ETV Bharat / sports

Pro Kabaddi: ಇಂದು ಬೆಂಗಳೂರು - ಜೈಪುರ ನಡುವೆ ಹಣಾಹಣಿ.. ಅಗ್ರಸ್ಥಾನಕ್ಕಾಗಿ ಬುಲ್ಸ್​ ಫೈಟ್​ - ಬೆಂಗಳೂರು ಬುಲ್ಸ್

ಪ್ರೋ ಕಬಡ್ಡಿ ಟೂರ್ನಿಯಲ್ಲಿ ಇಂದು ಬೆಂಗಳೂರು ಬುಲ್ಸ್​ ಹಾಗೂ ಜೈಪುರ ಪಿಂಕ್​ ಪ್ಯಾಂಥರ್ಸ್​ ನಡುವೆ ಹಣಾಹಣಿ ನಡೆಯಲಿದೆ.

Bengaluru Bulls Look to Consolidate the Position of Points Table
Pro Kabaddi: ಇಂದು ಬೆಂಗಳೂರು-ಜೈಪುರ ನಡುವೆ ಹಣಾಹಣಿ
author img

By

Published : Jan 6, 2022, 8:01 AM IST

ಬೆಂಗಳೂರು: ಪ್ರೋ ಕಬಡ್ಡಿ ಟೂರ್ನಿಯ 8ನೇ ಆವೃತ್ತಿಯಲ್ಲಿ ನಾಲ್ಕು ಗೆಲುವುಗಳೊಂದಿಗೆ ಆತ್ಮವಿಶ್ವಾಸದಲ್ಲಿರುವ ಬೆಂಗಳೂರು ಬುಲ್ಸ್​ ಮತ್ತೆ ಅಗ್ರಸ್ಥಾನದ ಮೇಲೆ ಕಣ್ಣಿಟ್ಟಿದೆ. ಇಂದಿನ ಪಂದ್ಯದಲ್ಲಿ ಪವನ್​ ಶೆರಾವತ್​ ಪಡೆಯು ಜೈಪುರ ಪಿಂಕ್​ ಪ್ಯಾಂಥರ್ಸ್​ ವಿರುದ್ಧ ಕಾದಾಡಲಿದೆ.

ಬೆಂಗಳೂರು ತಾನಾಡಿದ ಮೊದಲ ಪಂದ್ಯದಲ್ಲಿ ಯು ಮುಂಬಾ ವಿರುದ್ಧ ಸೋತರೂ ಬಳಿಕ ಪುಟಿದೆದ್ದಿದೆ. ಈ ಹಿಂದಿನ ಕದನದಲ್ಲಿ ಪುಣೇರಿ ಪಲ್ಟನ್ಸ್​ ವಿರುದ್ಧ 40-29ರಿಂದ ಗೆದ್ದು ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿತ್ತು.

ಆದರೆ, ಬುಧವಾರ ತೆಲುಗು ಟೈಟಾನ್ಸ್​ ಜೊತೆ 1 ಅಂಕಗಳ ರೋಚಕ ಜಯ ಸಾಧಿಸಿದ ದಬಾಂಗ್​ ಡೆಲ್ಲಿ ತಂಡವು ಅಗ್ರಪಟ್ಟಕ್ಕೇರಿದೆ. ಸದ್ಯ ಡೆಲ್ಲಿ 26 ಅಂಕಗಳೊಂದಿಗೆ ಪಾಯಿಂಟ್ಟ್​​ ಪಟ್ಟಿಯಲ್ಲಿ ಮೊದಲಿಗಿದ್ದು, 23 ಅಂಕ ಹೊಂದಿರುವ ಬೆಂಗಳೂರು ಎರಡನೇ ಸ್ಥಾನದಲ್ಲಿದೆ.

ಇನ್ನೊಂದೆಡೆ ಕೇವಲ ಎರಡು ಜಯ ದಾಖಲಿಸಿರುವ ಜೈಪುರ ಪಿಂಕ್​ ಪ್ಯಾಂಥರ್ಸ್ ಅಂಕಪಟ್ಟಿಯಲ್ಲಿ 10ನೇ ಸ್ಥಾನದಲ್ಲಿದೆ. ಪ್ಯಾಂಥರ್ಸ್​ 3 ಪಂದ್ಯಗಳಲ್ಲಿ ಸೋಲು ಕಂಡಿದೆ. ಇಂದು ಸಂಜೆ 8.30ಕ್ಕೆ ನಡೆಯಲಿರುವ 2ನೇ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ ಹಾಗೂ ಜೈಪುರ ಪಿಂಕ್​ ಪ್ಯಾಂಥರ್ಸ್ ಕಣಕ್ಕಿಳಿಯಲಿವೆ. ಇದಕ್ಕೂ ಮುನ್ನ 7.30ಕ್ಕೆ ನಡೆಯುವ ಹಣಾಹಣಿಯಲ್ಲಿ ಪಾಟ್ನಾ ಪೈರಟ್ಸ್​ ಹಾಗೂ ತಮಿಳು ಥಲೈವಾಸ್​​ ನಡುವೆ ಹೋರಾಟ ನಡೆಯಲಿದೆ.

ಪ್ರೋ ಕಬಡ್ಡಿ ಟೂರ್ನಿಯ 6ನೇ ಆವೃತ್ತಿಯಲ್ಲಿ ಬೆಂಗಳೂರು ಬುಲ್ಸ್​ ಚಾಂಪಿಯನ್​ ಪಟ್ಟಕ್ಕೇರಿತ್ತು. ಈ ಹಿಂದಿನ ಆವೃತ್ತಿಯ ಕಿರೀಟವು ಬೆಂಗಾಲ್​ ವಾರಿಯರ್ಸ್​ ಪಾಲಾಗಿತ್ತು.

ಇದನ್ನೂ ಓದಿ: Ind Vs Sa: ದ.ಆಫ್ರಿಕಾ ಗೆಲುವಿಗೆ ಬೇಕು ಕೇವಲ 122ರನ್​​, ಕುತೂಹಲ ಘಟ್ಟದತ್ತ 2ನೇ ಟೆಸ್ಟ್​​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.