ಬೆಂಗಳೂರು: ವಿವೋ ಪ್ರೊ ಕಬಡ್ಡಿ ಪಂದ್ಯಾವಳಿಯ ಈ ಸೀಸನ್ನಲ್ಲಿ ಒಟ್ಟು 11 ಪಂದ್ಯಗಳನ್ನು ಆಡಿರುವ ತೆಲುಗು ಟೈಟಾನ್ಸ್ ಮೊದಲ ಬಾರಿಗೆ ಜಯಗಳಿಸಿದ್ದು, ಜೈಪುರ ಪಿಂಕ್ ಪ್ಯಾಂಥರ್ಸ್ ವಿರುದ್ಧ ಬುಧವಾರ ನಡೆದ ರೋಚಕ ಹಣಾಹಣಿಯಲ್ಲಿ ಗೆಲುವು ಸಾಧಿಸಿದೆ.
ಹಿಂದಿನ 8 ಪಂದ್ಯಗಳಲ್ಲಿ ಸೋಲು ಅನುಭವಿಸಿದ್ದ ತೆಲುಗು ಟೈಟಾನ್ಸ್, 2 ಪಂದ್ಯಗಳು ಟೈ ಆಗಿತ್ತು. ಈಗ ಜೈಪುರ ಪಿಂಕ್ ಪ್ಯಾಂಥರ್ಸ್ ವಿರುದ್ಧದ 11ನೇ ಪಂದ್ಯದಲ್ಲಿ 35- 34 ಪಾಯಿಂಟ್ಗಳ ಅಂತರ ಗೆಲುವು ದಾಖಲಿಸಿದೆ.
ತೆಲುಗು ಟೈಟಾನ್ಸ್‌ನ ಡಿಫೆಂಡರ್ ಆಗಿರುವ ಆದರ್ಶ್ ರೈಡ್ಗಳೊಂದಿಗೆ 9 ಅಂಕ ಮತ್ತು ರಜನೀಶ್ ದಲಾಲ್ 6 ರೈಡ್ಗಳಲ್ಲಿ ಒಂದು ಬೋನಸ್ ಸೇರಿದಂತೆ 7 ಅಂಕ ಪಡೆದು ತಂಡ ಅತಿ ಹೆಚ್ಚು ಅಂಕಗಳನ್ನು ಪಡೆಯಲು ನೆರವಾದರು.
ಇನ್ನು ಪಿಂಕ್ ಪ್ಯಾಂಥರ್ಸ್ ತಂಡದಲ್ಲಿ ಅರ್ಜುನ್ ದೇಶ್ವಾಲ್ 9 ರೈಡ್ಗಳಲ್ಲಿ 4 ಬೋನಸ್ ಸೇರಿದಂತೆ 13 ಪಾಯಿಂಟ್, ದೀಪಕ್ ನಿವಾಸ್ ಹೂಡಾ 4 ರೇಡ್ಗಳಲ್ಲಿ 4 ಬೋನಸ್ ಸೇರಿಂತೆ 8 ಪಾಯಿಂಟ್ಗಳನ್ನು ಪಡೆದಿದ್ದಾರೆ.
ಎರಡು ತಂಡಗಳಿಂದ ತಲಾ ಒಂದು ಸೂಪರ್ ರೈಡ್ ನಡೆದಿದ್ದು, ಪಿಂಕ್ ಪ್ಯಾಂಥರ್ಸ್ 1 ಮತ್ತು ತೆಲುಗು ಟೈಟಾನ್ಸ್ ಎರಡು ಉಚಿತ ಅಂಕಗಳನ್ನು ಪಡೆದುಕೊಂಡಿದ್ದವು. ಪಿಂಕ್ ಪ್ಯಾಂಥರ್ಸ್ 10 ಟ್ಯಾಕಲ್ ಪಾಯಿಂಟ್ ಪಡೆದರೆ, ತೆಲುಗು ಟೈಟಾನ್ಸ್ 7 ಟ್ಯಾಕಲ್ ಪಾಯಿಂಟ್ ಪಡೆದಿತ್ತು.
ಇನ್ನು ಪಾಯಿಂಟ್ಸ್ ಟೇಬಲ್ನಲ್ಲಿ 17 ಅಂಕಗಳನ್ನು ಪಡೆದ ತೆಲುಗು ಟೈಟಾನ್ಸ್ ಕೊನೆಯ ಸ್ಥಾನದಲ್ಲಿದ್ದರೆ, ಪಿಂಕ್ ಪ್ಯಾಂಥರ್ಸ್ 32 ಅಂಕಗಳನ್ನು ಪಡೆದು 5ನೇ ಸ್ಥಾನದಲ್ಲಿದೆ. ಇನ್ನುಳಿದಂತೆ ದಬಾಂಗ್ ದೆಹಲಿ, ಪಾಟ್ನಾ ಪೈರೇಟ್ಸ್, ಬೆಂಗಳೂರು ಬುಲ್ಸ್ ಕ್ರಮವಾಗಿ ಮೊದಲ ಮೂರು ಸ್ಥಾನಗಳನ್ನು ಹಂಚಿಕೊಂಡಿವೆ.
ಇದನ್ನೂ ಓದಿ: Ind vs SA 1st ODI: ಮಧ್ಯಮ ಕ್ರಮಾಂಕ ವೈಫಲ್ಯ; ದ.ಆಫ್ರಿಕಾ ವಿರುದ್ಧ ಭಾರತಕ್ಕೆ 31 ರನ್ಗಳ ಸೋಲು