ETV Bharat / sports

ಕಾಮನ್‌ವೆಲ್ತ್ ಕ್ರೀಡಾಕೂಟ ಉದ್ಘಾಟನಾ ಸಮಾರಂಭ: ಮಧ್ಯದಲ್ಲಿಯೇ ಎದ್ದು ಹೋದ ಲೊವ್ಲಿನಾ - Etv bharat kannada

ಕಾಮನ್‌ವೆಲ್ತ್ ಕ್ರೀಡಾಕೂಟದ ಉದ್ಘಾಟನಾ ಸಮಾರಂಭವು ಸುಮಾರು ಎರಡು ಗಂಟೆಗಳ ಕಾಲ ನಡೆಯಿತು. ಲೊವ್ಲಿನಾ, ಭಾರತೀಯ ಬಾಕ್ಸಿಂಗ್ ತಂಡದ ಇನ್ನೊಬ್ಬ ಸದಸ್ಯ ಮುಹಮ್ಮದ್ ಹುಸಾಮುದ್ದೀನ್ ಅಲೆಕ್ಸಾಂಡರ್ ಸ್ಟೇಡಿಯಂನಿಂದ 30 ನಿಮಿಷಗಳ ಮೊದಲೇ ಎದ್ದು ಹೋಗಿದ್ದಾರೆ.

Lovlina stranded after leaving CWG
ಒಲಿಂಪಿಕ್ ಕಂಚಿನ ಪದಕ ವಿಜೇತೆ ಭಾರತದ ಬಾಕ್ಸರ್ ಲೊವ್ಲಿನಾ ಬೊರ್ಗೊಹೈನ್
author img

By

Published : Jul 29, 2022, 5:30 PM IST

ಬರ್ಮಿಂಗ್‌ಹ್ಯಾಮ್: ಕಾಮನ್‌ವೆಲ್ತ್ ಕ್ರೀಡಾಕೂಟದ ಉದ್ಘಾಟನಾ ಸಮಾರಂಭದ ಮಧ್ಯದಲ್ಲಿಯೇ ಒಲಿಂಪಿಕ್ ಕಂಚಿನ ಪದಕ ವಿಜೇತೆ ಭಾರತದ ಬಾಕ್ಸರ್ ಲೊವ್ಲಿನಾ ಬೊರ್ಗೊಹೈನ್ ಅವರು ಎದ್ದು ಹೋಗಿದ್ದಾರೆ. ಬಳಿಕ ಅವರು ಯಾವುದೇ ವಾಹನಗಳು ಇಲ್ಲದೇ ಸುಮಾರು ಒಂದು ಗಂಟೆ ಕಾಲ ಕಾಯಬೇಕಾಯಿತು. ಲೊವ್ಲಿನಾ, ಭಾರತೀಯ ಬಾಕ್ಸಿಂಗ್ ತಂಡದ ಮತ್ತೊಬ್ಬ ಸದಸ್ಯ ಮುಹಮ್ಮದ್ ಹುಸಾಮುದ್ದೀನ್ ಜೊತೆಗೆ ಅಲೆಕ್ಸಾಂಡರ್ ಸ್ಟೇಡಿಯಂನಿಂದ 30 ನಿಮಿಷಗಳ ಮುಂಚೆಯೇ ಡ್ರೈವ್‌ನಿಂದ ಗೇಮ್ಸ್ ವಿಲೇಜ್‌ಗೆ ಬೇಗನೆ ಹೊರಡಲು ನಿರ್ಧರಿಸಿ, ಎದ್ದು ಹೋಗಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಲೊವ್ಲಿನಾ, ನಮಗೆ ಬೆಳಗ್ಗೆ ಪಂದ್ಯವಿತ್ತು, ಹಾಗಾಗಿ ತರಬೇತಿ ಪಡೆಯಬೇಕಾಗಿತ್ತು. ಸಮಾರಂಭವು ಇನ್ನೂ ತುಂಬಾ ಹೊತ್ತು ಇತ್ತು. ಆದ್ದರಿಂದ ನಾವು ಹೊರಡಲು ನಿರ್ಧರಿಸಿದೆವು. ನಾವು ಟ್ಯಾಕ್ಸಿಯನ್ನು ಕೇಳಿದೆವು, ಆದರೆ ಅದು ಸಿಗಲಿಲ್ಲ ಎಂದು ಅವರು ಹೇಳಿದರು.

