ ರಿಲೀಸ್ ಮಾಡಿವೆ. ತಾವು ಉಳಿಸಿಕೊಂಡ ಎಲೈಟ್ ಮತ್ತು ಯುವ ಆಟಗಾರರ ಪಟ್ಟಿಯನ್ನು ಆಯೋಜಕರು ಸೋಮವಾರ ಪ್ರಕಟಿಸಿದ್ದಾರೆ. ಪ್ರತಿ ಫ್ರಾಂಚೈಸಿಯು ತನ್ನ ಪ್ರಮುಖ ಆಟಗಾರರನ್ನು ಉಳಿಸಿಕೊಳ್ಳುವುದರೊಂದಿಗೆ ಮುಂಬರುವ ಆಟಗಾರರ ಹರಾಜಿನಲ್ಲಿ ಮತ್ತಷ್ಟು ಬಲಿಷ್ಠ ತಂಡ ಕಟ್ಟಲು ಸಜ್ಜಾಗುತ್ತಿವೆ.
ಎಲೈಟ್ ರಿಟೈನ್ಡ್ ಪ್ಲೇಯರ್ಸ್ (ERP) ವಿಭಾಗದಲ್ಲಿ 22, ರಿಟೈನ್ಡ್ ಯೂತ್ ಪ್ಲೇಯರ್ಸ್ (RYP) ವಿಭಾಗದಲ್ಲಿ 24 ಮತ್ತು ಎಕ್ಸಿಸ್ಟಿಂಗ್ ನ್ಯೂ ಯೂತ್ ಪ್ಲೇಯರ್ಸ್ (ENYP) ವಿಭಾಗದಲ್ಲಿ 38 ಸೇರಿದಂತೆ ಒಟ್ಟು 84 ಆಟಗಾರರನ್ನು 3 ವಿಭಾಗಗಳಲ್ಲಿ ಫ್ರಾಂಚೈಸಿಗಳು ಉಳಿಸಿಕೊಂಡಿವೆ.
-
Going once. Going twice. And 𝐃𝐔𝐒 🔟🔨
— ProKabaddi (@ProKabaddi) July 3, 2023 " class="align-text-top noRightClick twitterSection" data="
𝐒𝐄𝐀𝐒𝐎𝐍 𝟏𝟎 𝐏𝐋𝐀𝐘𝐄𝐑 𝐀𝐔𝐂𝐓𝐈𝐎𝐍 mein aap sabhi ka swagat hai 🤩#ProKabaddi #PKLPlayerAuction #Season10 pic.twitter.com/ur0KDlwp9M
">Going once. Going twice. And 𝐃𝐔𝐒 🔟🔨
— ProKabaddi (@ProKabaddi) July 3, 2023
𝐒𝐄𝐀𝐒𝐎𝐍 𝟏𝟎 𝐏𝐋𝐀𝐘𝐄𝐑 𝐀𝐔𝐂𝐓𝐈𝐎𝐍 mein aap sabhi ka swagat hai 🤩#ProKabaddi #PKLPlayerAuction #Season10 pic.twitter.com/ur0KDlwp9MGoing once. Going twice. And 𝐃𝐔𝐒 🔟🔨
— ProKabaddi (@ProKabaddi) July 3, 2023
𝐒𝐄𝐀𝐒𝐎𝐍 𝟏𝟎 𝐏𝐋𝐀𝐘𝐄𝐑 𝐀𝐔𝐂𝐓𝐈𝐎𝐍 mein aap sabhi ka swagat hai 🤩#ProKabaddi #PKLPlayerAuction #Season10 pic.twitter.com/ur0KDlwp9M
ಪ್ರೋ ಕಬಡ್ಡಿಯ ಪ್ರಮುಖ ಆಟಗಾರ ಪರ್ದೀಪ್ ನರ್ವಾಲ್ ಅವರನ್ನು ಯುಪಿ ಯೋಧಾಸ್ ಉಳಿಸಿಕೊಂಡರೆ, ಅಸ್ಲಾಂ ಮುಸ್ತಫಾ ಇನಾಮ್ದಾರ್‌ರನ್ನು ಪುಣೇರಿ ಪಲ್ಟನ್ ಉಳಿಸಿಕೊಂಡಿದೆ. ಸೀಸನ್ 9ರ ಮೋಸ್ಟ್ ವ್ಯಾಲ್ಯೂಬಲ್ ಆಟಗಾರ ಪ್ರಶಸ್ತಿ ವಿಜೇತ ಅರ್ಜುನ್ ದೇಶ್ವಾಲ್ ಅವರನ್ನು ಜೈಪುರ ಪಿಂಕ್ ಪ್ಯಾಂಥರ್ಸ್ ತನ್ನಲ್ಲೇ ಉಳಿಸಿಕೊಂಡಿದೆ. ಪವನ್ ಸೆಹ್ರಾವತ್ ಮತ್ತು ವಿಕಾಶ್ ಕಂಡೋಲಾ ಸೇರಿದಂತೆ ತಂಡಗಳು ಉಳಿಸಿಕೊಳ್ಳದ ಆಟಗಾರರ ಹರಾಜು ಪ್ರಕ್ರಿಯೆ ಸೆಪ್ಟೆಂಬರ್ 8, 9ರಂದು ಮುಂಬೈನಲ್ಲಿ ನಡೆಯಲಿದೆ.
