ETV Bharat / sports

ಹಾಕಿ ವಿಶ್ವಕಪ್​ ಗೆದ್ದರೆ ಭಾರತದ ಆಟಗಾರರಿಗೆ ತಲಾ 1 ಕೋಟಿ ನಗದು ಬಹುಮಾನ: ನವೀನ್ ಪಟ್ನಾಯಕ್ ಘೋಷಣೆ

author img

By

Published : Jan 5, 2023, 7:33 PM IST

ಒಡಿಶಾದಲ್ಲಿ ಜನವರಿ 13ರಿಂದ ಹಾಕಿ ವಿಶ್ವಕಪ್​ ಟೂರ್ನಿ ಆರಂಭ - ವಿಶ್ವಕಪ್ ಗೆದ್ದರೆ ಭಾರತ ತಂಡದ ಪ್ರತಿ ಸದಸ್ಯರಿಗೆ 1 ಕೋಟಿ ರೂಪಾಯಿ ನಗದು ಬಹುಮಾನ - ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಘೋಷಣೆ

odisha-cm-announces-rs-1-crore-cash-for-each-player-if-team-india-lifts-hockey-world-cup
ಹಾಕಿ ವಿಶ್ವಕಪ್​ ಗೆದ್ದರೆ ಭಾರತದ ಆಟಗಾರರಿಗೆ ತಲಾ 1 ಕೋಟಿ ನಗದು ಬಹುಮಾನ: ನವೀನ್ ಪಟ್ನಾಯಕ್ ಘೋಷಣೆ

ಭುವನೇಶ್ವರ (ಒಡಿಶಾ): ಹಾಕಿ ವಿಶ್ವಕಪ್​ ಟೂರ್ನಿಗೆ ಒಡಿಶಾ ಸಜ್ಜಾಗುತ್ತಿದೆ. ಭುವನೇಶ್ವರ ಮತ್ತು ರೂರ್ಕೆಲಾದಲ್ಲಿ ಜನವರಿ 13ರಿಂದ 19ರವರೆಗೆ ಹಾಕಿ 'ಹಬ್ಬ' ನಡೆಯಲಿದ್ದು, ಒಟ್ಟಾರೆ 16 ರಾಷ್ಟ್ರಗಳು ವಿಶ್ವ ಚಾಂಪಿಯನ್​ ಪಟ್ಟಕ್ಕಾಗಿ ಸೆಣಸಲಿವೆ. ಇದರ ನಡುವೆ ಹಾಕಿ ವಿಶ್ವಕಪ್​ನ ಆತಿಥ್ಯ ವಹಿಸಿರುವ ಒಡಿಶಾ ಸರ್ಕಾರ ಭಾರತ ತಂಡದ ಆಟಗಾರರಿಗೆ ಭಾರಿ ಮೊತ್ತದ ಬಹುಮಾನ ಘೋಷಿಸಿದೆ. 2023ರ ಹಾಕಿ ವಿಶ್ವಕಪ್ (Hockey World Cup 2023) ಗೆದ್ದರೆ ತಂಡದ ಪ್ರತಿ ಸದಸ್ಯರಿಗೆ 1 ಕೋಟಿ ರೂಪಾಯಿ ನಗದು ಬಹುಮಾನ ನೀಡುವುದಾಗಿ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಪ್ರಕಟಿಸಿದ್ದಾರೆ.

ಭಾರತದ ಪುರುಷರ ಹಾಕಿ ತಂಡದೊಂದಿಗೆ ಒಡಿಶಾ ಸಿಎಂ ನವೀನ್ ಪಟ್ನಾಯಕ್ ಸಂವಾದ ನಡೆಸಿದರು

ರೂರ್ಕೆಲಾದ ಬಿರ್ಸಾ ಮುಂಡಾ ಹಾಕಿ ಸ್ಟೇಡಿಯಂ ಕಾಂಪ್ಲೆಕ್ಸ್‌ನಲ್ಲಿ ಇಂದು ವಿಶ್ವಕಪ್ ಗ್ರಾಮ (World Cup Village)ವನ್ನು ಸಿಎಂ ನವೀನ್​ ಪಟ್ನಾಯನ್​ ಉದ್ಘಾಟಿಸಿದರು. ವಿಶ್ವಕಪ್ ಗ್ರಾಮವನ್ನು ಕೇವಲ ಒಂಬತ್ತು ತಿಂಗಳೊಳಗೆ ಅಭಿವೃದ್ಧಿಪಡಿಸಲಾಗಿದೆ. ವಿಶ್ವ ದರ್ಜೆಯ ಎಲ್ಲ ಸೌಕರ್ಯಗಳೊಂದಿಗೆ 225 ಕೊಠಡಿಗಳನ್ನು ನಿರ್ಮಿಸಲಾಗಿದೆ. ಇದರಲ್ಲಿ ಹಾಕಿ ವಿಶ್ವಕಪ್ ಟೂರ್ನಿಗೆ ಆಗಮಿಸುವ 16 ತಂಡಗಳ ಅಂತಾರಾಷ್ಟ್ರೀಯ ಆಟಗಾರರು ಮತ್ತು ಅಧಿಕಾರಿಗಳು ತಂಗಲಿದ್ದಾರೆ.

