ETV Bharat / sports

ಅಥ್ಲೆಟಿಕ್ಸ್​​ ಜಾಗತಿಕ ಆಟ, ಇಂಗ್ಲಿಷ್​ ಕಲಿಯುತ್ತಿದ್ದೇನೆ: ನೀರಜ್​ ಚೋಪ್ರಾ

ಡೈಮಂಡ್​ ಲೀಗ್​ನಲ್ಲಿ ಚಿನ್ನ ಗೆದ್ದ ಭರ್ಜಿ ದೊರೆ ನೀರಜ್​ ಚೋಪ್ರಾ ಇಂಗ್ಲಿಷ್​ ಮಾತನಾಡುವ ಕೌಶಲ್ಯಗಳ ಅಭ್ಯಾಸ ಮಾಡುತ್ತಿದ್ದಾರೆ. ಇಂಗ್ಲಿಷ್​ ಬಾರದ್ದಕ್ಕೆ ಅವರು ಪತ್ರಕರ್ತರ ಪ್ರಶ್ನೆಗಳಿಗೆ ತಡವರಿಸುತ್ತಿದ್ದಾರೆ.

neeraj-chopra
ನೀರಜ್​ ಚೋಪ್ರಾ
author img

By

Published : Sep 10, 2022, 3:47 PM IST

ಹೈದರಾಬಾದ್: ಭಾರತದ ಜಾವೆಲಿನ್​ ದೊರೆ ನೀರಜ್​ ಚೋಪ್ರಾ ಟೋಕಿಯೋ ಒಲಿಂಪಿಕ್ಸ್​ನಿಂದ ಹಿಡಿದು ನಿನ್ನೆ ನಡೆದ ಡೈಮಂಡ್​ ಲೀಗ್​ ಪಂದ್ಯಾವಳಿವರೆಗೂ ಚಿನ್ನಕ್ಕೆ ಗುರಿ ಇಟ್ಟು ಭೇದಿಸಿದ್ದಾರೆ. ಇಂತಹ ಚಿನ್ನದ ಕಲಿಗೆ ಇಂಗ್ಲಿಷ್​ ಭಾಷೆ ಸವಾಲಾಗಿದೆ. ವಿಶ್ವಾದ್ಯಂತ ನಡೆಯುವ ಪಂದ್ಯಾವಳಿಗಳಲ್ಲಿ ಭಾಗವಹಿಸಿದಾಗ ಅವರು ಸಂವಹನ ಕೊರತೆ ಎದುರಿಸುತ್ತಿದ್ದಾರೆ.

ಹರಿಯಾಣದ ನೀರಜ್​ ಚೋಪ್ರಾಗೆ ಹಿಂದಿ ಭಾಷೆ ಕರಗತ. ಇದರಿಂದ ಭಾರತದಲ್ಲಿ ಅವರು ಸಂವಹನಕ್ಕೆ ಭಾಷಾ ಸಮಸ್ಯೆ ಎದುರಾಗದು. ಆದರೆ. ವಿದೇಶಗಳಲ್ಲಿನ ಟೂರ್ನಿಗಳಲ್ಲಿ ಅವರು ಭಾಗವಹಿಸಿದಾಗ ಮೈದಾನ ಮತ್ತು ಬಳಿಕ ನಡೆಯುವ ಸುದ್ದಿಗೋಷ್ಠಿಯಲ್ಲಿ ಅವರು ಸಂವಹನಕ್ಕಾಗಿ ಪರದಾಡುತ್ತಿದ್ದಾರೆ. ಇದಕ್ಕೆ ಕಾರಣ ಅವರಿಗೆ ಇಂಗ್ಲಿಷ್​ ಕಗ್ಗಂಟಾಗಿರುವುದು.

