ಭುವನೇಶ್ವರ: ಒಡಿಶಾದಲ್ಲಿ ನಡೆಯುವ ಮುಂದಿನ ವರ್ಷದ 2023ರ ಪುರುಷರ ಹಾಕಿ ವಿಶ್ವಕಪ್ನ ವೇಳಾಪಟ್ಟಿ ಬಿಡುಗಡೆಯಾಗಿದ್ದು, ಆತಿಥೇಯ ಭಾರತ ಜನವರಿ 13 ರಂದು ನಡೆಯುವ ಮೊದಲ ಪಂದ್ಯದಲ್ಲಿ ಸ್ಪೇನ್ ವಿರುದ್ಧ ಸೆಣಸಾಡಲಿದೆ.
ಡಿ ಗ್ರೂಪ್ನಲ್ಲಿ ಸ್ಥಾನ ಪಡೆದಿರುವ ಭಾರತ ಯುರೋಪಿಯನ್ ದೈತ್ಯರಾದ ಇಂಗ್ಲೆಂಡ್, ಸ್ಪೇನ್ ಮತ್ತು ವೇಲ್ಸ್ ತಂಡಗಳೊಂದಿಗೆ ಪೈಪೋಟಿಗೆ ಇಳಿಯಲಿದೆ. ಸ್ಪೇನ್ ವಿರುದ್ಧದ ಮೊದಲ ಪಂದ್ಯ ಇಲ್ಲಿನ ಬಿರ್ಸಾ ಮುಂಡಾ ಅಂತಾರಾಷ್ಟ್ರೀಯ ಹಾಕಿ ಕ್ರೀಡಾಂಗಣದಲ್ಲಿ ಸಂಜೆ 7 ಗಂಟೆಗೆ ನಡೆಯಲಿದೆ.
-
The schedule for the much-awaited FIH Odisha Hockey Men's World Cup 2023 Bhubaneswar-Rourkela is out!
— International Hockey Federation (@FIH_Hockey) September 27, 2022 " class="align-text-top noRightClick twitterSection" data="
The ticket sales will begin shortly. You can pre-register your interest here: https://t.co/7zNZUcB28o
Check the full schedule in the story below 👇@TheHockeyIndia#HWC2023
">The schedule for the much-awaited FIH Odisha Hockey Men's World Cup 2023 Bhubaneswar-Rourkela is out!
— International Hockey Federation (@FIH_Hockey) September 27, 2022
The ticket sales will begin shortly. You can pre-register your interest here: https://t.co/7zNZUcB28o
Check the full schedule in the story below 👇@TheHockeyIndia#HWC2023The schedule for the much-awaited FIH Odisha Hockey Men's World Cup 2023 Bhubaneswar-Rourkela is out!
— International Hockey Federation (@FIH_Hockey) September 27, 2022
The ticket sales will begin shortly. You can pre-register your interest here: https://t.co/7zNZUcB28o
Check the full schedule in the story below 👇@TheHockeyIndia#HWC2023
ಇದಕ್ಕೂ ಮೊದಲು ನಡೆಯುವ ಉದ್ಘಾಟನಾ ಪಂದ್ಯದಲ್ಲಿ 2016 ರ ಒಲಿಂಪಿಕ್ ಚಿನ್ನದ ಪದಕ ವಿಜೇತ ಅರ್ಜೆಂಟೀನಾ ತಂಡ ದಕ್ಷಿಣ ಆಫ್ರಿಕಾ ವಿರುದ್ಧ ಮಧ್ಯಾಹ್ನ 1 ಗಂಟೆಗೆ ಕಾದಾಡಲಿದೆ.
ಗ್ರೂಪ್ ಎ ತಂಡದಲ್ಲಿ ಆಸ್ಟ್ರೇಲಿಯಾ, ಅರ್ಜೆಂಟೀನಾ, ಫ್ರಾನ್ಸ್ ಮತ್ತು ದಕ್ಷಿಣ ಆಫ್ರಿಕಾ, ಗ್ರೂಪ್ ಬಿನಲ್ಲಿ ಬೆಲ್ಜಿಯಂ, ಜರ್ಮನಿ, ಕೊರಿಯಾ ಮತ್ತು ಜಪಾನ್‌ಗಳು ಇದ್ದರೆ, ಗ್ರೂಪ್ ಸಿಯಲ್ಲಿ ನೆದರ್ಲ್ಯಾಂಡ್ಸ್, ನ್ಯೂಜಿಲ್ಯಾಂಡ್, ಮಲೇಷ್ಯಾ ಮತ್ತು ಚಿಲಿ ಸ್ಥಾನ ಪಡೆದರೆ, ಟೋಕಿಯೊ ಒಲಿಂಪಿಕ್ಸ್ ಕಂಚಿನ ಪದಕ ವಿಜೇತ ಭಾರತ, ಇಂಗ್ಲೆಂಡ್, ಸ್ಪೇನ್ ಮತ್ತು ವೇಲ್ಸ್ ಜೊತೆಗೆ ಡಿ ಗುಂಪಿನಲ್ಲಿ ಸ್ಥಾನ ಪಡೆದಿದೆ.
