ETV Bharat / sports

ಒಲಿಂಪಿಕ್​​ನಲ್ಲಿ ಚಿನ್ನದ ಪದಕಕ್ಕೆ ಮುತ್ತಿಕ್ಕಿದ್ದ ಕ್ರೀಡಾಪಟು ಈಗ ಫುಡ್​ ಡೆಲಿವರಿ ಬಾಯ್​​! - ಫೆನ್ಸಿಂಗ್​ ಕ್ರೀಡೆ

ಲಿಮಾರ್ಡೋ ಅವರು ಫೆನ್ಸಿಂಗ್ ಕ್ರೀಡೆಯಲ್ಲಿ 2012ರ ಲಂಡನ್ ಒಲಿಂಪಿಕ್​ ಚಿನ್ನದ ಪದಕ ವಿಜೇತರಾಗಿದ್ದರು. ಕೊರೊನಾ ಸಂಕಷ್ಟದಿಂದ ಅವರು ಸಂಸ್ಥೆಯೊಂದರಲ್ಲಿ ಫುಡ್​​ ಡೆಲಿವರಿ ಬಾಯ್​ ಆಗಿ ಕೆಲಸ ಮಾಡುತ್ತಿದ್ದಾರೆ.

Olympic gold medallist turns food delivery boy to make ends meet
ಒಲಿಂಪಿಕ್​​ನಲ್ಲಿ ಚಿನ್ನದ ಪದಕ ವಿಜೇತ ಈಗ ಫುಡ್​ ಡೆಲಿವರಿ ಬಾಯ್
author img

By

Published : Nov 16, 2020, 1:33 PM IST

Updated : Nov 16, 2020, 1:44 PM IST

ಲೋಡ್ಜ್​​​ (ಪೋಲಾಂಡ್​​​​​): 2012ರ ಲಂಡನ್​ ಒಲಿಂಪಿಕ್​​ನ ಫೆನ್ಸಿಂಗ್​ ಕ್ರೀಡೆಯಲ್ಲಿ ಚಿನ್ನದ ಪದಕ ವಿಜೇತನಾಗಿದ್ದ ವೆನಿಜುವೆಲಾದ ಆಟಗಾರ, ಕೋವಿಡ್​ ಹೊಡೆತಕ್ಕೆ ಒಳಗಾಗಿ ಜೀವನ ರೂಪಿಸಿಕೊಳ್ಳಲು ಹೆಣಗಾಡುತ್ತಿದ್ದಾನೆ. ಹೀಗಾಗಿ, ಆತ ಊಬರ್​ ಈಟ್ಸ್​ನಲ್ಲಿ ಫುಡ್​ ಡೆಲಿವರಿ ಬಾಯ್​ ಆಗಿ ಕೆಲಸ ಮಾಡುತ್ತಿದ್ದಾರೆ.

35 ವರ್ಷದ ರುಬೆನ್​​​ ಲಿಮಾರ್ಡೋ ಅವರು ಫೆನ್ಸಿಂಗ್​ ಕ್ರೀಡೆಯಲ್ಲಿ ಚಿನ್ನ ಗೆದ್ದ ಪೋಲಾಂಡ್​ನ ಮೊದಲ ಆಟಗಾರ. ಒಲಿಂಪಿಕ್​​​ನಲ್ಲಿ ಫೆನ್ಸಿಂಗ್​ ಕ್ರೀಡಯಲ್ಲಿ ದಶಕಗಳ ಬಳಿಕ ಚಿನ್ನದ ಪದಕ ಗೆದ್ದ ಕ್ರೀಡಾಪಟು ಎಂಬ ಶ್ರೇಯ ಅವರಿಗೆ ದೊರೆತಿದೆ. ಬಾಕ್ಸರ್ ಫ್ರಾನ್ಸಿಸ್ಕೊ ​ರೊಡ್ರಿಗಸ್ ಅವರು ಗೋಲ್ಡ್​​ ಗೆದ್ದ 44 ವರ್ಷಗಳ ನಂತರ ಲಿಮಾರ್ಡೊ, ಎರಡನೇ ಚಿನ್ನದ ಪದಕ ವಿಜೇತ ಎನ್ನಲಾಗ್ತಿದೆ.

ಕ್ಯೂಬಾದ ರಾಮನ್ ಫಾನ್ಸ್ಟ್ ಅವರು 1904ರಲ್ಲಿ ಗೆದ್ದ ನಂತರ ಲ್ಯಾಟಿನ್ ಅಮೆರಿಕದಿಂದ ಫೆನ್ಸಿಂಗ್ ಕ್ರೀಡೆಯಲ್ಲಿ ಒಲಿಂಪಿಕ್ ಚಿನ್ನ ಗೆದ್ದವರು ರುಬೆನ್​​​ ಲಿಮಾರ್ಡೋ. ಅವರು ಮತ್ತೊಮ್ಮೆ ಬಂಗಾರದ ಪದಕ್ಕೆ ಮುತ್ತಿಕ್ಕಲು ಮುಂದಿನ ವರ್ಷ ಟೊಕಿಯೋದಲ್ಲಿ ಜರುಗಲಿರುವ ಒಲಿಂಪಿಕ್​ ಕ್ರೀಡಾಕೂಟದಲ್ಲೂ ಭಾಗವಹಿಸಲಿದ್ದಾರೆ. ಅದಕ್ಕಾಗಿ ಹೆಚ್ಚಿನ ತರಬೇತಿ ಕೂಡ ಪಡೆಯುತ್ತಿದ್ದಾರೆ.

ಆದರೆ, ಕಳೆದ ವಾರ ಅವರು ತಮ್ಮ ಟ್ವೀಟ್​ ಮೂಲಕ ಪ್ರಸ್ತುತ ಕೆಲಸದ ಸ್ವರೂಪ ಬಹಿರಂಗಪಡಿಸುವ ಮೂಲಕ ಎಲ್ಲರಿಗೂ ಆಶ್ಚರ್ಯವನ್ನುಂಟು ಮಾಡಿದ್ದಾರೆ. ಸಂಪಾದನೆ ಮಾಡಬೇಕು ಎಂದರೆ ನಿಮ್ಮ ದಾರಿಗೆ ಹೆಜ್ಜೆ ಇಡಿ. ಮತ್ತು ಇದು ಕೂಡ ಇತರರಂತೆಯೇ ಕೆಲಸ ಎಂದು ಅವರು ಸುದ್ದಿ ಸಂಸ್ಥೆಯೊಂದನ್ನು ಉಲ್ಲೇಖಿಸಿದ್ದಾರೆ.

ಮತ್ತೊಂದು ಆಶ್ಚರ್ಯದ ಸಂಗತಿ ಎಂದರೆ, ರುಬೆನ್​​ ಒಬ್ಬರೇ ಅಲ್ಲ, ಪೋಲಾಂಡ್​​ನ ಲೋಡ್ಜ್​​ ಪಟ್ಟಣದ 20 ರಾಷ್ಟ್ರೀಯ ತಂಡದ ಸದಸ್ಯರು ತಮ್ಮ ಉದ್ದೇಶಗಳನ್ನು ಈಡೇರಿಸಿಕೊಳ್ಳಲು ವಿವಿಧ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ನಾವೆಲ್ಲರೂ ಫುಡ್​​​ ಡೆಲಿವರಿಗಾರರು ಎಂದು ಲಿಮಾರ್ಡೊ ಹೇಳಿದ್ದಾರೆ.

Last Updated : Nov 16, 2020, 1:44 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.