ETV Bharat / sports

ಟೆನ್ನಿಸ್‌ ದಿಗ್ಗಜ ಜೊಕೊವಿಕ್ ವೀಸಾ ರದ್ದು: ಗಡಿಪಾರಿಗೆ ಆಸ್ಟ್ರೇಲಿಯಾ ಸಿದ್ಧತೆ - ಜೊಕೊವಿಕ್ ಗಡಿಪಾರಿಗೆ ಆಸ್ಟ್ರೇಲಿಯಾ ಸರ್ಕಾರದಿಂದ ಸಿದ್ಧತೆ

ಟೆನ್ನಿಸ್ ಚಾಂಪಿಯನ್‌ ನೊವಾಕ್ ಜೊಕೊವಿಕ್ ಅವರ ವೀಸಾ ರದ್ದಾಗಿದ್ದು, ಆಸ್ಟ್ರೇಲಿಯಾ ಸರ್ಕಾರ ಜೊಕೊವಿಕ್ ಅವರ ಗಡಿಪಾರಿಗೆ ಸಿದ್ಧತೆ ನಡೆಸುತ್ತಿದೆ.

Novak Djokovic loses Australian visa appeal
ನೊವಾಕ್ ಜೊಕೊವಿಕ್ ವೀಸಾ ರದ್ದು
author img

By

Published : Jan 16, 2022, 12:53 PM IST

Updated : Jan 16, 2022, 1:15 PM IST

ಮೆಲ್ಬರ್ನ್(ಆಸ್ಟ್ರೇಲಿಯಾ): ಕೊನೆಗೂ ಸರ್ಬಿಯಾದ ಟೆನ್ನಿಸ್ ಆಟಗಾರ ನೊವಾಕ್ ಜೊಕೊವಿಕ್ ಅವರ ಪ್ರಯತ್ನ ವಿಫಲವಾಗಿದ್ದು, ಮೇಲ್ಮನವಿ ವಿಚಾರಣೆಯಲ್ಲಿ ವೀಸಾ ರದ್ದು ಕ್ರಮವನ್ನು ಕೋರ್ಟ್ ಮಾನ್ಯ ಮಾಡಿದೆ.

ಇದರಿಂದಾಗಿ ಜೊಕೊವಿಕ್ ಗಡಿಪಾರಿಗೆ ಆಸ್ಟ್ರೇಲಿಯಾ ಸರ್ಕಾರದಿಂದ ಸಿದ್ಧತೆ ನಡೆದಿದೆ. ಗಡಿಪಾರಾದ ನಂತರ ಜೊಕೊವಿಕ್​ ಮೂರು ವರ್ಷಗಳ ಕಾಲ ಆಸ್ಟ್ರೇಲಿಯಾಗೆ ಪ್ರವೇಶ ಪಡೆಯಲು ಸಾಧ್ಯವಾಗುವುದಿಲ್ಲ ಎಂದು ಮೂಲಗಳು ತಿಳಿಸಿವೆ.

ನೊವಾಕ್ ಜೊಕೊವಿಕ್
ನೊವಾಕ್ ಜೊಕೊವಿಕ್

ನೊವಾಕ್ ಜೊಕೊವಿಕ್ ಅವರು ಸಾರ್ವಜನಿಕ ಆರೋಗ್ಯಕ್ಕೆ ಅಪಾಯವನ್ನುಂಟು ಮಾಡುತ್ತಾರೆ ಎಂದು ಭಾನುವಾರ ವಿಚಾರಣೆ ನಡೆಸಿದ ಕೋರ್ಟ್​​​ ಅಭಿಪ್ರಾಯಪಟ್ಟಿದೆ. ಅವರ ವೀಸಾ ರದ್ದಾಗದಿದ್ದರೆ, ಸೋಮವಾರ ನಡೆಯುವ ಆಸ್ಟ್ರೇಲಿಯನ್ ಓಪನ್​ನ ಮೊದಲ ಪಂದ್ಯದಲ್ಲಿ ಅವರು ಭಾಗವಹಿಸಬೇಕಿತ್ತು.

Novak Djokovic
ನೊವಾಕ್ ಜೊಕೊವಿಕ್

ಒಟ್ಟು ಒಂಭತ್ತು ಆಸ್ಟ್ರೇಲಿಯನ್ ಓಪನ್ ಪ್ರಶಸ್ತಿಗಳನ್ನು ಗೆದ್ದಿರುವ ಅವರು ಈ ಬಾರಿ 10ನೇ ಟೂರ್ನಿಯಲ್ಲಿ ಪಾಲ್ಗೊಳ್ಳಬೇಕಿತ್ತು. ಒಟ್ಟು 20 ಗ್ರ್ಯಾಂಡ್​ಸ್ಲ್ಯಾಮ್​ಗಳ ಈ ಸಾಧಕ ಜಗತ್ತಿನ ಟೆನ್ನಿಸ್​ ಆಟಗಾರರ ಪೈಕಿ ಅಗ್ರಸ್ಥಾನದಲ್ಲಿದ್ದಾರೆ.

ಇದನ್ನೂ ಓದಿ: ನೊವಾಕ್ ಜೊಕೊವಿಕ್ ವೀಸಾ ಎರಡನೇ ಬಾರಿಗೆ ರದ್ದು: ಸರ್ಬಿಯಾ ಟೆನಿಸ್​​​ ಆಟಗಾರನಿಗೆ ಗಡಿಪಾರು ಸಮಸ್ಯೆ

Last Updated : Jan 16, 2022, 1:15 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.