ETV Bharat / sports

ಚಿನ್ನ ಗೆದ್ದ ನೀರಜ್​ಗೆ 50 ಲಕ್ಷ, ಬಜರಂಗ್​ಗೆ 10 ಲಕ್ಷ ಬಹುಮಾನ ಘೋಷಿಸಿದ ಲವ್ಲಿ ಪ್ರೊಫೆಷನಲ್ ಯುನಿವರ್ಸಿಟಿ

ಜಾವಲಿನ್​ ಥ್ರೋನಲ್ಲಿ 87.58 ಮೀಟರ್​ ಎಸೆಯುವ ಮೂಲಕ ದಿಗ್ಗಜರನ್ನು ಹಿಂದಿಕ್ಕಿ ಚಿನ್ನದ ಪದಕಕ್ಕೆ ಕೊರಳೊಡ್ಡಿದ್ದರು. ಇವರು ಲವ್ಲಿ ಪ್ರೊಫೆಷನಲ್ ಯುನಿವರ್ಸಿಟಿಯಲ್ಲಿ ಬಿಎ ಪದವಿ ಪಡೆದಿದ್ದರು. ತಮ್ಮ ಯುನಿವರ್ಸಿಟಿಯಲ್ಲಿ ಓದಿ, ಭಾರತಕ್ಕೆ ಚಿನ್ನದ ಪದಕ ಗೆದ್ದು ಕೊಟ್ಟಿರುವುದಕ್ಕಾಗಿ ನೀರಜ್​ಗೆ 50 ಲಕ್ಷ ರೂಪಾಯಿಗಳನ್ನು ಬಹುಮಾನವಾಗಿ ಘೋಷಣೆ ಮಾಡಿದೆ.

ನೀರಜ್ , ಬಜರಂಗ್​ಗೆ ಲವ್ಲಿ ಪ್ರೊಫೆಷನಲ್ ಯುನಿವರ್ಸಿಟಿಯಿಂದ ಬಹುಮಾನ
author img

By

Published : Aug 9, 2021, 4:21 PM IST

ಫಾಗ್ವಾರ(ಪಂಜಾಬ್) : ಅಥ್ಲೆಟಿಕ್ಸ್​ನಲ್ಲಿ ಚಿನ್ನ ಗೆಲ್ಲುವ ನೂರು ವರ್ಷಗಳ ಭಾರತೀಯರ ಕನಸನ್ನು ಇಡೇರಿಸಿದ ಜಾವಲಿನ್ ಥ್ರೋವರ್​ ನೀರಜ್​ ಚೋಪ್ರಾಗೆ ಲವ್ಲಿ ಪ್ರೊಫೆಷನಲ್ ಯುನಿವರ್ಸಿಟಿ 50 ಲಕ್ಷ ಬಹುಮಾನವಾಗಿ ಘೋಷಿಸಿದೆ.

ಜಾವಲಿನ್​ ಥ್ರೋನಲ್ಲಿ 87.58 ಮೀಟರ್​ ಎಸೆಯುವ ಮೂಲಕ ದಿಗ್ಗಜರನ್ನು ಹಿಂದಿಕ್ಕಿ ಚಿನ್ನದ ಪದಕಕ್ಕೆ ಕೊರಳೊಡ್ಡಿದ್ದರು. ಇವರು ಲವ್ಲಿ ಪ್ರೊಫೆಷನಲ್ ಯುನಿವರ್ಸಿಟಿಯಲ್ಲಿ ಬಿಎ ಪದವಿ ಪಡೆದಿದ್ದರು. ತಮ್ಮ ಯುನಿವರ್ಸಿಟಿಯಲ್ಲಿ ಓದಿದ ಭಾರತಕ್ಕೆ ಚಿನ್ನದ ಪದಕ ಗೆದ್ದು ಕೊಟ್ಟಿರುವುದಕ್ಕೆ ನೀರಜ್​ಗೆ 50 ಲಕ್ಷ ರೂಪಾಯಿಗಳನ್ನು ಬಹುಮಾನವಾಗಿ ಘೋಷಣೆ ಮಾಡಿದೆ.

ಇದೇ ಯುನಿವರ್ಸಿಟಿಯಲ್ಲಿ ಪದವಿ ಪಡೆದಿರುವ ಕುಸ್ತಿಯಲ್ಲಿ ಕಂಚಿನ ಪದಕ ಗೆದ್ದ ಬಜರಂಗ್ ಪೂನಿಯಾಗೂ ಕೂಡ 10 ಲಕ್ಷ ರೂಪಾಯಿ ಬಹುಮಾನ ನೀಡುವುದಾಗಿ ಘೋಷಣೆ ಮಾಡಿದೆ. ಬಜರಂಗ್​ ಪಬ್ಲಿಕ್ ಅಡ್ಮಿನಿಸ್ಟ್ರೇಷನ್​ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ .

ಭಾನುವಾ ಬೈಜುಸ್​ ಆನ್​ಲೈನ್​ ಶಿಕ್ಷಣ ಸಂಸ್ಥೆ ಕೂಡ ನೀರಜ್​ಗೆ 2 ಕೋಟಿ ರೂ. ಮತ್ತು ಇತರ 6 ಪದಕ ವಿಜೇತರಿಗೆ ತಲಾ ಒಂದು ಕೋಟಿ ರೂ ಬಹುಮಾನ ಘೋಷಿಸಿದೆ.

ಇದನ್ನು ಓದಿ:ಕಾರಿನಿಂದ ಕ್ಯಾಷ್‌ಪ್ರೈಸ್‌ವರೆಗೂ.. ಚಿನ್ನದ ಹುಡುಗ ನೀರಜ್ ಚೋಪ್ರಾಗೆ ಬಹುಮಾನಗಳ ಸುರಿಮಳೆ..

ETV Bharat Logo

Copyright © 2024 Ushodaya Enterprises Pvt. Ltd., All Rights Reserved.