ETV Bharat / sports

ಏಷ್ಯನ್‌ ಗೇಮ್ಸ್‌ ಪದಕ ವಿಜೇತರೊಂದಿಗೆ ನಾಳೆ ಪ್ರಧಾನಿ ನರೇಂದ್ರ ಮೋದಿ ಸಂವಾದ - ETV Bharath Karnataka

ಶನಿವಾರ ತೆರೆ ಕಂಡ ಏಷ್ಯನ್​ ಗೇಮ್ಸ್​ನಲ್ಲಿ ಪದಕ ಗೆದ್ದ ಭಾರತೀಯ ಅಥ್ಲೀಟ್‌ಗಳೊಂದಿಗೆ ನಾಳೆ ಸಂಜೆ ಪ್ರಧಾನಿ ನರೇಂದ್ರ ಮೋದಿ ಸಂವಾದ ನಡೆಸಲಿದ್ದಾರೆ.

Prime Minister Narendra Modi
Prime Minister Narendra Modi
author img

By ETV Bharat Karnataka Team

Published : Oct 9, 2023, 5:28 PM IST

ನವದೆಹಲಿ: 19ನೇ ಏಷ್ಯನ್​ ಗೇಮ್ಸ್​ನಲ್ಲಿ ಭಾರತದ ಅಥ್ಲೀಟ್​​ಗಳು ಅತ್ಯುತ್ತಮ ಪ್ರದರ್ಶನ ನೀಡಿದ್ದು, ಇದೇ ಮೊದಲ ಬಾರಿಗೆ 'ಶತಕ ಪದಕ'ಗಳ ಬೇಟೆಯಾಡಿದ್ದಾರೆ. ಚೀನಾದ ಹ್ಯಾಂಗ್‌ಝೌನಲ್ಲಿ ನಡೆದ ಕ್ರೀಡಾಕೂಟದಲ್ಲಿ ಪದಕ ಜಯಿಸಿದ ಆಟಗಾರರೊಂದಿಗೆ ನಾಳೆ (ಮಂಗಳವಾರ) ಪ್ರಧಾನಿ ನರೇಂದ್ರ ಮೋದಿ ಮಾತುಕತೆ ನಡೆಸುವರು. ನವದೆಹಲಿಯ ಮೇಜರ್ ಧ್ಯಾನ್‌ಚಂದ್ ಕ್ರೀಡಾಂಗಣದಲ್ಲಿ ಸಂಜೆ 4:30ಕ್ಕೆ ಕಾರ್ಯಕ್ರಮ ನಡೆಯಲಿದೆ.

ಭಾರತೀಯ ತಂಡದ ಅಥ್ಲೀಟ್‌ಗಳು, ತರಬೇತುದಾರರು, ಭಾರತೀಯ ಒಲಿಂಪಿಕ್ ಅಸೋಸಿಯೇಷನ್‌ನ ಅಧಿಕಾರಿಗಳು, ರಾಷ್ಟ್ರೀಯ ಕ್ರೀಡಾ ಒಕ್ಕೂಟಗಳ ಪ್ರತಿನಿಧಿಗಳು ಮತ್ತು ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯದ ಅಧಿಕಾರಿಗಳು ಪಾಲ್ಗೊಳ್ಳಲಿದ್ದಾರೆ.

ಏಷ್ಯಾಡ್​ನಲ್ಲಿ ದಾಖಲೆ ಬರೆದ ಭಾರತೀಯರು: 'ಅಬ್​ ಕಿ ಬಾರ್​ 100 ಪಾರ್'​ (ಈ ಬಾರಿ 100 ಪದಕಗಳ ಗಡಿಯಾಚೆ) ಎಂಬ ಘೋಷ ವಾಕ್ಯದೊಂದಿದೆ ಹೊಸ ಹುಮ್ಮಸ್ಸಿನಲ್ಲಿ ಏಷ್ಯನ್​ ಗೇಮ್ಸ್​ಗೆ ಭಾರತೀಯ ಅಥ್ಲೀಟ್​ಗಳು ಪ್ರವೇಶಿಸಿದ್ದರು. ಅದರಂತೆ, ಸ್ಪರ್ಧಿಗಳು ಇತಿಹಾಸ ನಿರ್ಮಿಸಿದ್ದಾರೆ. 2018ರಲ್ಲಿ ಭಾರತ ಗೆದ್ದಿದ್ದ 70 ಪದಕದ ದಾಖಲೆ ಮೀರಿ ಶತಕ ಪದಕಗಳ ಗಡಿ ಮೀರಿದ ಸಾಧನೆ ತೋರಿದ್ದಾರೆ. 28 ಚಿನ್ನ, 38 ಬೆಳ್ಳಿ ಹಾಗೂ 41 ಕಂಚಿನ ಪದಕ ಸೇರಿದಂತೆ ಭಾರತ ಒಟ್ಟು 107 ಪದಕಗಳನ್ನು ಜಯಿಸಿದೆ.

