ETV Bharat / sports

ಕ್ರೀಡಾಪಟುಗಳು ಒಲಿಂಪಿಕ್ಸ್ ಪೂರ್ವ ವ್ಯಾಕ್ಸಿನೇಷನ್​ಗೆ ಬೇಡಿಕೆ ಇಟ್ಟಿಲ್ಲ: ಆಯೋಜಕರು - ಕೋವಿಡ್ 19 ವ್ಯಾಕ್ಸಿನೇಷನ್​

ಜಪಾನ್​ನಲ್ಲಿ ಲಸಿಕೆ ಹಾಕುವ ಕಾರ್ಯ ನಿಧಾನಗತಿಯಿಂದ ನಡೆಯುತ್ತಿದೆ. ಪ್ರಸ್ತುತ ದೇಶದಲ್ಲಿ ಶೇ. 1ಕ್ಕಿಂತ ಕಡಿಮೆ ವ್ಯಾಕ್ಸಿನೇಷನ್​ ಆಗಿದೆ. ಈ ಕಾರಣದಿಂದ ಕ್ರೀಡಾಕೂಟಕ್ಕೆ ಕೇವಲ 3 ತಿಂಗಳಿರುವಾಗ ಸ್ಥಳೀಯರು ಒಲಿಂಪಿಕ್ಸ್​ ರದ್ದು ಮಾಡಿ ಅಥವಾ ಮೂಂದೂಡಿ ಎಂದು ಪ್ರತಿಭಟಿಸಿದ್ದಾರೆ.

ಟೋಕಿಯಾ ಒಲಿಂಪಿಕ್ಸ್
ಟೋಕಿಯಾ ಒಲಿಂಪಿಕ್ಸ್
author img

By

Published : Apr 20, 2021, 6:07 PM IST

ಟೋಕಿಯೋ: ವಿಶ್ವದ ಯಾವುದೇ ಕ್ರೀಡಾಪಟುಗಳಿಂದ ಒಲಿಂಪಿಕ್ಸ್​ ಪೂರ್ವವಾಗಿ ವ್ಯಾಕ್ಸಿನೇಷನ್​ಗೆ ಯಾವುದೇ ಬೇಡಿಕೆ ಬಂದಿಲ್ಲ ಎಂದು ಟೋಕಿಯೋ ಒಲಿಂಪಿಕ್ಸ್ ಆಯೋಜನ ಸಮಿತಿ ಮಂಗಳವಾರ ತಿಳಿಸಿದೆ.

ಜಪಾನ್​ನಲ್ಲಿ ಲಸಿಕೆ ಹಾಕುವ ಕಾರ್ಯ ನಿಧಾನಗತಿಯಿಂದ ನಡೆಯುತ್ತಿದೆ. ಪ್ರಸ್ತುತ ದೇಶದಲ್ಲಿ ಶೇ. 1ಕ್ಕಿಂತ ಕಡಿಮೆ ವ್ಯಾಕ್ಸಿನೇಷನ್​ ಆಗಿದೆ. ಈ ಕಾರಣದಿಂದ ಕ್ರೀಡಾಕೂಟಕ್ಕೆ ಕೇವಲ 3 ತಿಂಗಳಿರುವಾಗ ಸ್ಥಳೀಯರು ಒಲಿಂಪಿಕ್ಸ್​ ರದ್ದು ಮಾಡಿ ಅಥವಾ ಮೂಂದೂಡಿ ಎಂದು ಪ್ರತಿಭಟಿಸಿದ್ದಾರೆ.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಟೋಕಿಯೋ 2020ರ ಕ್ರೀಡಾಪಟುಗಳ ಸಮಿತಿಯ ಅಧ್ಯಕ್ಷರಾದ ನವೋಕೊ ಟಕಹಾಶಿ, "ಕ್ರೀಡಾಪಟುಗಳಿಗೆ ಕೋವಿಡ್​-19 ವ್ಯಾಕ್ಸಿನೇಷನ್‌ಗಳ ಬಗ್ಗೆ ಪ್ರಶ್ನೆಗಳಿವೆ. ಆದರೆ ವ್ಯಾಕ್ಸಿನ್​ ಪಡೆಯಬೇಕೆ ಅಥವಾ ಇಲ್ಲವೇ ಎಂಬುದರ ಬಗ್ಗೆ ಅವರಿಂದ ಯಾವುದೇ ಬೇಡಿಕೆ ಬಂದಿಲ್ಲ" ಎಂದು ತಿಳಿಸಿದ್ದಾರೆ.

ಈಗಾಗಲೇ ಮಹಾ ಕ್ರೀಡಾಕೂಟಕ್ಕೆ ವಿದೇಶಿ ಅಭಿಮಾನಿಗಳಿಗೆ ನಿಷೇಧ ಹೇರಲಾಗಿದೆ. ಇನ್ನು ಜಪಾನ್​ನಲ್ಲಿ ನಿಧಾನಗತಿಯ ವ್ಯಾಕ್ಸಿನೇಷನ್ ಇರುವುದರಿಂದ ಖಾಲಿ ಕ್ರೀಡಾಂಗಣಗಳಲ್ಲಿ ನಡೆಸುವ ಸಾಧ್ಯತೆ ಇದೆ ಎಂದು ಜಪಾನ್ ಲಸಿಕೆ ವಿತರಣೆ ಉಸ್ತುವಾರಿ ಸಚಿವಾ ಟಾರೋ ಕೊನೊ ಕಳೆದ ವಾರವಷ್ಟೇ ತಿಳಿಸಿದ್ದಾರೆ.

ಒಲಿಂಪಿಕ್ಸ್​ಗೆ ಭಾಗವಹಿಸುವ ಕ್ರೀಡಾಪಟುಗಳಿಗೆ ಲಸಿಕೆಗಳು ಅಗತ್ಯವಿಲ್ಲ ಎಂದು ಐಒಸಿ ಹೇಳಿದೆ. ಆದರೆ ಐಒಸಿ ಅಧ್ಯಕ್ಷ ಥಾಮಸ್ ಬೇಚ್,​ ಕ್ರೀಡಾಪಟುಗಳು ವ್ಯಾಕ್ಸಿನ್​ ತೆಗೆದುಕೊಳ್ಳುವಂತೆ ಬಹಿರಂಗವಾಗಿ ಪ್ರೋತ್ಸಾಹಿಸಿದ್ದಾರೆ. ಆದರೆ ದುರ್ಬಲ, ಸಾಮಾನ್ಯ ಜನರನ್ನು ಬಿಟ್ಟು ಕ್ರೀಡಾಪಟುಗಳಿಗೆ ಮೊದಲ ಆಧ್ಯತೆ ನೀಡಿದರೆ ಸಂಘರ್ಷ ಉಂಟಾಗುತ್ತದೆ ಎಂದು ಕೆಲವು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಇದನ್ನು ಓದಿ: ಮೈಕಲ್ ವಾನ್ ಪ್ರಕಾರ್ ಧೋನಿ ನಂತರ ಸಿಎಸ್​ಕೆ ನಾಯಕ ಸ್ಥಾನಕ್ಕೆ ಈತ ಸೂಕ್ತನಂತೆ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.