ನವದೆಹಲಿ: 2023ರ ವಿಶ್ವ ಚಾಂಪಿಯನ್ ಮತ್ತು ಏಷ್ಯನ್ ಗೇಮ್ಸ್ ಚಿನ್ನದ ಪದಕ ವಿಜೇತೆ ಶೀತಲ್ ದೇವಿ ಅವರು ಶುಕ್ರವಾರ ವಿಶ್ವ ಆರ್ಚರಿ ಪ್ರಶಸ್ತಿಯನ್ನು ಗೆದ್ದಿದ್ದಾರೆ. ಅವರು ಮೊದಲ ಭಾರತೀಯ ಬಿಲ್ಲುಗಾರ್ತಿ ಎನಿಸಿಕೊಂಡಿದ್ದಾರೆ. ಜಮ್ಮು ಮತ್ತು ಕಾಶ್ಮೀರದಿಂದ ಬಂದಿರುವ ಶೀತಲ್ ದೇವಿ ಅವರು ಪ್ಯಾರಾ ಏಷ್ಯನ್ ಗೇಮ್ಸ್‌ನಲ್ಲಿ ಸಂಯುಕ್ತ ಮಹಿಳಾ ವಿಭಾಗ ಮತ್ತು ಪ್ಯಾರಾ ಆರ್ಚರಿ ವಿಶ್ವ ಚಾಂಪಿಯನ್‌ಶಿಪ್ ಅನ್ನು ಗೆಲ್ಲುವ ಅಸಾಮಾನ್ಯ ಪ್ರದರ್ಶನಕ್ಕಾಗಿ ವರ್ಷದ ಅತ್ಯುತ್ತಮ ಮಹಿಳಾ ಪ್ಯಾರಾ ಆರ್ಚರ್ ಎಂದು ಗೌರವಿಸಲ್ಪಟ್ಟಿದ್ದಾರೆ.
2023ರ ವರ್ಷದ ಕ್ರೀಡಾಪಟುಗಳ ಪ್ರಶಸ್ತಿ ವಿಜೇತರನ್ನು ನಿರ್ಧಾರ ಮಾಡಲು ಆರು ವಿಭಾಗಗಳಲ್ಲಿ ಆರ್ಚರಿ ಕ್ರೀಡೆಯನ್ನು ವರ್ಗೀಕರಿಸಲಾಗಿತ್ತು. ಸಾರ್ವಜನಿಕರು, ಸಾಂಸ್ಥೆಗಳು ಮತ್ತು ಪತ್ರಿಕಾ ಮತದಿಂದ ಪ್ರಶಸ್ತಿಯ ಬಗ್ಗೆ ನಿರ್ಧರಿಸಲಾಗಿದೆ. ಈ ಮತದಾನ ಪ್ರಕ್ರಿಯೆ ನವೆಂಬರ್ ಮಧ್ಯದಲ್ಲಿ ಪ್ರಾರಂಭವಾಗಿ ಒಂದು ತಿಂಗಳ ಕಾಲ ನಡೆಯಿತು. ಮತದಾನದ ಅಂತಿಮ ದಿನಕ್ಕೆ ಒಟ್ಟು 7,50,000 ಮತಗಳು ಚಲಾವಣೆಯಾಗಿದ್ದವು.
ಚೀನಾದ ಹ್ಯಾಂಗ್‌ಝೌನಲ್ಲಿ ನಡೆದ ಪ್ಯಾರಾ ಏಷ್ಯನ್ ಗೇಮ್ಸ್‌ನಲ್ಲಿ ಎರಡು ಚಿನ್ನ ಮತ್ತು ಒಂದು ಬೆಳ್ಳಿ ಒಳಗೊಂಡ ಮೂರು ಪ್ಯಾರಾ ಏಷ್ಯನ್ ಗೇಮ್ಸ್ ಪದಕಗಳನ್ನು ಗೆದ್ದುಕೊಂಡಿದ್ದರಿಂದ 16 ವರ್ಷದ ಶೀತಲ್ ದೇವಿ 2023ರಲ್ಲಿ ಅಸಾಧಾರಣ ಸಾಧನೆ ಮಾಡಿದರು. ಅವರು ಈ ವರ್ಷದ ಆರಂಭದಲ್ಲಿ ವಿಶ್ವ ಪ್ಯಾರಾ ಆರ್ಚರಿ ಶ್ರೇಯಾಂಕದಲ್ಲಿ ಅಗ್ರಸ್ಥಾನದಲ್ಲಿದ್ದರು ಮತ್ತು ಪ್ಯಾರಾ ಆರ್ಚರಿ ವಿಶ್ವ ಚಾಂಪಿಯನ್‌ಶಿಪ್‌ಗಳನ್ನು ಗೆದ್ದರು.
-
The BEST PARA ARCHERS of 2023!
— World Archery (@worldarchery) December 29, 2023 " class="align-text-top noRightClick twitterSection" data="
(Voted by you.)
OVERALL, BREAKTHROUGH and COACH awards will be announced during the Indoor Archery World Series Finals on February 3 in 👉 https://t.co/7yEqhbrYJM#ArcheryAwards #Archery pic.twitter.com/KUowMOwbb5
">The BEST PARA ARCHERS of 2023!
