ETV Bharat / sports

ಒಲಿಂಪಿಯನ್ ಕುಸ್ತಿಪಟು ಸುಶೀಲ್ ಕುಮಾರ್‌ಗೆ ಪಿತೃ ವಿಯೋಗ: ಜಾಮೀನು ಪಡೆದು ಅಂತ್ಯಕ್ರಿಯೆಯಲ್ಲಿ ಭಾಗಿ - ETV Bharath Kannada news

ಒಲಿಂಪಿಯನ್ ಕುಸ್ತಿಪಟು ಸುಶೀಲ್ ಕುಮಾರ್ ಅವರಿಗೆ ದೆಹಲಿ ನ್ಯಾಯಾಲಯ ನಾಲ್ಕು ದಿನಗಳ ಮಧ್ಯಂತರ ಜಾಮೀನು ನೀಡಿದೆ.

olympian sushil kumar
ಸುಶೀಲ್ ಕುಮಾರ್
author img

By

Published : Mar 7, 2023, 12:32 PM IST

ನವದೆಹಲಿ: ಜೂನಿಯರ್ ರಾಷ್ಟ್ರೀಯ ಕುಸ್ತಿ ಚಾಂಪಿಯನ್ ಸಾಗರ್ ಧನಕರ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಹಾಗು ಒಲಿಂಪಿಕ್ ಪದಕ ವಿಜೇತ ಕುಸ್ತಿಪಟು ಸುಶೀಲ್ ಕುಮಾರ್‌ಗೆ ಮಾನವೀಯತೆಯ ಆಧಾರದ ಮೇಲೆ ತನ್ನ ತಂದೆಯ ಅಂತ್ಯಕ್ರಿಯೆಯನ್ನು ನೆರವೇರಿಸಲು ದೆಹಲಿ ನ್ಯಾಯಾಲಯ ಸೋಮವಾರ ನಾಲ್ಕು ದಿನಗಳ ಮಧ್ಯಂತರ ಜಾಮೀನು ಮಂಜೂರು ಮಾಡಿದೆ. ಜೂನ್ 2, 2021 ರಿಂದ ಸುಶೀಲ್ ಕುಮಾರ್ ನ್ಯಾಯಾಂಗ ಬಂಧನದಲ್ಲಿದ್ದಾರೆ.

"ಆರೋಪಿಯ ತಂದೆ ನಿಧನರಾಗಿದ್ದಾರೆ. ಅವರ ಅಂತ್ಯಕ್ರಿಯೆ ಅಂಶವನ್ನು ಗಮನದಲ್ಲಿಟ್ಟುಕೊಂಡು ಮಾನವೀಯ ಆಧಾರದ ಮೇಲೆ ಆರೋಪಿಯನ್ನು ಮಾರ್ಚ್ 6 ರಿಂದ ಮಾರ್ಚ್ 9 ರವರೆಗೆ ವೈಯಕ್ತಿಕ ಬಾಂಡ್‌ಗಳ ಮೇರೆಗೆ ಮಧ್ಯಂತರ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗುತ್ತದೆ" ಎಂದು ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಶಿವಾಜಿ ಆನಂದ್ ಅರ್ಜಿ ವಿಚಾರಣೆಯ ವೇಳೆ ಹೇಳಿದ್ದಾರೆ. ಕೊಲೆ ಪ್ರಕರಣದ ಸಾಕ್ಷಿಗಳಿಗೆ ಬೆದರಿಕೆಯ ಸಾಧ್ಯತೆಯನ್ನು ಗಮನದಲ್ಲಿಟ್ಟುಕೊಂಡು ಮತ್ತು ಸುಶೀಲ್​ ಕುಮಾರ್‌ ಸುರಕ್ಷತೆ ಮತ್ತು ಭದ್ರತೆ ಪರಿಗಣಿಸಿ ಕನಿಷ್ಠ ಇಬ್ಬರು ಭದ್ರತಾ ಸಿಬ್ಬಂದಿ ಅವರೊಂದಿಗೆ 24 ಗಂಟೆಗಳ ಕಾಲವಧಿಯೂ ಇರಬೇಕು ಎಂದು ಕೋರ್ಟ್‌ ಆದೇಶಿಸಿದೆ.

ಅರ್ಜಿದಾರರ ಕಣ್ಗಾವಲು ಮತ್ತು ಭದ್ರತೆಗಾಗಿ ಭದ್ರತಾ ಸಿಬ್ಬಂದಿ ಅಥವಾ ಪೊಲೀಸರ ನಿಯೋಜನೆಯ ಸಂಪೂರ್ಣ ವೆಚ್ಚವನ್ನು ಅವರ ಕುಟುಂಬ ಸದಸ್ಯರೇ ಭರಿಸಬೇಕು. ಕಾರಾಗೃಹದ ನಿಯಮಗಳ ಪ್ರಕಾರ ಈ ಮೊತ್ತವನ್ನು ಮುಂಗಡವಾಗಿ ಸಂಬಂಧಪಟ್ಟ ಜೈಲು ಅಧೀಕ್ಷಕರಿಗೆ ಠೇವಣಿ ಇಡಬೇಕು ಎಂದು ಕೋರ್ಟ್ ಹೇಳಿದೆ. ಮಧ್ಯಂತರ ಜಾಮೀನು ಅವಧಿ ಮುಗಿದ ನಂತರ ಅಂದರೆ ಮಾರ್ಚ್ 10 ರಂದು ಸಂಬಂಧಪಟ್ಟ ಜೈಲು ಸೂಪರಿಂಟೆಂಡೆಂಟ್ ಮುಂದೆ ಶರಣಾಗುವಂತೆ ಅರ್ಜಿದಾರರಿಗೆ ಸೂಚಿಸಲಾಗಿದೆ.