ಪ್ರೋ ಬಡ್ಡಿ ಲೀಗ್‌ನ ಮಾಶಾಲ್ ಸ್ಪೋರ್ಟ್ಸ್ ಮುಖ್ಯಸ್ಥ ಮತ್ತು ಲೀಗ್ ಕಮಿಷನರ್ ಅನುಪಮ್ ಗೋಸ್ವಾಮಿ ಮಾತನಾಡಿ, "ಎಲ್ಲ ತಂಡಗಳಲ್ಲಿ ಪ್ರಮುಖ ಆಟಗಾರರನ್ನು ಉಳಿಸಿಕೊಳ್ಳಲಾಗಿದೆ. ಪ್ರೋ ಕಬಡ್ಡಿ ಲೀಗ್ ಸೀಸನ್ 10 ಉತ್ತಮ ಸ್ಪರ್ಧೆಯಾಗುವ ಭರವಸೆ ಮೂಡಿಸಿದೆ. ಆಟಗಾರರ ಹರಾಜು ಕೂಡ ಸಂಪೂರ್ಣವಾಗಿ ಗಮನ ಸೆಳೆಯಲಿರುವ ಪ್ರಕ್ರಿಯೆ. ಹಲವು ಪ್ರತಿಭಾನ್ವಿತ ಆಟಗಾರರು ಹರಾಜಿಗೆ ಮರಳಿದ್ದಾರೆ, ಕೆಲವು ಫ್ರಾಂಚೈಸಿಗಳು ತಮ್ಮ ತಂಡಗಳನ್ನು ಪುನರ್ ನಿರ್ಮಿಸಲು ಮತ್ತು ಬಲಪಡಿಸಲು ಈ ಅವಕಾಶವನ್ನು ಬಳಸಿಕೊಳ್ಳುತ್ತವೆ" ಎಂದರು.
-
.@BengaluruBulls are set to go #FullChargeMaadi with Neeraj, this season 🔋
— ProKabaddi (@ProKabaddi) August 7, 2023 " class="align-text-top noRightClick twitterSection" data="
Drop a ❤️ in the comments for this Elite Retained Player 💫#ProKabaddi #BengaluruBulls #PKLPlayerAuction pic.twitter.com/IMUk9h9mwy
">.@BengaluruBulls are set to go #FullChargeMaadi with Neeraj, this season 🔋
— ProKabaddi (@ProKabaddi) August 7, 2023
Drop a ❤️ in the comments for this Elite Retained Player 💫#ProKabaddi #BengaluruBulls #PKLPlayerAuction pic.twitter.com/IMUk9h9mwy.@BengaluruBulls are set to go #FullChargeMaadi with Neeraj, this season 🔋
— ProKabaddi (@ProKabaddi) August 7, 2023
Drop a ❤️ in the comments for this Elite Retained Player 💫#ProKabaddi #BengaluruBulls #PKLPlayerAuction pic.twitter.com/IMUk9h9mwy
ಪ್ರೋ ಕಬಡ್ಡಿಗೆ ರಿಟೈನ್ಡ್ ಆಟಗಾರರ ಪಟ್ಟಿ ಹೀಗಿದೆ:
ಬೆಂಗಳೂರು ಬುಲ್ಸ್: ನೀರಜ್ ನರ್ವಾಲ್ (ERP), ಭರತ್ (RYP), ಸೌರಭ್ ನಂದಾಲ್ (RYP), ಅಮನ್ (ENYP) ಮತ್ತು ಯಶ್ ಹೂಡಾ (ENYP)
ಬೆಂಗಾಲ್ ವಾರಿಯರ್ಸ್ : ವೈಭಾವ್ ಭಾವುಸಾಹೇಬ್ ಗರ್ಜೆ (ENYP), ಆರ್.ಗುಹಾನ್ (ENYP) ಸುಯೋಗ್ ಬಬನ್ ಗಾಯ್ಕರ್ (ENYP) ಮತ್ತು ಪರ್ಶಾಂತ್ ಕುಮಾರ್ (ENYP)
