ಮ್ಯಾಡ್ರಿಡ್ (ಸ್ಪೇನ್): ಭಾರತದ ಶಟ್ಲರ್ ಮತ್ತು ಒಲಿಂಪಿಕ್ ಪದಕ ವಿಜೇತೆ ಪಿವಿ ಸಿಂಧು ಅವರು ನಡೆಯುತ್ತಿರುವ ಮ್ಯಾಡ್ರಿಡ್ ಸ್ಪೇನ್ ಮಾಸ್ಟರ್ಸ್ ಮಹಿಳಾ ಸಿಂಗಲ್ಸ್ ಸ್ಪರ್ಧೆಯಲ್ಲಿ ಭಾನುವಾರ ಇಂಡೋನೇಷ್ಯಾದ ಗ್ರೆಗೋರಿಯಾ ಮರಿಸ್ಕಾ ತುಂಜಂಗ್ ವಿರುದ್ಧ ತಮ್ಮ ಅಂತಿಮ ಪಂದ್ಯದಲ್ಲಿ ಸೋಲನುಭವಿಸಿದರು. ಸಿಂಧು 8-21, 8-21 ರ ಎರಡು ನೇರ ಸೆಟ್‌ಗಳಲ್ಲಿ ಪಂದ್ಯವನ್ನು ಕಳೆದುಕೊಂಡರು.
ಬ್ಯಾಡ್ಮಿಂಟನ್ ಶ್ರೇಯಾಂಕದಲ್ಲಿ ವಿಶ್ವದ ನಂ. 11 ಮತ್ತು ಪಂದ್ಯಾವಳಿಯಲ್ಲಿ ಎರಡನೇ ಶ್ರೇಯಾಂಕದ ಸಿಂಧುಗೆ ಇದು ವರ್ಷದ ಮೊದಲ ಫೈನಲ್ ಪಂದ್ಯವಾಗಿತ್ತು. ಸಿಂಧು ಶನಿವಾರ ಸಿಂಗಾಪುರದ ಯೆಯೊ ಜಿಯಾ ಮಿನ್ ವಿರುದ್ಧ ಜಯಗಳಿಸುವ ಮೂಲಕ ಮಹಿಳೆಯರ ಸಿಂಗಲ್ಸ್ ಸ್ಪರ್ಧೆಯ ಫೈನಲ್‌ಗೆ ಪ್ರವೇಶಿಸಿದ್ದರು. ಸಿಂಧು ಸೆಮಿಫೈನಲ್ ಕಠಿಣ 24-22, 22-20ರ ಹಣಾಹಣಿಯಲ್ಲಿ ಜಯ ಸಾಧಿಸಿದ್ದರು.
ನಿಧಾನ ಗತಿಯ ಆರಂಭ: ಸಿಂಧು ನಿಧಾನಗತಿಯ ಆರಂಭವನ್ನು ಮಾಡಿದರು. ಕೆಲ ತಪ್ಪುಗಳು ಇಂಡೋನೇಷ್ಯಾದ ಎದುರಾಳಿಗೆ ಲಾಭವಾಯಿತು. ಸಿಂಧು ತೋರಿದ ಎಡವಟ್ಟುಗಳ ಲಾಭ ಪಡೆದ ಇಂಡೋನೇಷ್ಯಾದ ಆಟಗಾರ್ತಿ ಮೊದಲ ಗೇಮ್ ಅನ್ನು ಸುಲಭವಾಗಿ ಗೆದ್ದರು. ಎರಡನೇ ಗೇಮ್‌ನಲ್ಲಿ, ಸಿಂಧು ತಮ್ಮ ಎದುರಾಳಿಯನ್ನು ತಡೆಯಲು ಪ್ರಯತ್ನಿಸುವಷ್ಟರಲ್ಲಿ, ತುಂಜಂಗ್ ಎರಡನೇ ಗೇಮ್ ಅನ್ನು ಸುಲಭವಾಗಿ ಗೆದ್ದರು. ಕೇವಲ 28 ನಿಮಿಷಗಳಲ್ಲಿ ಪಂದ್ಯವನ್ನು ನೇರ ಸೆಟ್ನಿಂದ ಗೆದ್ದುಕೊಂಡರು. ಇದು ಗ್ರೆಗೋರಿಯಾ ಮರಿಸ್ಕಾ ತುಂಜಂಗ್ ಅವರು ಪಿವಿ ಸಿಂಧು ವಿರುದ್ಧ ಎಂಟು ಮುಖಾಮುಖಿಯಲ್ಲಿನ ಮೊದಲ ಗೆಲುವಾಗಿದೆ.