ತಲಾ 1 ಕೋಟಿ ರೂಪಾಯಿ ಬಹುಮಾನ: ಈ ವಿಶ್ವಕಪ್ ಗ್ರಾಮ ಉದ್ಘಾಟನೆ ಸಂದರ್ಭದಲ್ಲಿ ಸಿಎಂ ಪಟ್ನಾಯನ್​ ಭಾರತದ ಪುರುಷರ ಹಾಕಿ ತಂಡದೊಂದಿಗೆ ಸಂವಾದ ನಡೆಸಿದರು. ತವರು ನೆಲದಲ್ಲಿ ನಡೆಯುತ್ತಿರುವ ಈ ಬಾರಿ ವಿಶ್ವಕಪ್​ ಎತ್ತಿ ಹಿಡಿದರೆ ತಂಡದ ಪ್ರತಿಯೊಬ್ಬ ಆಟಗಾರರಿಗೂ ತಲಾ 1 ಕೋಟಿ ರೂಪಾಯಿ ಬಹುಮಾನ ನೀಡುವುದಾಗಿ ಘೋಷಿಸಿದರು. ಜೊತೆಗೆ ಇಡೀ ತಂಡಕ್ಕೆ ಶುಭ ಹಾರೈಸಿದ ಅವರು, ಟೀಂ ಇಂಡಿಯಾವು ಚಾಂಪಿಯನ್ ಆಗಿ ಹೊರಹೊಮ್ಮುತ್ತದೆ ಎಂದೂ ವಿಶ್ವಾಸ ವ್ಯಕ್ತಪಡಿಸಿದರು.

ಇದೇ ವೇಳೆ, ಒಡಿಶಾ ಸರ್ಕಾರವನ್ನು ಹಾಕಿ ಆಟಗಾರರು ಶ್ಲಾಘಿಸಿದರು. ರಾಷ್ಟ್ರದ ಆಟಗಾರರಿಗಾಗಿ ಹಾಕಿಗೆ ಉಪಯುಕ್ತವಾದ ಸ್ಟೇಡಿಯಂ ಅಭಿವೃದ್ಧಿಪಡಿಸಿದ್ದಕ್ಕಾಗಿ ಸಿಎಂ ಪಟ್ನಾಯಕ್ ಅವರಿಗೆ ಹಾಕಿ ತಂಡದ ಸದಸ್ಯರು ಧನ್ಯವಾದ ಅರ್ಪಿಸಿದರು. ಆಟಗಾರರೊಂದಿಗೆ ನಡೆದ ಸಂವಾದ ಬಗ್ಗೆಯೂ ಸಿಎಂ ಪಟ್ನಾಯನ್​ ಟ್ವೀಟ್​ ಮಾಡಿದ್ದು, 2023ರ ಹಾಕಿ ವಿಶ್ವಕಪ್​ ಟೂರ್ನಿ ಗೂ ಮುನ್ನ ರೂರ್ಕೆಲಾದ ಬಿರ್ಸಾ ಮುಂಡಾ ಹಾಕಿ ಕ್ರೀಡಾಂಗಣದಲ್ಲಿ ಭಾರತೀಯ ಹಾಕಿ ತಂಡದ ಸದಸ್ಯರನ್ನು ಭೇಟಿ ಮಾಡಿ ಸಂವಾದ ನಡೆಸಿರುವುದು ಸಂತಸ ತರಿಸಿದೆ ಎಂದಿದ್ದಾರೆ.