ಈ ಮೂಲಕ, 2024ರ ಪ್ಯಾರಿಸ್ ಒಲಿಂಪಿಕ್ಸ್​ಗೂ ಮುನ್ನ ಏಷ್ಯನ್​ ಕ್ರೀಡಾಕೂಟದಲ್ಲಿ ದೇಶದ ಅಥ್ಲೀಟ್​ಗಳು ಹೊಸ ಭರವಸೆ ಮೂಡಿಸಿದ್ದಾರೆ. ಇದೇ ಮೊದಲ ಬಾರಿಗೆ ಭಾರತವು ಏಷ್ಯನ್​ ಗೇಮ್ಸ್​ನಲ್ಲಿ 20ಕ್ಕೂ ಹೆಚ್ಚು ಚಿನ್ನ, 25ಕ್ಕೂ ಹೆಚ್ಚು ಬೆಳ್ಳಿ ಮತ್ತು 40 ಹೆಚ್ಚು ಕಂಚಿನ ಪದಕಗಳನ್ನು ಬಾಚಿಕೊಂಡಿದೆ. ಬಿಸಿಸಿಐ ಚೊಚ್ಚಲ ಬಾರಿಗೆ ಕ್ರಿಕೆಟ್​ ತಂಡವನ್ನೂ ಏಷ್ಯನ್​ ಗೇಮ್ಸ್​ಗೆ ಕಳುಹಿಸಿತ್ತು. ಇದರ ಫಲವಾಗಿ ಪುರುಷರ ಮತ್ತು ವನಿತೆಯರ ತಂಡ ಚಿನ್ನ ಗೆದ್ದು ಸಂಭ್ರಮಿಸಿತು. ಬ್ಯಾಡ್ಮಿಂಟನ್​ನಲ್ಲಿ ಹೊಸ ದಾಖಲೆ ಬರೆಯುತ್ತಿರುವ ವಿಶ್ವದ ನಂ.1 ಶ್ರೇಯಾಂಕಿತ ಭಾರತದ ಜೋಡಿ ಸಾತ್ವಿಕ್​ ಸಾಯಿರಾಜ್​ ಮತ್ತು ಚಿರಾಗ್​ ಶೆಟ್ಟಿ ಚಿನ್ನ ಗೆದ್ದು ಸಂಭ್ರಮಿಸಿದರು.

ಪದಕ ಪಟ್ಟಿಯಲ್ಲಿ ಭಾರತಕ್ಕೆ 4ನೇ ಸ್ಥಾನ: ಏಷ್ಯನ್ ಗೇಮ್ಸ್‌ ಪದಕ ಪಟ್ಟಿಯಲ್ಲಿ ಭಾರತ 107 ಪದಕಗಳಿಂದ ನಾಲ್ಕನೇ ಸ್ಥಾನ ಅಲಂಕರಿಸಿದೆ. 1962ರ ಬಳಿಕ ಇದು ಭಾರತದ ಸಾರ್ವಕಾಲಿಕ ಶ್ರೇಷ್ಠ ಸಾಧನೆಯಾಗಿದೆ. 1951ರ ಏಷ್ಯನ್​ ಗೇಮ್ಸ್​ನ ಚೊಚ್ಚಲ ಆವೃತ್ತಿ ದೆಹಲಿಯಲ್ಲಿ ನಡೆದಿತ್ತು. ಆ ಸಂದರ್ಭದಲ್ಲಿ ಭಾರತ 2ನೇ ಸ್ಥಾನ ಪಡೆದಿತ್ತು. 1962ರಲ್ಲಿ 3ನೇ ಸ್ಥಾನ ಗಳಿಸಿತ್ತು. ಇದಾದ ನಂತರ 5ಕ್ಕಿಂತ ಮೇಲೆರಲು ಸಾಧ್ಯವಾಗಲಿಲ್ಲ. 2010ರಲ್ಲಿ 6, 2014 ಮತ್ತು 2018ರಲ್ಲಿ 8ನೇ ಸ್ಥಾನ ಪಡೆದುಕೊಂಡಿತ್ತು. ಚೀನಾ ಏಷ್ಯಾಡ್​ನಲ್ಲಿ ಪಾರಮ್ಯ ಮುಂದುವರೆಸಿದ್ದು, 201 ಚಿನ್ನದೊಂದಿಗೆ 383 ಪದಕ ಗೆದ್ದು ಪ್ರಥಮ ಸ್ಥಾನದಲ್ಲಿದೆ. ಜಪಾನ್​ 188 (52 ಚಿನ್ನ) ಮತ್ತು ಕೊರಿಯಾ 190 (42 ಚಿನ್ನ) ಪದಕಗಳಿಂದ ಕ್ರಮವಾಗಿ ಎರಡು, ಮೂರನೇ ಸ್ಥಾನದಲ್ಲಿವೆ.

ಇದನ್ನೂ ಓದಿ: Cricket World Cup 2023: ಚೇತರಿಕೆ ಕಾಣದ ಗಿಲ್​ ಆರೋಗ್ಯ.. ಪಾಕಿಸ್ತಾನ ಪಂದ್ಯಕ್ಕೆ ಮರಳುತ್ತಾರಾ ಶುಭಮನ್​​?

ETV Bharat Logo

Copyright © 2025 Ushodaya Enterprises Pvt. Ltd., All Rights Reserved.