ಜಾಮೀನಿನಲ್ಲಿ ಕೆಲವು ಷರತ್ತುಗಳನ್ನು ನ್ಯಾಯಾಲಯ ವಿಧಿಸಿದ್ದು ಅವುಗಳನ್ನು ಮೀರಿದ್ದು ತಿಳಿದು ಬಂದಲ್ಲಿ ಜಾಮೀನು ರದ್ದಾಗುತ್ತದೆ ಎಂದು ಎಚ್ಚರಿಕೆ ಕೊಟ್ಟಿದೆ. ಸುಶೀಲ್ ಕುಮಾರ್ ಪ್ರಾಸಿಕ್ಯೂಷನ್ ಸಾಕ್ಷಿಗಳಿಗೆ ಬೆದರಿಕೆ ಹಾಕುವಂತಿಲ್ಲ. ಸಾಕ್ಷ್ಯವನ್ನು ಹಾಳುಮಾಡುವುದು ಅಥವಾ ಯಾವುದೇ ಅಪರಾಧದಲ್ಲಿ ಪಾಲ್ಗೊಳ್ಳುವುದು ಮಾಡುವಂತಿಲ್ಲ. ತನಿಖಾಧಿಕಾರಿ (IO)ಗೆ ಅಗತ್ಯವಿರುವಾಗ ಅವರ ಫೋನ್‌ಗೆ ಲೈವ್ ಸ್ಥಳ ಹಂಚಿಕೊಳ್ಳಬೇಕು ಎಂದು ಮಧ್ಯಂತರ ಜಾಮೀನು ನೀಡಿ ಕೋರ್ಟ್‌ ಷರತ್ತು ವಿಧಿಸಿದೆ.

ವಿಚಾರಣೆ ವೇಳೆ ಸುಶೀಲ್ ಕುಮಾರ್ ಪರ ವಕೀಲರು, ಸೋಮವಾರ ಮಧ್ಯಾಹ್ನ ತಂದೆಯ ಅಂತ್ಯಸಂಸ್ಕಾರದಲ್ಲಿ ಹಿರಿಯ ಮಗನಾಗಿ ಅರ್ಜಿದಾರರ ಉಪಸ್ಥಿತಿಯ ಅಗತ್ಯವಿದೆ. ಮಂಗಳವಾರ ಮತ್ತು ಬುಧವಾರ ಹಿಂದೂ ಧರ್ಮದಲ್ಲಿ ಅಶುಭ ದಿನವಾಗಿರುವುದರಿಂದ ಚಿತಾಭಸ್ಮವನ್ನು ಮಾರ್ಚ್ 9 ರಂದು ಮಾತ್ರ ವಿಸರ್ಜಿಸಲಾಗುವುದು ಎಂದು ತಿಳಿಸಿ ಮಧ್ಯಂತರ ಜಾಮೀನು ಕೋರಿದ್ದರು. ಸುಶೀಲ್​ ಕುಮಾರ್ ಅವರ ತಂದೆ ಭಾನುವಾರ ರಾತ್ರಿ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

ಸುಶೀಲ್​ ಕುಮಾರ್​ ಪ್ರಕರಣವೇನು?: 2021 ರ ಮೇ 4 ರಂದು ನಗರದ ಛತ್ರಸಲ್ ಸ್ಟೇಡಿಯಂನ ಪಾರ್ಕಿಂಗ್ ಸ್ಥಳದಲ್ಲಿ ಮಾಜಿ ಜೂನಿಯರ್ ರಾಷ್ಟ್ರೀಯ ಕುಸ್ತಿ ಚಾಂಪಿಯನ್ ಸಾಗರ್ ಧನಕರ್ ಮತ್ತು ಅವರ ಸ್ನೇಹಿತರಾದ ಜೈ ಭಗವಾನ್ ಮತ್ತು ಭಗತ್ ಅವರ ಮೇಲೆ ಆಸ್ತಿ ವಿವಾದಕ್ಕಾಗಿ ಸುಶೀಲ್​ ಕುಮಾರ್​ ಹಲ್ಲೆ ಮಾಡಿದ್ದರು. ಗಂಭೀರವಾಗಿ ಗಾಯಗೊಂಡ ಧನಕರ್ ಸಾವನ್ನಪ್ಪಿದ್ದರು. ಪ್ರಕರಣ ಸಂಬಂಧ ಸುಶೀಲ್​ ಕುಮಾರ್​ ಮತ್ತು ಇತರ 17 ಜನರ ವಿರುದ್ಧ ಕೊಲೆ ಮತ್ತು ಕ್ರಿಮಿನಲ್ ಕೇಸ್​ ದಾಖಲಾಗಿತ್ತು.

ಇದನ್ನೂ ಓದಿ: ಮಾಡಾಳ್ ವಿರೂಪಾಕ್ಷಪ್ಪ ಪ್ರಕರಣ​: ಇಬ್ಬರು ತನಿಖಾಧಿಕಾರಿಗಳ ಬದಲಾವಣೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.