ಭಾರತದಲ್ಲಿ ನಾಲ್ಕನೇ ಬಾರಿಗೆ ಹಾಕಿ ವಿಶ್ವಕಪ್​: ಭಾರತದಲ್ಲಿ ನಡೆಯುತ್ತಿರುವ ನಾಲ್ಕನೇ ಹಾಕಿ ವಿಶ್ವಕಪ್​ ಇದಾಗಿದೆ. ಅದರಲ್ಲೂ, ಒಡಿಶಾದಲ್ಲಿ ಸತತ ಎರಡನೇ ಬಾರಿಗೆ ಹಾಕಿ ವಿಶ್ವಕಪ್​ ಆಯೋಜನೆಯಾಗುತ್ತಿದೆ. 2018ರಲ್ಲೂ ಒಡಿಶಾದಲ್ಲಿ ವಿಶ್ವಕಪ್ ಟೂರ್ನಿ ನಡೆದಿತ್ತು. ದೇಶದಲ್ಲಿ ಈ ಮೊದಲು ಎಂದರೆ, 1982ರಲ್ಲಿ ಮುಂಬೈ ಮತ್ತು 2010ರಲ್ಲಿ ನವದೆಹಲಿಯಲ್ಲಿ ಹಾಕಿ ವಿಶ್ವಕಪ್​ ಜರುಗಿತ್ತು. ಇದೀಗ ಭಾರತದಲ್ಲಿ ನಡೆಯುತ್ತಿರುವ ಒಟ್ಟಾರೆ ನಾಲ್ಕನೇ ಹಾಕಿ ವಿಶ್ವಕಪ್ ಜನವರಿ 13ರಿಂದ ಆರಂಭವಾಗಲಿದೆ.

ಪ್ರತಿಷ್ಠಿತ ಈ ವಿಶ್ವ ಟೂರ್ನಿಯಲ್ಲಿ 16 ತಂಡಗಳು ಭಾಗವಹಿಸಲಿದ್ದು, ಒಡಿಶಾದ ರಾಜಧಾನಿ ಭುವನೇಶ್ವರದ ಕಳಿಂಗ ಕ್ರೀಡಾಂಗಣ ಹಾಗೂ ರೊರ್ಕೆಲಾದ ಬಿರ್ಸಾ ಮುಂಡಾ ಕ್ರೀಡಾಂಗಣದಲ್ಲಿ ಪಂದ್ಯಗಳು ನಡೆಯಲಿದೆ. ಎ-ಗ್ರೂಪ್​ನಲ್ಲಿ ಆಸ್ಟ್ರೇಲಿಯಾ, ಅರ್ಜೆಂಟೀನಾ, ಫ್ರಾನ್ಸ್ ಮತ್ತು ದಕ್ಷಿಣ ಆಫ್ರಿಕಾ ತಂಡಗಳು ಇದ್ದು, ಬಿ-ಗ್ರೂಪ್​ನಲ್ಲಿ ವಿಶ್ವ ಮತ್ತು ಒಲಿಂಪಿಕ್ ಚಾಂಪಿಯನ್ ಬೆಲ್ಜಿಯಂ, ಜರ್ಮನಿ, ದಕ್ಷಿಣ ಕೊರಿಯಾ ಮತ್ತು ಜಪಾನ್ ತಂಡಗಳು ಇದೆ. ಸಿ - ಗ್ರೂಪ್​ನಲ್ಲಿ ನೆದರ್​​ಲ್ಯಾಂಡ್​, ನ್ಯೂಜಿಲ್ಯಾಂಡ್, ಮಲೇಷ್ಯಾ ಮತ್ತು ಚಿಲಿ ತಂಡಗಳು ಸೆಣಸಲಿವೆ. ಡಿ-ಗ್ರೂಪ್​ನಲ್ಲಿ ಭಾರತ, ಇಂಗ್ಲೆಂಡ್​, ಸ್ಪೇನ್​ ಹಾಗೂ ವೇಲ್ಸ್ ತಂಡಗಳು ಇದ್ದು, ಆತಿಥೇಯ ಭಾರತ ಜನವರಿ 13 ರಂದು ನಡೆಯುವ ಮೊದಲ ಪಂದ್ಯದಲ್ಲಿ ಸ್ಪೇನ್​ ತಂಡವನ್ನು ಎದುರಿಸಲಿದೆ.

ಇದನ್ನೂ ಓದಿ: ಪುರುಷರ ಹಾಕಿ ವೇಳಾಪಟ್ಟಿ ಬಿಡುಗಡೆ: ಸ್ಪೇನ್​ ವಿರುದ್ಧ ಭಾರತದ ಮೊದಲ ಪಂದ್ಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.