ಇಂಗ್ಲಿಷ್​ ಮಾತನಾಡುವುದನ್ನು ಅವರು ಕಲಿಯುತ್ತಿದ್ದು, ಈಗ ಸ್ವಲ್ಪಮಟ್ಟಿಗೆ ಸುಧಾರಿಸಿದ್ದಾರೆ. ಜಾಗತಿಕವಾಗಿ ಇಂಗ್ಲಿಷ್​ ಅಗತ್ಯ ಎಂಬುದನ್ನು ಅವರು ಅರಿತುಕೊಂಡಿದ್ದಾರೆ. ಇಂಗ್ಲಿಷ್ ಮಾತನಾಡುವ ಕೌಶಲ್ಯವನ್ನು ಕಲಿಯುತ್ತಿದ್ದಾರೆ. ಬಟ್ಲರ್​ ಇಂಗ್ಲಿಷ್​ನಲ್ಲಿ ಮಾತನಾಡಿ ತಾನು ಏನು ಹೇಳಲು ಹೊರಟಿದ್ದೇನೆ ಎಂಬುದನ್ನು ಅರ್ಥ ಮಾಡಿಸುತ್ತಾರೆ.

ನಿನ್ನೆ ಜ್ಯೂರಿಚ್​ನಲ್ಲಿ ನಡೆದ ಡೈಮಂಡ್ ಲೀಗ್ ಫೈನಲ್‌ನಲ್ಲಿ ಚಿನ್ನದ ಪದಕವನ್ನು ಗಳಿಸಿದ ನಂತರ ಪತ್ರಕರ್ತರು ಕೇಳಿದ ಪ್ರಶ್ನೆಗಳಿಗೆ ಅವರು ಸಮಂಜಸವಾಗಿ ಉತ್ತರ ನೀಡಲು ಸಾಧ್ಯವಾಗಲಿಲ್ಲ. ಇಂಗ್ಲಿಷ್​ ಭಾಷಾ ಕೌಶಲ್ಯದ ಕೊರತೆಯಿಂದ ಅವರು ಸ್ವಲ್ಪ ತಡವರಿಸಬೇಕಾಯಿತು.

"ನನ್ನ ಇಂಗ್ಲಿಷ್ ಸುಧಾರಿಸಿದೆ. ಆದರೆ, ಇನ್ನೂ ಉತ್ತಮವಾಗಿಲ್ಲ. ಇತರರು ಹೇಳಿದ್ದನ್ನು ನಾನು ಅರ್ಥಮಾಡಿಕೊಳ್ಳುತ್ತೇನೆ. ನಾನು ಹೇಳುವಾಗಲೂ ಅವರಿಗೆ ಅರ್ಥ ಮಾಡಿಸುತ್ತೇನೆ. ಅಥ್ಲೆಟಿಕ್ಸ್ ಜಾಗತಿಕ ಕ್ರೀಡೆಯಾಗಿದೆ. ಮೂಲ ಅಂಶಗಳನ್ನು ತಿಳಿದುಕೊಳ್ಳುವುದು ಅಗತ್ಯ ಎಂಬುದು ತಿಳಿದಿದೆ. ಹೀಗಾಗಿ ಇಂಗ್ಲಿಷ್​ ಕಲಿಯುತ್ತಿದ್ದೇನೆ" ಎಂದು ನೀರಜ್​ ಚೋಪ್ರಾ ಹೇಳಿದರು.

ಜ್ಯೂರಿಚ್‌ನಲ್ಲಿ ನಡೆದ ಡೈಮಂಡ್​ ಲೀಗ್​ನಲ್ಲಿ ಮೊದಲ ಎಸೆತದ ವಿಫಲದೊಂದಿಗೆ ಟೂರ್ನಿ ಆರಂಭಿಸಿ, ಬಳಿಕ 88.44 ಮೀಟರ್​ ದೂರ ಎಸೆದು ಚಿನ್ನ ಸಂಪಾದಿಸಿದರು. ಇದು ಅವರ ವೃತ್ತಿಜೀವನದ ನಾಲ್ಕನೇ ಅತ್ಯುತ್ತಮ ದೂರದ ಎಸೆತವಾಗಿದೆ. ಮುಂದಿನ ನಾಲ್ಕು ಎಸೆತಗಳಲ್ಲಿ 88.00ಮೀ, 86.11ಮೀ, 87.00ಮೀ ಮತ್ತು 83.60 ಮೀಟರ್​ ದೂರ ಭರ್ಜಿಯನ್ನು ಎಸೆದರು.

ಓದಿ: "Honeymoon Period Is Over..": ಕೋಚ್​ ದ್ರಾವಿಡ್​, ಟೀಂ ಇಂಡಿಯಾ ವಿರುದ್ಧ ಮಾಜಿ ಕ್ರಿಕೆಟರ್ ಆಕ್ರೋಶ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.