ಕಟಕ್: 2022ರಲ್ಲಿ ತಮ್ಮ ಅದ್ಭುತ ಫಾರ್ಮ್ ಮುಂದುವರಿಸಿರುವ ಯುವ ಶಟ್ಲರ್ ಮಾಳವಿಕ ಬನ್ಸೂಡ್ ಭಾರತದವರೇ ಆದ ಜೂನಿಯರ್ ವಿಭಾಗದ ನಂಬರ್ 1 ಶಟ್ಲರ್ ತಸ್ನಿಮ್ ಮಿರ್ ವಿರುದ್ಧ ನೇರ ಗೇಮ್ಗಳಿಂದ ಮಣಿಸಿ ಒಡಿಶಾ ಓಪನ್ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ.
ಗುರುವಾರ ನಡೆದ ಪಂದ್ಯದಲ್ಲಿ ಬನ್ಸೂಡ್ ಅರ್ಧ ಗಂಟೆ ನಡೆದ ಕಾಳಗದಲ್ಲಿ ತಸ್ನಿಮ್ ವಿರುದ್ಧ 21-13, 21-15ರಿಂದ ಮಣಿಸಿ ಬಿಡಬ್ಲ್ಯೂಎಫ್ ಸೂಪರ್ 100 ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ 8ರ ಘಟ್ಟಕ್ಕೆ ತೇರ್ಗಡೆಯಾದರು.
20 ವರ್ಷದ ಮಾಳವಿಕ ಕಳೆದ ವಾರ ಎರಡು ಬಾರಿಯ ಒಲಿಂಪಿಕ್ ಪದಕ ವಿಜೇತೆ ಪಿವಿ ಸಿಂಧು ವಿರುದ್ಧ ಸೈಯದ್ ಮೋದಿ ಇಂಟರ್ ನ್ಯಾಷನಲ್ ಫೈನಲ್ನಲ್ಲಿ ಸೋಲು ಕಂಡಿದ್ದರು. ಆದರೆ ಲೀಗ್ ಹಂತದಲ್ಲಿ ತಮ್ಮ ಐಡಲ್ ಸೈನಾ ನೆಹ್ವಾಲ್ಗೆ ಸೋಲುಣಿಸುವಲ್ಲಿ ಯಶಸ್ವಿಯಾಗಿದ್ದರು. ಯುವ ಆಟಗಾರ್ತಿ ತಮ್ಮ ಮುಂದಿನ ಸುತ್ತಿನಲ್ಲಿ ತಾನಿಯಾ ಹೇಮಂತ್ ಮತ್ತು ವಿಜೇತ ಹರೀಶ್ ನಡುವೆ ಗೆದ್ದವರನ್ನು ಎದುರಿಸಲಿಸಿದ್ದಾರೆ.
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ
5ನೇ ಶ್ರೇಯಾಂಕದ ಆಶ್ಮಿತ ಚಲಿಹಾ ಕೂಡ 16 ವರ್ಷದ ಅನುಪಮಾ ಉಪಾಧ್ಯಯ ವಿರುದ್ಧ 21-17, 21-16ರ ಅಂತರದಲ್ಲಿ ಮಣಿಸಿ ಕ್ವಾರ್ಟರ್ ಫೈನಲ್ ಸ್ಥಾನ ಖಚಿತಪಡಿಸಿಕೊಂಡರು. 8ರ ಘಟ್ಟದ ಪಂದ್ಯದಲ್ಲಿ ರುಚಾ ಸವಾಂತ್ರನ್ನು ಎದುರಿಸಲಿದ್ದಾರೆ.
ಪುರುಷರ ವಿಭಾಗದಲ್ಲಿ ಕಿರಣ್ ಜಾರ್ಜ್ 21-12, 21-13ರಲ್ಲಿ ಚಿರಾಗ್ ಸೇನ್ರನ್ನು ಸುಲಭವಾಗಿ ಮಣಿಸಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದರು.
ಇದನ್ನೂ ಓದಿ:Australian open: ಫೈನಲ್ ಪ್ರವೇಶಿಸಿದ ಬಾರ್ಟಿ, 44 ವರ್ಷಗಳ ಪ್ರಶಸ್ತಿ ಬರ ನೀಗಿಸಲು ಬೇಕು ಒಂದು ಜಯ