ಫ್ಲೋರಿಡಾ: ಅಮೆರಿಕಾದ 100 ಮೀಟರ್ ಹರ್ಡಲ್ಸ್ ಒಲಿಂಪಿಕ್ಸ್ ಚಾಂಪಿಯನ್ ಬ್ರಿಯಾನ್ನ ಮೆಕ್ನೀಲ್ ಅವರನ್ನು ಡೋಪಿಂಗ್ ವಿರೋಧಿ ನಿಯಮಗಳ ಉಲ್ಲಂಘನೆ ಮಾಡಿದ ಕಾರಣಕ್ಕಾಗಿ ಅಥ್ಲೆಟಿಕ್ಸ್ ಇಂಟಿಗ್ರಿಟಿ ಯುನಿಟ್(AIU) 5 ವರ್ಷಗಳ ಕಾಲ ನಿಷೇಧವೇರಿದೆ.
ಬ್ರಿಯಾನ್ನ ಅವರ ವಿಶ್ವ ಅಥ್ಲೆಟಿಕ್ಸ್ನ ಡೋಪಿಂಗ್ ವಿರೋಧಿ ನಿಯಾಮವಳಿನ್ನು 2ನೇ ಬಾರಿ ಉಲ್ಲಂಘನೆ ಮಾಡಿರುವುದು ಸಾಬೀತಾಗಿರುವುದರಿಂದ ಅವರ ವಿರುದ್ಧ ಶಿಸ್ತು ನ್ಯಾಯಮಂಡಳಿ 15 ಆಗಸ್ಟ್ 2020ರಿಂದ 5 ವರ್ಷಗಳವರೆಗೆ ನಿಷೇಧಿಸಲಾಗಿದೆ ಎಂದು ಅಥ್ಲೆಟಿಕ್ಸ್ ಸಮಗ್ರತೆ ಘಟಕ(Athletics Integrity Unit) ಶುಕ್ರವಾರ ತಿಳಿಸಿದೆ.
ಆದರೆ ಬ್ರಿಯಾನ್ನ ಎಐಯು ನಿರ್ಧಾರದ ವಿರುದ್ದ ಕ್ರೀಡಾ ಮಧ್ಯಸ್ಥಿಕೆ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಿದ್ದಾರೆ. ಟೋಕಿಯೋ ಒಲಿಂಪಿಕ್ಸ್ ಆರಂಭಕ್ಕೂ ಮುನ್ನ ಅವರ ಮನವಿಯನ್ನು ಸಿಎಎಸ್ ಆಲಿಸಲಿದೆ.
ಟೋಕಿಯೋ ಒಲಿಂಪಿಕ್ಸ್ ಜುಲೈ 23ರಂದು ಆರಂಭವಾಗಲಿದೆ. ಕಳೆದ ವರ್ಷ ಕೊರೊನಾ ಕಾರಣದಿಂದ ಒಂದು ಮುಂದೂಡಲಾಗಿತ್ತು.
ಇದನ್ನು ಓದಿ:ಮತ್ತೆ ಮೂಡಲಿದೆ ಜಯ'ಸೂರ್ಯ': ಕೋಚ್ ಆಗಿ ಕ್ರಿಕೆಟ್ ಲೋಕಕ್ಕೆ ಆಗಮಿಸಿದ ಶ್ರೀಲಂಕಾ ದಿಗ್ಗಜ