ETV Bharat / sports

ಪ್ರೆಸಿಡೆಂಟ್​ ಕಪ್​ನಲ್ಲಿ ಚಿನ್ನದ ಪದಕ ಗೆದ್ದ ಮೇರಿ ಕೋಮ್ - ಬಾಕ್ಸರ್ ಮೇರಿ ಕೋಮ್

ಬಾಕ್ಸಿಂಗ್​ನಲ್ಲಿ ಆರು ಬಾರಿ ವಿಶ್ವ ಚಾಂಪಿಯನ್​ ಪಟ್ಟ ಅಲಂಕರಿಸಿರುವ ಮೇರಿ ಕೋಮ್ 23ನೇ ಪ್ರೆಸಿಡೆಂಟ್ ಕಪ್​ ಟೂರ್ನಿಯಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ.

ಮೇರಿ ಕೋಮ್
author img

By

Published : Jul 28, 2019, 6:37 PM IST

ಜಕಾರ್ತಾ: ಇಂಡೋನೇಷಿಯಾದಲ್ಲಿ ನಡೆದ 23ನೇ ಪ್ರೆಸಿಡೆಂಟ್ ಕಪ್​ ಟೂರ್ನಿಯಲ್ಲಿ ಪರಾಕ್ರಮ ತೋರಿದ ಭಾರತೀಯ ಬಾಕ್ಸರ್ ಮೇರಿ ಕೋಮ್ ಚಿನ್ನದ ಪದಕ ಗೆದ್ದಿದ್ದಾರೆ.

ಬಾಕ್ಸಿಂಗ್​ನಲ್ಲಿ ಆರು ಬಾರಿ ವಿಶ್ವ ಚಾಂಪಿಯನ್​ ಪಟ್ಟ ಅಲಂಕರಿಸಿರುವ ಕೋಮ್, ಆಸ್ಟ್ರೇಲಿಯಾದ ಏಪ್ರಿಲ್ ಫ್ರಾಂಕ್ಸ್​ ಅವರನ್ನ 5-0 ಅಂತರಗಳಿಂದ ಸೋಲಿಸಿ ಚಿನ್ನದ ಪದಕಕ್ಕೆ ಕೊರಳೊಡ್ಡಿದ್ದಾರೆ.

ಈ ಬಗ್ಗೆ ಟ್ವೀಟ್​ ಮಾಡಿರುವ ಮೇರಿ ಕೋಮ್​ ನನಗೆ ಮತ್ತು ನನ್ನ ದೇಶಕ್ಕೆ ಮತ್ತೊಂದು ಚಿನ್ನದ ಪದಕ ಸಿಕ್ಕಿದೆ. ಈ ಪ್ರಯತ್ನಕ್ಕೆ ನೆರವಾದ ಕೋಚ್​ ಮತ್ತು ತಂಡಕ್ಕೆ ಧನ್ಯವಾದ ತಿಳಿಸುತ್ತೇನೆ ಎಂದಿದ್ದಾರೆ. ಕೇಂದ್ರ ಕ್ರೀಡಾ ಸಚಿವ ಕಿರಣ್​ ರಿಜಿಜು ಕೂಡ ಟ್ವೀಟ್ ಮಾಡಿದ್ದು ಕೋಮ್​ ಅವರನ್ನ ಅಭಿನಂದಿಸಿದ್ದಾರೆ.

ಮೇ ತಿಂಗಳಲ್ಲಿ ನಡೆದ ಇಂಡಿಯನ್​ ಓಪನ್​ ಬಾಕ್ಸಿಂಗ್​ ಟೂರ್ನಿಯಲ್ಲಿ ಚಿನ್ನ ಗೆದ್ದಿದ್ದ ಕೋಮ್, ಏಷ್ಯನ್ ಚಾಂಪಿಯನ್​ ಶಿಪ್​ನಲ್ಲಿ ಭಾಗವಹಿಸಿರಲಿಲ್ಲ. ಸದ್ಯ 2020ರ ಒಲಿಂಪಿಕ್ಸ್​ ಮೇಲೆ ಕಣ್ಣಿಟ್ಟಿದ್ದು, ಭರ್ಜರಿ ತಯಾರಿ ನಡೆಸುತ್ತಿದ್ದಾರೆ.

Intro:Body:

mary

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.