ಯೂಜಿನ್(ಯುಎಸ್ಎ): ನಿನ್ನೆಯಿಂದ ಆರಂಭಗೊಂಡಿರುವ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್ನಲ್ಲಿ ಭಾರತದ ಅನೇಕ ಅಥ್ಲೆಟ್ಸ್ಗಳು ಭಾಗಿಯಾಗಿದ್ದು, ತಮ್ಮ ಪ್ರದರ್ಶನ ಹೊರಹಾಕುತ್ತಿದ್ದಾರೆ. ಇದೀಗ ಪುರುಷರ ಲಾಂಗ್ ಜಂಪ್ನಲ್ಲಿ ಭಾರತದ ಮುರಳಿ ಶ್ರೀಶಂಕರ್ ಫೈನಲ್ಗೆ ಅರ್ಹತೆ ಪಡೆದುಕೊಂಡಿದ್ದಾರೆ. ಜೊತೆಗೆ ಈ ಸಾಧನೆ ಮಾಡಿರುವ ಮೊದಲ ಭಾರತೀಯರಾಗಿದ್ದಾರೆ.
ಅರ್ಹತಾ ಸುತ್ತಿನಲ್ಲಿ 8 ಮೀಟರ್ ಜಿಗಿಯುವ ಮೂಲಕ ಕೇರಳದ 23 ವರ್ಷದ ಶ್ರೀಶಂಕರ್ ಅರ್ಹತೆ ಗಿಟ್ಟಿಸಿಕೊಂಡಿದ್ದಾರೆ. ಈ ಸುತ್ತಿನಲ್ಲಿ ಜಪಾನ್‌ನ ಯುಕಿ ಹಶಿಯೋಕಾ (8.18 ಮೀ) ಮತ್ತು ಯುಎಸ್‌ಎಯ ಮಾರ್ಕ್ವಿಸ್ ಡೆಂಡಿ (8.16 ಮೀ) ಜಿಗಿದಿದ್ದಾರೆ. ಈ ಹಿಂದೆ ಭಾರತದ ಅಂಜು ಬಾಬಿ ಜಾರ್ಜ್ ಲಾಂಗ್ ಜಂಪ್ ಮಹಿಳಾ ವಿಭಾಗದ ಸ್ಪರ್ಧೆಯಲ್ಲಿ ಫೈನಲ್ಗೆ ಪ್ರವೇಶ ಪಡೆದುಕೊಂಡಿದ್ದರು. ಇವರು 2003ರಲ್ಲಿ ಪ್ಯಾರಿಸ್ನಲ್ಲಿ ಕಂಚಿನ ಪದಕ ಗೆದ್ದಿದ್ದರು.
-
Murali Sreeshankar qualifies for the long jump event at #WAC2022 with a jump of 8.00m.
— Naveen N (@iamyournaveen) July 16, 2022 " class="align-text-top noRightClick twitterSection" data="
Remember his PB is 8.36m and he s current national record holder. #Oregon2022 Congrats 👏🏻👏🏻👏🏻 pic.twitter.com/OopPxWIfwV
">Murali Sreeshankar qualifies for the long jump event at #WAC2022 with a jump of 8.00m.
— Naveen N (@iamyournaveen) July 16, 2022
Remember his PB is 8.36m and he s current national record holder. #Oregon2022 Congrats 👏🏻👏🏻👏🏻 pic.twitter.com/OopPxWIfwVMurali Sreeshankar qualifies for the long jump event at #WAC2022 with a jump of 8.00m.