-
Podium Juara #SpainMasters2023 - Women's Singles
— #SpainMasters2023 (@BadmintonLive1) April 2, 2023 " class="align-text-top noRightClick twitterSection" data="
🥇Gregoria Mariska Tunjung [5/🇮🇩]
🥈Pusarla V. Sindhu [2/🇮🇳]
Congrats !! 🔥🔥 pic.twitter.com/ENLj9j0xqx
">Podium Juara #SpainMasters2023 - Women's Singles
— #SpainMasters2023 (@BadmintonLive1) April 2, 2023
🥇Gregoria Mariska Tunjung [5/🇮🇩]
🥈Pusarla V. Sindhu [2/🇮🇳]
Congrats !! 🔥🔥 pic.twitter.com/ENLj9j0xqxPodium Juara #SpainMasters2023 - Women's Singles
— #SpainMasters2023 (@BadmintonLive1) April 2, 2023
🥇Gregoria Mariska Tunjung [5/🇮🇩]
🥈Pusarla V. Sindhu [2/🇮🇳]
Congrats !! 🔥🔥 pic.twitter.com/ENLj9j0xqx
ಇದನ್ನೂ ಓದಿ: ಮ್ಯಾಡ್ರಿಡ್ ಸ್ಪೇನ್ ಮಾಸ್ಟರ್ಸ್: ಕಾಮನ್ವೆಲ್ತ್ ಬಳಿಕ ಫೈನಲ್ ಪ್ರವೇಶಿಸಿದ ಪಿ.ವಿ.ಸಿಂಧು
ಫೈನಲ್ ಹಾದಿ: ಎರಡು ಬಾರಿಯ ಒಲಂಪಿಕ್ ಪದಕ ವಿಜೇತೆ, ಭಾರತದ ತಾರಾ ಶಟ್ಲರ್ ಪಿ.ವಿ.ಸಿಂಧು ಅವರು ಶನಿವಾರ ಇಲ್ಲಿ ನಡೆದ ಮ್ಯಾಡ್ರಿಡ್ ಸ್ಪೇನ್ ಮಾಸ್ಟರ್ಸ್ ಸೂಪರ್ 300 ಟೂರ್ನ್ಮೆಂಟ್ನಲ್ಲಿ ಸಿಂಗಾಪುರದ ಯೆಯೊ ಜಿಯಾ ಮಿನ್ ವಿರುದ್ಧ ನಡೆದ ಸೆಮಿಫೈನಲ್‌ನಲ್ಲಿ ನೇರ ಗೇಮ್‌ಗಳ ಜಯ ಸಾಧಿಸಿ ವರ್ಷದ ಮೊದಲ ಪ್ರಶಸ್ತಿ ಸುತ್ತಿಗೆ ಪ್ರವೇಶ ಪಡೆದರು.
ವಿಶ್ವ ಬ್ಯಾಡ್ಮಿಂಟನ್ನಲ್ಲಿ 11 ನೇ ಶ್ರೇಯಾಂಕದ ಸಿಂಧು 48 ನಿಮಿಷಗಳ ಕಠಿಣ ಹೋರಾಟ ನಡೆಸಿ ಮಹಿಳೆಯರ ಸಿಂಗಲ್ಸ್ ಸೆಮಿಫೈನಲ್‌ನಲ್ಲಿ ಕೆಳ ಶ್ರೇಯಾಂಕದ ಸಿಂಗಾಪುರದ ಶಟ್ಲರ್ ವಿರುದ್ಧ 24-22, 22- 20 ಅಂತರದಿಂದ ರೋಚಕ ಗೆಲುವು ಸಾಧಿಸಿದರು.
ಪಂದ್ಯದಲ್ಲಿ ಉಭಯ ಆಟಗಾರ್ತಿಯರು ಸಮಬಲ ಸಾಧಿಸಿದರು. ಮೊದಲ ಸೆಟ್ನಲ್ಲಿ ಸಿಂಗಾಪುರದ ಶಟ್ಲರ್ ಯೆಯೊ ಆರಂಭದಲ್ಲೇ 4-0 ಅಂತರದ ಮುನ್ನಡೆ ಪಡೆದರು. ಆಟ ಮುಂದುವರಿದಂತೆ 15-20 ರಲ್ಲಿ ಮುನ್ನಡೆ ಪಡೆದು ಸೆಟ್ ಗೆಲುವಿನ ಸನಿಹದಲ್ಲಿದ್ದರು. ಆದರೆ, ಈ ವೇಳೆ ತಮ್ಮ ಕೌಶಲ್ಯ ಪ್ರದರ್ಶಿಸಿದ ಭಾರತೀಯ ಶಟ್ಲರ್ ಸಿಂಧು 20-20 ರಲ್ಲಿ ಸಮಬಲ ಸಾಧಿಸಿದರು. ಇದಾದ ಬಳಿಕವೂ ಪಟ್ಟು ಬಿಡದ ಆಟಗಾರ್ತಿಯರು 22-22 ರಲ್ಲಿ ಸಾಗಿದರು. ಕೊನೆಗೆ ಸಿಂಧು ಚಾಣಾಕ್ಷ್ಯತನದಿಂದ ಗೇಮ್ ಪಾಯಿಂಟ್ ಪಡೆದು 24-22 ರಲ್ಲಿ ಸೆಟ್ ಜಯಿಸಿದರು.
ಇದನ್ನೂ ಓದಿ: ಮೈಸೂರು ಓಪನ್ 2023: ಜಾರ್ಜ್ ಲೋಫ್‌ಹೇಗನ್ ಸಿಂಗಲ್ಸ್ ಪ್ರಶಸ್ತಿ