ಟೋಕಿಯೋ: ಕೋವಿಡ್ 19 ಸಾಂಕ್ರಾಮಿಕ ಭೀತಿಯಿಂದ 2020ರಲ್ಲಿ ನಡೆಯಬೇಕಿದ್ದ ಒಲಿಂಪಿಕ್ಸ್ ಕ್ರೀಡಾ ಕೂಟ 2021ಕ್ಕೆ ಮೂಂದೂಡಲ್ಪಟ್ಟಿದೆ. ಪರಿಣಾಮ ಕ್ರೀಡಾಕೂಟದ ಖರ್ಚಿನಲ್ಲಿ ಶೇ.22 ರಷ್ಟು ಹೆಚ್ಚಾಗಿದೆ ಎಂದು ಸ್ಥಳೀಯ ಸಂಘಟಕರ ಸಮಿತಿ ತಿಳಿಸಿದೆ.
ಕಳೆದ ಬಜೆಟ್ ಪ್ರಕಾರ ಒಲಿಂಪಿಕ್ಗೆ 12.6 ಬಿಲಿಯನ್ ಯುಎಸ್ ಡಾಲರ್ ( ಸುಮಾರು 93 ಸಾವಿರ ಕೋಟಿ) ಮೊತ್ತವನ್ನು ನಿಗದಿ ಮಾಡಲಾಗಿತ್ತು. ಆದರೆ, ಇದೀಗ ಹೊಸ ಬಜೆಟ್ ಬಿಡುಗಡೆ ಮಾಡಿದ್ದು, ಶೇ.22ರಷ್ಟು ಏರಿಕೆಯಾಗಿದೆ. ಆಯೋಕರು ನೀಡಿರುವ ಹೇಳಿಕೆಯಂತೆ 2021ರ ಟೋಕಿಯೋ ಒಲಿಂಪಿಕ್ಸ್ ನ ಖರ್ಚು 15.4 ಬಿಲಿಯನ್ ಯುಎಸ್ ಡಾಲರ್ ಆಗಲಿದೆ ಎಂದು ತಿಳಿದು ಬಂದಿದೆ.
-
The creator of the #Tokyo2020 Games emblem, Tokolo Asao, designed the posters of the upcoming Olympic and Paralympic Games with just a pencil, set square, and compass. ✏️
— Olympics (@Olympics) December 22, 2020 " class="align-text-top noRightClick twitterSection" data="
Find out the message behind it 👉 https://t.co/8DmUks5ggo
📸: Via @Tokyo2020 #Tokyo2020Tuesday pic.twitter.com/gfOIDP57CD
">The creator of the #Tokyo2020 Games emblem, Tokolo Asao, designed the posters of the upcoming Olympic and Paralympic Games with just a pencil, set square, and compass. ✏️
— Olympics (@Olympics) December 22, 2020
Find out the message behind it 👉 https://t.co/8DmUks5ggo
📸: Via @Tokyo2020 #Tokyo2020Tuesday pic.twitter.com/gfOIDP57CDThe creator of the #Tokyo2020 Games emblem, Tokolo Asao, designed the posters of the upcoming Olympic and Paralympic Games with just a pencil, set square, and compass. ✏️
— Olympics (@Olympics) December 22, 2020
Find out the message behind it 👉 https://t.co/8DmUks5ggo
📸: Via @Tokyo2020 #Tokyo2020Tuesday pic.twitter.com/gfOIDP57CD
ಕೋವಿಡ್ 19 ಸಾಂಕ್ರಾಮಿಕ ರೋಗವನ್ನು ಎದುರಿಸಲು ಮತ್ತು ಕ್ರಮಗಳನ್ನು ಕೈಗೊಳ್ಳಲು ಹೆಚ್ಚುವರಿ ವೆಚ್ಚ ಬರಲಿದೆ. ಹಾಗಾಗಿ ಒಂದು ವರ್ಷ ವಿಳಂಬವಾಗಿರುವ ಕ್ರೀಡಾಕೂಟದ ವೆಚ್ಚಕ್ಕೆ ಹೆಚ್ಚುವರಿಯಾಗಿ 2.8 ಬಿಲಿಯನ್ ಡಾಲರ್ ಸೇರಿಸಿದೆ ಎಂದು ಆಯೋಜಕರು ತಿಳಿಸಿದ್ದಾರೆ.
ಒಲಿಂಪಿಕ್ಸ್ ಜುಲೈ 23 ರಂದ ಆರಂಭವಾಗಲಿದೆ. ಇದರ ನಂತರ ಪ್ಯಾರಾಲಿಂಪಿಕ್ಸ್ ಆಗಸ್ಟ್ 24 ರಂದು ಆರಂಭಗೊಳ್ಳಲಿದೆ. ಕ್ರೀಡಾಕೂಟದಲ್ಲಿ 11,000 ಕ್ರೀಡಾಪಟುಗಳು ಪಾಲ್ಗೊಳ್ಳಲಿದ್ದು, ಈಗಾಗಲೇ ಶೇ.57ರಷ್ಟು ಮಂದಿ ಅರ್ಹತೆ ಪಡೆದಿದ್ದಾರೆ.