ಕ್ಯಾಲಿಫೋರ್ನಿಯಾ( ಅಮೆರಿಕ): ಇಂಡಿಯನ್ ವೆಲ್ಸ್ ಓಪನ್‌ನ 3ನೇ ಸುತ್ತಿನಲ್ಲಿ 27ನೇ ಶ್ರೇಯಾಂಕದ ಡೇನಿಯಲ್ ಇವಾನ್ಸ್ ವಿರುದ್ಧ ಸ್ಪೇನ್‌ನ ರಾಫೆಲ್ ನಡಾಲ್ 7-5, 6-3 ಅಂತರ ಸುಲಭ ಗೆಲುವು ದಾಖಲಿಸಿದ್ದಾರೆ. ಆ ಮೂಲಕ ಸ್ಪೇನ್‌ನ ಆಟಗಾರ 16ನೇ ಸುತ್ತಿಗೆ ಪ್ರವೇಶ ಪಡೆದಿದ್ದಾರೆ.
ಈ ಗೆಲುವಿನ ಜೊತೆಗೆ ಎಟಿಪಿ ಟೂರ್ ಸೀಸನ್‌ಗೆ ತನ್ನ ವೃತ್ತಿಜೀವನದ ಅತ್ಯುತ್ತಮ ಆರಂಭವನ್ನು 17-0 ಗೆ ವಿಸ್ತರಣೆ ಹಾಗೂ 400ನೇ ATP ಮಾಸ್ಟರ್ಸ್‌ನಲ್ಲಿ 1000ನೇ ಗೆಲುವು ಪಡೆದರು. ಈ ಬಗ್ಗೆ ಪ್ರತಿಕ್ರಿಯಿಸಿದ ನಡಾಲ್, ನನಗೆ ಸಂಖ್ಯೆ ಬಗ್ಗೆ ಗೊತ್ತಿಲ್ಲ. ಆದರೆ, ಉತ್ತಮ ಸಂಖ್ಯೆಗಳು ಎಂದರು.ನಾನು ಬಯಸಿದ ರೀತಿಯಲ್ಲಿ ಪಂದ್ಯವು ಪ್ರಾರಂಭವಾಗಲಿಲ್ಲ, ಆದರೆ, ಕೆಲವು ಪ್ರಮುಖ ಕ್ಷಣಗಳಲ್ಲಿ ನಾನು ಒಂದೆರಡು ಉತ್ತಮ ಪಾಸಿಂಗ್ ಶಾಟ್‌ಗಳನ್ನು ಹೊಡೆಯಲು ಸಾಧ್ಯವಾಯಿತು. ನಂತರ ಆಟವನ್ನು ಸ್ವಲ್ಪ ಉತ್ತಮಪಡಿಸಿಕೊಂಡೆ ಎಂದು ಹೇಳಿದರು.
ಮೊದಲ ಸುತ್ತಿನ 9 ಆಟಗಳಲ್ಲಿ 8ರಲ್ಲಿ ಗೆದ್ದು ಅಗ್ರಸ್ಥಾನ ಕಾಯ್ದುಕೊಂಡರೆ, ಎರಡನೇ ಸುತ್ತಿನಲ್ಲಿ 3-0 ಮುನ್ನಡೆ ಪಡೆದರು. ನಡಾಲ್ ಆರಂಭಿಕ ಸೆಟ್‌ನಲ್ಲಿ ಎರಡೂ ವಿರಾಮಗಳನ್ನು ಹೊಂದಿಸಲು ಪಿನ್‌ಪಾಯಿಂಟ್ ಪಾಸಿಂಗ್ ಶಾಟ್‌ಗಳನ್ನು ಬಳಸಿದರು. ಎಟಿಪಿ ಟೂರ್‌ನ ಪ್ರಮುಖ ನಾಲ್ಕನೆ ಪ್ರಶಸ್ತಿಯನ್ನು ಬೆನ್ನಟ್ಟುವತ್ತ ದಾಪುಗಾಲು ಇಟ್ಟಿರುವ ನಡಾಲ್ ಒಂದೇ ವರ್ಷದಲ್ಲಿ ಪ್ರಮುಖ ಮೂರು ಪ್ರಶಸ್ತಿಗಳನ್ನು ಗೆಲ್ಲುವ ಮೂಲಕ ರೋಜರ್ ಫೆಡರರ್ (2018) ಮತ್ತು ಪೀಟ್ ಸಾಂಪ್ರಸ್ (1997) ಅವರ ದಾಖಲೆಯನ್ನು ಸರಿಗಟ್ಟಿದ್ದಾರೆ.
ಇದನ್ನೂ ಓದಿ: ಸ್ಪ್ಯಾನಿಷ್ ಪ್ಯಾರಾ ಬ್ಯಾಡ್ಮಿಂಟನ್ ಇಂಟರ್ನ್ಯಾಷನಲ್ : 6 ಚಿನ್ನ ಸೇರಿ 21 ಪದಕ ಗೆದ್ದ ಭಾರತೀಯ ಶಟ್ಲರ್ಗಳು