— World Archery (@worldarchery) December 29, 2023
(Voted by you.)
OVERALL, BREAKTHROUGH and COACH awards will be announced during the Indoor Archery World Series Finals on February 3 in 👉 https://t.co/7yEqhbrYJM#ArcheryAwards #Archery pic.twitter.com/KUowMOwbb5The BEST PARA ARCHERS of 2023!
— World Archery (@worldarchery) December 29, 2023
(Voted by you.)
OVERALL, BREAKTHROUGH and COACH awards will be announced during the Indoor Archery World Series Finals on February 3 in 👉 https://t.co/7yEqhbrYJM#ArcheryAwards #Archery pic.twitter.com/KUowMOwbb5
ಶೀತಲ್ ಅವರು ಜಮ್ಮು ಮತ್ತು ಕಾಶ್ಮೀರದ ಕಿಶ್ತ್ವಾರ್ ಜಿಲ್ಲೆಯ ಲೋಯ್ ಧಾರ್ ಎಂಬ ಹಳ್ಳಿಯಲ್ಲಿ ಬಡ ಕುಟುಂಬದಲ್ಲಿ ಜನಿಸಿದರು. ಆಕೆಯ ತಂದೆ ತಾಯಿ ಇಬ್ಬರು ಹೊಲದಲ್ಲಿ ಕೆಲಸ ಮಾಡುತ್ತಾರೆ. ಹುಟ್ಟಿನಿಂದಲೇ ಶೀತಲ್ ಫೋಕೊಮೆಲಿಯಾ ಎಂಬ ಕಾಯಿಲೆಯಿಂದ ಬಳಲುತ್ತಿದ್ದು, ಅವರಿಗೆ ಅಂಗಾಂಗಗಳು ವೃದ್ಧಿಯಾಗಲೇ ಇಲ್ಲ. ಆದರೂ ಛಲ ಬಿಡದ ಶೀತಲ್ ನೆಚ್ಚಿನ ಕ್ರೀಡೆಯನ್ನು ಯಶಸ್ವಿಯಾಗಿ ಒಲಿಸಿಕೊಂಡರಲ್ಲದೇ, ಸಾಧಕಿಯಾಗಿ ಹೊರಹೊಮ್ಮಿದ್ದಾರೆ.
ಅದಿತಿ, ಜ್ಯೋತಿಗೆ ಪ್ರಶಸ್ತಿ ನಿರೀಕ್ಷೆ: ವರ್ಷದ ಉದಯೋನ್ಮುಖ ಆಟಗಾರ, ವರ್ಷದ ಕೋಚ್ ಮತ್ತು ವರ್ಷದ ಕ್ರೀಡಾಪಟು ಪ್ರಶಸ್ತಿಯನ್ನು ಫೆಬ್ರವರಿ 3 ರಂದು ಕೊಡಲಾಗುತ್ತದೆ. ಇದರಲ್ಲಿ ಕಿರಿಯ ವಯಸ್ಸಿನಲ್ಲೇ ಸಾಧನೆ ಮಾಡಿದ ಅದಿತಿ ಸ್ವಾಮಿ ಮತ್ತು ಜ್ಯೋತಿ ಸುರೇಖಾ ವೆನ್ನಂ ಅವರ ಹೆಸರಿರುವ ನಿರೀಕ್ಷೆ ಇದೆ.
ಅದಿತಿ ಸ್ವಾಮಿ ಅವರು 17 ನೇ ವಯಸ್ಸಿನಲ್ಲಿ ಕಿರಿಯ ವಿಶ್ವ ಚಾಂಪಿಯನ್ ಆದರು ಮತ್ತು ಟೀಮ್ ಈವೆಂಟ್‌ನಲ್ಲಿ ಜ್ಯೋತಿ ವೆನ್ನಮ್ ಜೊತೆಗೆ ಚಿನ್ನ ಮತ್ತು ಏಷ್ಯನ್ ಗೇಮ್ಸ್ 2023 ರಲ್ಲಿ ವೈಯಕ್ತಿಕ ಸ್ಪರ್ಧೆಯಲ್ಲಿ ಬೆಳ್ಳಿ ಪದಕವನ್ನು ಗೆದ್ದು 2023ರಲ್ಲಿ ಅದ್ಭುತ ಸಾಧನೆ ಮಾಡಿದ್ದಾರೆ. ಜ್ಯೋತಿ ವೆನ್ನಂ ಭಾರತದ ಬಿಲ್ಲುಗಾರರ ತಂಡವನ್ನು ಮುನ್ನಡೆಸಿದರು ಮತ್ತು ಏಷ್ಯನ್ ಕ್ರೀಡಾಕೂಟದ ಆರ್ಚರಿ ಸ್ಪರ್ಧೆಯಲ್ಲಿ ಮೂರು ಚಿನ್ನದ ಪದಕ ಗೆದ್ದು ಇತಿಹಾಸವನ್ನು ಸೃಷ್ಟಿಸಿದ್ದರು.
ಇದನ್ನೂ ಓದಿ: ಐದು ವಿಕೆಟ್ ಕಿತ್ತ ದೀಪ್ತಿ: ಭಾರತಕ್ಕೆ 259 ರನ್ಗಳ ಗುರಿ