ದಬಾಂಗ್ ಡೆಲ್ಲ: ಕೆ.ಸಿ ನವೀನ್ ಕುಮಾರ್ (RYP), ವಿಜಯ್ (ENYP), ಮಂಜೀತ್ (ENYP), ಆಶೀಶ್ ನರ್ವಾಲ್ (ENYP) ಮತ್ತು ಸೂರಜ್ ಪನ್ವಾರ್ (ENYP)
ಗುಜರಾತ್ ಜೈಂಟ್ಸ್: ಮಂಜು (ERP), ಸೋನು (ERP), ರಾಕೇಶ್ (RYP), ಪ್ರತೀಕ್ ದಹಿಯಾ (ENYP) ಮತ್ತು ರೋಹನ್ ಸಿಂಗ್ (ENYP)
ಹರಿಯಾಣ ಸ್ಟೀಲರ್ಸ್: ಕೆ.ಪ್ರಪಂಜನ್ (ERP), ವಿನಯ್ (RYP), ಜೈದೀಪ್ (RYP), ಮೋಹಿತ್ (RYP)
ಜೈಪುರ ಪಿಂಕ್ ಪ್ಯಾಂಥರ್ಸ್: ಸುನಿಲ್ ಕುಮಾರ್ (ERP), ಅಜಿತ್ ವಿ ಕುಮಾರ್ (ERP), ರೆಜಾ ಮಿರ್ಬಾಗೆರಿ (ERP), ಭವಾನಿ ರಜಪೂತ್ (ERP), ಅರ್ಜುನ್ ದೇಶ್ವಾಲ್ (ERP) ಮತ್ತು ಸಾಹುಲ್ ಕುಮಾರ್ (ERP)
ಪಾಟ್ನಾ ಪೈರೇಟ್ಸ್: ಸಚಿನ್ (ERP), ನೀರಜ್ ಕುಮಾರ್ (ERP), ಮನೀಶ್ (RYP), ತ್ಯಾಗರಾಜನ್ ಯುವರಾಜ್ (ENYP), ನವೀನ್ ಶರ್ಮಾ (ENYP), ರಂಜಿತ್ ವೆಂಕಟರಮಣ ನಾಯ್ಕ್ (ENYP) ಮತ್ತು ಅನುಜ್ ಕುಮಾರ್ (ENYP)
ಪುಣೇರಿ ಪಲ್ಟನ್: ಅಭಿನೇಶ್ ನಟರಾಜನ್ (ERP), ಗೌರವ್ ಖತ್ರಿ (ERP), ಸಂಕೇತ್ ಸಾವಂತ್ (RYP), ಪಂಕಜ್ ಮೋಹಿತೆ (RYP), ಅಸ್ಲಾಂ ಮುಸ್ತಫಾ ಇನಾಂದಾರ್ (RYP), ಮೋಹಿತ್ ಗೋಯತ್ (RYP), ಆಕಾಶ್ ಸಂತೋಷ್ ಶಿಂಧೆ (RYP), ಬಾದಲ್ ತಕ್ದೀರ್ ಸಿಂಗ್ (ENYP), ಆದಿತ್ಯ ತುಷಾರ್ ಶಿಂಧೆ (ENYP)
ತಮಿಳ್ ತಲೈವಾಸ್: ಅಜಿಂಕ್ಯ ಅಶೋಕ್ ಪವಾರ್ (ERP), ಸಾಗರ್ (RYP), ಹಿಮಾಂಶು (RYP), ಎಂ.ಅಭಿಷೇಕ್ (RYP), ಸಾಹಿಲ್ (RYP), ಮೋಹಿತ್ (RYP) ಮತ್ತು ಆಶಿಶ್ (RYP)
ತೆಲುಗು ಟೈಟಾನ್ಸ್: ಪರ್ವೇಶ್ ಭೈನ್ಸ್ವಾಲ್ (ERP), ರಜನೀಶ್ (RYP), ಮೋಹಿತ್ (ENYP), ವಿನಯ್ (ENYP) ಮತ್ತು ನಿತಿನ್ (ENYP)
ಯು ಮುಂಬಾ: ಸುರಿಂದರ್ ಸಿಂಗ್ (ERP), ಜೈ ಭಗವಾನ್ (ERP), ರಿಂಕು (ERP), ಹೈದರಾಲಿ ಇಕ್ರಮಿ (ERP), ಶಿವಂ (RYP), ಶಿವಾಂಶ್ ಠಾಕೂರ್ (ENYP), ಪ್ರಣಯ್ ವಿನಯ್ ರಾಣೆ (ENYP), ರೂಪೇಶ್ (ENYP) ಮತ್ತು ಸಚಿನ್ (ENYP)
ಯು.ಪಿ.ಯೋಧಾಸ್: ಪರ್ದೀಪ್ ನರ್ವಾಲ್ (ERP), ನಿತೇಶ್ ಕುಮಾರ್ (ERP), ಸಮಿತ್ (RYP), ಅಶು ಸಿಂಗ್ (RYP), ಸುರೇಂದರ್ ಗಿಲ್ (RYP), ಅನಿಲ್ ಕುಮಾರ್ (ENYP) ಮತ್ತು ಮಹಿಪಾಲ್ (ENYP)
ಇದನ್ನೂ ಓದಿ: Para Badminton: ಪ್ಯಾರಾ ಬ್ಯಾಡ್ಮಿಂಟನ್ ಕೂಟದಲ್ಲಿ ಭಗತ್-ಕದಮ್ ಜೋಡಿಗೆ ಚಿನ್ನ!