ETV Bharat / sports

ಚೀನಾಗೆ 2022ರ ಚಳಿಗಾಲದ ಒಲಿಂಪಿಕ್ಸ್​ ಆಯೋಜನೆ ಹಕ್ಕು ರದ್ದುಗೊಳಿಸಲು ಐಒಸಿಗೆ ಮನವಿ - ಥಾಮಸ್ ಬ್ಯಾಚ್​

ದೇಶದ ವಿದೇಶಾಂಗ ಸಚಿವಾಲಯದ ವಕ್ತಾರ ಜಾವೋ ಲಿಜಿಯಾನ್ ಅವರು ಬೀಜಿಂಗ್‌ನಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದು, ಈ ಅರ್ಜಿಯು ಕ್ರೀಡೆಗಳನ್ನು ರಾಜಕೀಯಗೊಳಿಸಲು ಪ್ರಯತ್ನಿಸುತ್ತಿದೆ. ಇದನ್ನು ಚೀನಾ ಸಂಪೂರ್ಣ ವಿರೋಧಿಸುತ್ತದೆ..

2022ರ ಚಳಿಗಾಲದ ಒಲಿಂಪಿಕ್ಸ್
2022ರ ಚಳಿಗಾಲದ ಒಲಿಂಪಿಕ್ಸ್
author img

By

Published : Sep 15, 2020, 8:50 PM IST

ಹೈದರಾಬಾದ್ : 2022ರ ಚಳಿಗಾಲದ ಒಲಿಂಪಿಕ್ಸ್‌ಗೆ ಆತಿಥ್ಯವನ್ನು ಬೀಜಿಂಗ್​ಗೆ ನೀಡಿರುವುದನ್ನು ರದ್ದುಗೊಳಿಸುವಂತೆ ಕೋರಿ ವಿಶ್ವದಾದ್ಯಂತದ 160ಕ್ಕೂ ಹೆಚ್ಚು ಮಾನವ ಹಕ್ಕುಗಳ ಗುಂಪುಗಳು ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿಗೆ (ಐಒಸಿ) ಪತ್ರದ ಮೂಲಕ ಮನವಿ ಸಲ್ಲಿಸಿವೆ.

ಈ ಮಾನವ ಹಕ್ಕುಗಳ ಗುಂಪುಗಳು ದೇಶದ ಹಲವಾರು ಭಾಗಗಳಲ್ಲಿ ಮತ್ತು ಹಾಂಗ್‌ಕಾಂಗ್‌ನಲ್ಲಿ ಚೀನಾ ಸರ್ಕಾರ ವ್ಯಾಪಕವಾಗಿ ಮಾನವ ಹಕ್ಕುಗಳ ಉಲ್ಲಂಘನೆ ಮಾಡಿದೆ ಎಂದು ಆರೋಪಿಸಿವೆ.

ಐಒಸಿಯ ಅಧ್ಯಕ್ಷ ಥಾಮಸ್​ ಬಾಚ್​ ಅವರನ್ನು ಉದ್ದೇಶಿಸಿ ಸಲ್ಲಿಸಿರುವ ಅರ್ಜಿಯಲ್ಲಿ ಕ್ಸಿನ್‌ಜಿಯಾಂಗ್, ಟಿಬೆಟ್, ಹಾಂಗ್‌ಕಾಂಗ್ ಮತ್ತು ಮಂಗೋಲಿಯಾದಲ್ಲಿ ಚೀನಾದ ಕಮ್ಯುನಿಸ್ಟ್ ಪಕ್ಷದ ನೇತೃತ್ವದ ಸರ್ಕಾರದ ಚಳಿಗಾಲದ ಒಲಿಂಪಿಕ್ ಕ್ರೀಡಾಕೂಟದ ಆತಿಥ್ಯವಹಿಸಲು ಸೂಕ್ತವಲ್ಲ ಎಂದು ಪತ್ರದಲ್ಲಿ ಆರೋಪಿಸಲಾಗಿದೆ.

ಆದರೆ, ಇದಕ್ಕೆ ಪ್ರತಿಕ್ರಿಯಿಸಿ ಹೇಳಿಕೆ ನೀಡಿರುವ ಐಒಸಿ, ರಾಜಕೀಯ ವಿಷಯಗಳಿಗೆ ಗಮನ ಕೊಡಲು ಬಯಸುವುದಿಲ್ಲ ಎಂದು ಸ್ಪಷ್ಟಪಡಿಸಿದೆ. ಜೊತೆಗೆ ಒಲಿಂಪಿಕ್​ ಕ್ರೀಡಾಕೂಟ ನೀಡುವುದು ಆ ದೇಶದ ರಾಜಕೀಯ ರಚನೆ, ಸಾಮಾಜಿಕ ಸಂದರ್ಭಗಳ ಅಥವಾ ಮಾನವ ಹಕ್ಕುಗಳ ಮಾನದಂಡಗಳನ್ನು ಪರಿಗಣಿಸಿ ಅಲ್ಲ ಎಂದು ತಿಳಿಸಿದೆ.

ದೇಶದ ವಿದೇಶಾಂಗ ಸಚಿವಾಲಯದ ವಕ್ತಾರ ಜಾವೋ ಲಿಜಿಯಾನ್ ಅವರು ಬೀಜಿಂಗ್‌ನಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದು, ಈ ಅರ್ಜಿಯು ಕ್ರೀಡೆಗಳನ್ನು ರಾಜಕೀಯಗೊಳಿಸಲು ಪ್ರಯತ್ನಿಸುತ್ತಿದೆ. ಇದನ್ನು ಚೀನಾ ಸಂಪೂರ್ಣ ವಿರೋಧಿಸುತ್ತದೆ ಎಂದು ಹೇಳಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.