ETV Bharat / sports

'ಡ್ರಗ್ ಮುಕ್ತ ಭಾರತಕ್ಕೆ ಕೈ ಜೋಡಿಸಿ': ಏಷ್ಯನ್‌ ಗೇಮ್ಸ್‌ ಸಾಧಕರೊಂದಿಗೆ ಪ್ರಧಾನಿ ಮೋದಿ ಸಂವಾದ - ETV Bharath Kannada news

19ನೇ ಏಷ್ಯನ್​ ಗೇಮ್ಸ್​ನಲ್ಲಿ ಭಾಗವಹಿಸಿದ ಕ್ರೀಡಾಪಟುಗಳ ಜೊತೆ ಸಂವಾದ ನಡೆಸಿದ ಪ್ರಧಾನಿ ನರೇಂದ್ರ ಮೋದಿ, 'ಡ್ರಗ್ ಮುಕ್ತ ಭಾರತ' ಸಂದೇಶ ಸಾರುವಂತೆ ತಿಳಿಸಿದರು.

Prime Minister Narendra Modi
Prime Minister Narendra Modi
author img

By ETV Bharat Karnataka Team

Published : Oct 10, 2023, 9:19 PM IST

ಡ್ರಗ್ ಮುಕ್ತ ಭಾರತಕ್ಕೆ ಪ್ರಧಾನಿ ಮೋದಿ ಕರೆ

ನವದೆಹಲಿ: 19ನೇ ಏಷ್ಯನ್ ಗೇಮ್ಸ್‌ನಲ್ಲಿ 107 ಪದಕಗಳನ್ನು ಗೆಲ್ಲುವ ಮೂಲಕ ಅಸಾಧಾರಣ ಪ್ರದರ್ಶನ ನೀಡಿದ ಭಾರತೀಯ ಕ್ರೀಡಾಪಟುಗಳು 'ಡ್ರಗ್ ಮುಕ್ತ ಭಾರತ' ಸಂದೇಶ ಸಾರುವಂತೆ ಪ್ರಧಾನಿ ನರೇಂದ್ರ ಮೋದಿ ಮನವಿ ಮಾಡಿದ್ದಾರೆ. ನವದೆಹಲಿಯ ಮೇಜರ್ ಧ್ಯಾನಚಂದ್ ಸ್ಟೇಡಿಯಂನಲ್ಲಿ ಮಂಗಳವಾರ ಭಾರತೀಯ ಅಥ್ಲೀಟ್​​ಗಳನ್ನು ಭೇಟಿ ಮಾಡಿದ ಮೋದಿ, ಸಂವಾದ ನಡೆಸಿದರು.

ಕ್ರೀಡಾಪಟುಗಳ ಸಾಧನೆಯನ್ನು ಶ್ಲಾಘಿಸಿದ ಮೋದಿ, ಡ್ರಗ್ಸ್ ವಿರುದ್ಧ ರಾಷ್ಟ್ರ ನಡೆಸುತ್ತಿರುವ ಹೋರಾಟದಲ್ಲಿ ಕ್ರೀಡಾಪಟುಗಳು ದೊಡ್ಡ ಪಾತ್ರ ವಹಿಸಬಹುದಾಗಿದ್ದು, ಮಾದಕ ದ್ರವ್ಯ ಮುಕ್ತ ಭಾರತವನ್ನು ಉತ್ತೇಜಿಸುವಂತೆ ಕಿವಿಮಾತು ಹೇಳಿದರು.