— Naveen N (@iamyournaveen) July 16, 2022
Remember his PB is 8.36m and he s current national record holder. #Oregon2022 Congrats 👏🏻👏🏻👏🏻 pic.twitter.com/OopPxWIfwV
ಮತ್ತೊಂದು ಸ್ಪರ್ಧೆಯಲ್ಲಿ ಅವಿನಾಶ್ ಸೇಬಲ್ ಪುರುಷರ 3 ಸಾವಿರ ಮೀಟರ್ ಸ್ಟೀಪಲ್ ಚೇಸ್ನಲ್ಲಿ ಫೈನಲ್ಗೆ ಅರ್ಹತೆ ಗಿಟ್ಟಿಸಿಕೊಂಡಿದ್ದಾರೆ. ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್ನಲ್ಲಿ ಜಾವಲಿನ್ ಸ್ಪರ್ಧೆಯಲ್ಲಿ ನೀರಜ್ ಚೋಪ್ರಾ ಭಾಗಿಯಾಗಿದ್ದು, ಚಿನ್ನಕ್ಕೆ ಮುತ್ತಿಕ್ಕುವ ಸಾಧ್ಯತೆ ದಟ್ಟವಾಗಿದೆ.
ಇದನ್ನೂ ಓದಿರಿ: 'ವಾಟ್ ಇಫ್ ಐ ಫಾಲ್'?... ಸ್ಫೂರ್ತಿದಾಯಕ ಸಂದೇಶದೊಂದಿಗೆ ಫೋಟೋ ಹಂಚಿಕೊಂಡ ಕೊಹ್ಲಿ!
ಈಗಾಗಲೇ 8.36 ಮೀಟರ್ ಜಿಗಿಯುವ ಮೂಲಕ ರಾಷ್ಟ್ರೀಯ ದಾಖಲೆ ನಿರ್ಮಿಸಿರುವ 23 ವರ್ಷದ ಲಾಂಗ್ಜಂಪರ್ ಮುರಳು ಶ್ರೀಶಂಕರ್ ಕೂಡ ಈಗಾಗಲೇ ಫೈನಲ್ ಪ್ರವೇಶ ಪಡೆದುಕೊಂಡಿದ್ದು, ಪದಕ ಗೆಲ್ಲುವ ಸಾಧ್ಯತೆ ಇದೆ. ಇನ್ನೂ ಭಾರತದ ಮತ್ತೋರ್ವ ಜಾವಲಿನ ಎಸೆತಗಾರ ರೋಹಿತ್ ಯಾದವ್ ಸಹ ಸ್ಪರ್ಧೆಯಲ್ಲಿ ಇದ್ದಾರೆ. ಜುಲೈ 21ರಂದು ಅರ್ಹತಾ ಸುತ್ತು ನಡೆಯಲಿದೆ.
-
𝗤𝘂𝗮𝗹𝗶𝗳𝗶𝗰𝗮𝘁𝗶𝗼𝗻 𝗳𝗼𝗿 𝗙𝗜𝗡𝗔𝗟 ✅
— Olympic Khel (@OlympicKhel) July 16, 2022 " class="align-text-top noRightClick twitterSection" data="
Avinash Sable of 🇮🇳 clocks 8:18.75 in the men's 3000m steeplechase to finish third in his heats and grab a direct qualification for the medal race.#WCHOregon22 pic.twitter.com/1phnfYG61O
">𝗤𝘂𝗮𝗹𝗶𝗳𝗶𝗰𝗮𝘁𝗶𝗼𝗻 𝗳𝗼𝗿 𝗙𝗜𝗡𝗔𝗟 ✅
— Olympic Khel (@OlympicKhel) July 16, 2022
Avinash Sable of 🇮🇳 clocks 8:18.75 in the men's 3000m steeplechase to finish third in his heats and grab a direct qualification for the medal race.#WCHOregon22 pic.twitter.com/1phnfYG61O𝗤𝘂𝗮𝗹𝗶𝗳𝗶𝗰𝗮𝘁𝗶𝗼𝗻 𝗳𝗼𝗿 𝗙𝗜𝗡𝗔𝗟 ✅
— Olympic Khel (@OlympicKhel) July 16, 2022
Avinash Sable of 🇮🇳 clocks 8:18.75 in the men's 3000m steeplechase to finish third in his heats and grab a direct qualification for the medal race.#WCHOregon22 pic.twitter.com/1phnfYG61O