ಗ್ರಹಾಂ ರೀಡ್ ತರಬೇತಿಯಲ್ಲಿ ಪಳಗಿರುವ ಭಾರತ ಹಾಕಿ ತಂಡ ಮೊದಲ ಪಂದ್ಯವನ್ನು ಸ್ಪೇನ್ ಜೊತೆ ಜನವರಿ 13 ರಂದು ಆಡಿದರೆ, ಎರಡನೇ ಪಂದ್ಯ ಇಂಗ್ಲೆಂಡ್ ವಿರುದ್ಧ ಜನವರಿ 15 ರಂದು, ಮೂರನೇ ಮತ್ತು ಕೊನೆಯ ಪಂದ್ಯ ವೇಲ್ಸ್ ವಿರುದ್ಧ ಜನವರಿ 19 ರಂದು ಆಡಲಿದೆ.
ರೌಂಡ್ ರಾಬಿನ್ ಹಂತದಲ್ಲಿ ಮೊದಲ ಸ್ಥಾನ ಪಡೆದ ನಾಲ್ಕು ತಂಡಗಳು ನೇರವಾಗಿ ಕ್ವಾರ್ಟರ್ ಫೈನಲ್ಗೆ ಲಗ್ಗೆ ಇಟ್ಟರೆ, 2 ಮತ್ತು 3ನೇ ಸ್ಥಾನ ಪಡೆದ 8 ತಂಡಗಳು ಕ್ರಾಸ್ ಓವರ್ ಮ್ಯಾಚ್ ಆಡಿ ಬಳಿಕ ಅದರಲ್ಲಿ ನಾಲ್ಕು ತಂಡಗಳು ಕ್ವಾರ್ಟರ್ ಫೈನಲ್ ಪ್ರವೇಶಿಸಲಿವೆ. 2018 ರಲ್ಲಿ ನಡೆದ ಹಾಕಿ ಪುರುಷರ ವಿಶ್ವಕಪ್‌ನಲ್ಲಿ ಮನ್‌ಪ್ರೀತ್ ಸಿಂಗ್ ನೇತೃತ್ವದ ಭಾರತ ತಂಡ ಕ್ವಾರ್ಟರ್ ಫೈನಲ್ ತಲುಪಿತ್ತು. ನೆದರ್ಲ್ಯಾಂಡ್ ವಿರುದ್ಧ ನಡೆದ ಪಂದ್ಯದಲ್ಲಿ 2-1 ರಿಂದ ಸೋತು ಸೆಮನಿಫೈನಲ್ ರೇಸ್ನಿಂದ ಹೊರಬಿದ್ದಿತ್ತು.
ಹಾಕಿ ವಿಶ್ವಕಪ್ ಪೂಲ್‌ಗಳು ಹೀಗಿವೆ:
ಪೂಲ್ ಎ- ಆಸ್ಟ್ರೇಲಿಯಾ, ಅರ್ಜೆಂಟೀನಾ, ಫ್ರಾನ್ಸ್, ದಕ್ಷಿಣ ಆಫ್ರಿಕಾ
ಪೂಲ್ ಬಿ- ಬೆಲ್ಜಿಯಂ, ಜರ್ಮನಿ, ಕೊರಿಯಾ, ಜಪಾನ್
ಪೂಲ್ ಸಿ- ನೆದರ್ಲ್ಯಾಂಡ್, ಚಿಲಿ, ಮಲೇಷ್ಯಾ, ನ್ಯೂಜಿಲ್ಯಾಂಡ್
ಪೂಲ್ ಡಿ- ಭಾರತ, ಇಂಗ್ಲೆಂಡ್, ಸ್ಪೇನ್, ವೇಲ್ಸ್
ಓದಿ: ಸೈಯದ್ ಮುಷ್ತಾಕ್ ಅಲಿ ಟ್ರೋಫಿ 2022-23 ; ಕರ್ನಾಟಕ ಸಂಭಾವ್ಯ ತಂಡ ಪ್ರಕಟ