"ನಮ್ಮ ದೇಶ ಪ್ರಸ್ತುತ ಡ್ರಗ್ಸ್ ವಿರುದ್ಧ ನಿರ್ಣಾಯಕ ಹೋರಾಟದಲ್ಲಿ ತೊಡಗಿದೆ. ಅದರ ದುಷ್ಟರಿಣಾಮಗಳ ಬಗ್ಗೆ ನಿಮಗೆ ತಿಳಿದಿದೆ. ಕ್ರೀಡಾಪಟುಗಳು ಅರಿವಿಲ್ಲದೆ ತೆಗೆದುಕೊಳ್ಳುವ ಡ್ರಗ್ಸ್‌ನಿಂದ ಅವರ ವೃತ್ತಿಜೀವನ ನಾಶವಾಗುತ್ತದೆ. ನಿಮ್ಮ ಮೂಲಕ (ಕ್ರೀಡಾಪಟುಗಳು) ಯುವಕರಲ್ಲಿ ಜಾಗೃತಿ ಮೂಡಿಸಲು ನಾನು ಬಯಸುತ್ತೇನೆ. ನೀವು ಮಾನಸಿಕ ಶಕ್ತಿ ಮತ್ತು ಬದ್ಧತೆಯ ಆರಾಧ್ಯ ದೈವವಾಗಿದ್ದೀರಿ. ನಿಮ್ಮ ದೈಹಿಕ ಶಕ್ತಿಯನ್ನು ಬಳಸಿಕೊಂಡು ನೀವು ಪದಕಗಳನ್ನು ಗೆಲ್ಲುತ್ತೀರಿ. ಮಾನಸಿಕ ಸಾಮರ್ಥ್ಯವು ದೊಡ್ಡ ಪಾತ್ರ ವಹಿಸುತ್ತದೆ. ಡ್ರಗ್ಸ್‌ನ ಋಣಾತ್ಮಕ ಪರಿಣಾಮಗಳ ಬಗ್ಗೆ ಯುವಕರಿಗೆ ಶಿಕ್ಷಣ ನೀಡುವಲ್ಲಿ ನೀವು ದೊಡ್ಡ ಬ್ರ್ಯಾಂಡ್ ಅಂಬಾಸಿಡರ್" ಎಂದು ಮೋದಿ ಎಂದರು.

ಮುಂಬರುವ ಪ್ಯಾರಿಸ್​ ಒಲಿಂಪಿಕ್ಸ್​ಗೆ ತಯಾರಿ ನಡೆಸಿ. ಪದಕ ಗೆಲ್ಲದವರು ನಿರಾಸೆ ಪಡಬಾರದು. ಸೋಲಿನಿಂದ ಕಲಿತ ಪಾಠದಿಂದ ಮುಂದಿನ ಸ್ಪರ್ಧೆಗೆ ಸಿದ್ಧತೆ ಮಾಡಿಕೊಳ್ಳಬೇಕು. ಮುಂದಿನ ಬಾರಿ ಈ ದಾಖಲೆಯನ್ನೂ ಮೀರಿ ಸಾಗಬೇಕಾಗಿದೆ ಎಂದರು. ಇದೇ ವೇಳೆ ಮಹಿಳಾ ಅಥ್ಲೀಟ್​ಗಳ ಸಾಧನೆಗೆ "ನಾರಿ ಶಕ್ತಿ" ಎಂದು ಕರೆದು ಮೆಚ್ಚುಗೆ ವ್ಯಕ್ತಪಡಿಸಿದರು. ಮುಂದಿನ ಪ್ಯಾರಾ ಏಷ್ಯನ್​ ಗೇಮ್ಸ್​ನ ಸ್ಪರ್ಧಿಗಳಿಗೂ ಶುಭಾಶಯ ತಿಳಿಸಿದರು.

ಭಾರತ ಏಷ್ಯನ್ ಗೇಮ್ಸ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ 100 ಪದಕಗಳ ಗಡಿ ದಾಟಿದೆ. 1965ರ ನಂತರ ಪದಕ ಪಟ್ಟಿಯಲ್ಲಿ ನಾಲ್ಕನೇ ಸ್ಥಾನ ಅಲಂಕರಿಸುವ ಮೂಲಕ ಐತಿಹಾಸಿಕ ಸಾಧನೆ ಮಾಡಿದೆ. 20ಕ್ಕೂ ಹೆಚ್ಚು ಚಿನ್ನ, 30 ಹೆಚ್ಚು ಬೆಳ್ಳಿ, 40 ಹೆಚ್ಚು ಕಂಚು ಸೇರಿದಂತೆ ಒಟ್ಟು 107 ಪದಕ ಸಾಧನೆ ಮಾಡಿದೆ.

ಇದನ್ನೂ ಓದಿ: ವಿಶ್ವಕಪ್‌ ಕ್ರಿಕೆಟ್: ಬಾಂಗ್ಲಾದೇಶ ವಿರುದ್ಧ 137 ರನ್‌ಗಳಿಂದ ಗೆದ್ದು ಬೀಗಿದ ಇಂಗ್ಲೆಂಡ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.