ಭಾರತದ ಬಾಕ್ಸಿಂಗ್ ಫೆಡರೇಶನ್ (BFI) ಉಪಾಧ್ಯಕ್ಷರಾಗಿರುವ ಭಾರತದ ಚೆಫ್ ಡಿ ಮಿಷನ್ ರಾಜೇಶ್ ಭಂಡಾರಿ ಅವರು ಈ ಬೆಳವಣಿಗೆಯಿಂದ ಅಸಮಾಧಾನಗೊಂಡಿದ್ದಾರೆ. ನಾವು ಸಮಾರಂಭದ ಮಧ್ಯದಲ್ಲಿದ್ದೆವು. ಅವರು ಇನ್ನೊಬ್ಬ ಬಾಕ್ಸರ್ ಬೇಗನೆ ಹೋದಲು ಎಂದು ನನಗೆ ನಂತರ ತಿಳಿಯಿತು.

ನಾವೆಲ್ಲರೂ ಬಸ್‌ಗಳಲ್ಲಿ ಬಂದಿದ್ದೇವೆ ಮತ್ತು ಆ ಸಮಯದಲ್ಲಿ ಟ್ಯಾಕ್ಸಿ ಲಭ್ಯವಿರಲಿಲ್ಲ. ಅವರು ಬೇಗನೆ ಹೊರಡಲು ಬಯಸಿದರೆ ಅವರು ಬರಬಾರದಿತ್ತು. ಬೆಳಗ್ಗೆ ತರಬೇತಿ ಅಥವಾ ಸ್ಪರ್ಧೆ ಇದ್ದುದರಿಂದ ಬರದಿರಲು ನಿರ್ಧರಿಸಿದ ಹಲವಾರು ಕ್ರೀಡಾಪಟುಗಳು ಇದ್ದರು. ಅದನ್ನು ನಾವು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳುತ್ತೇವೆ. ಈ ಬಗ್ಗೆ ಬಾಕ್ಸಿಂಗ್ ತಂಡದೊಂದಿಗೆ ಮಾತನಾಡುತ್ತೇನೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: Commonwealth Games ಟಿ -20 ಕ್ರಿಕೆಟ್​​: ಟಾಸ್​ ಗೆದ್ದು ಬ್ಯಾಟಿಂಗ್​ ಆಯ್ದುಕೊಂಡ ಟೀಂ ಇಂಡಿಯಾ

ಒಟ್ಟು 164 ಅಥ್ಲೀಟ್‌ಗಳು ಮತ್ತು ಅಧಿಕಾರಿಗಳು ಸಮಾರಂಭದಲ್ಲಿ ಭಾಗವಹಿಸಿದ್ದರು. ಮಹಿಳಾ ಕ್ರಿಕೆಟ್ ತಂಡದ ಸದಸ್ಯರು ಸಹ ಮರುದಿನ ಬೆಳಗ್ಗೆ ತಮ್ಮ ಆರಂಭಿಕ ಪಂದ್ಯದಿಂದಾಗಿ ಹೋಟೆಲ್‌ನಲ್ಲಿಯೇ ಉಳಿದಿದ್ದರು. ಈ ಪಂದ್ಯಕ್ಕೂ ಮೊದಲು ಭಾರತ ಬಾಕ್ಸಿಂಗ್ ಫೆಡರೇಶನ್ (ಬಿಎಫ್‌ಐ) ವಿರುದ್ಧ ಲೊವ್ಲಿನಾ ಗಂಭೀರ ಆರೋಪ ಮಾಡಿದ್ದಾರೆ. ಬಿಎಫ್‌ಐ ತನಗೆ ಮಾನಸಿಕ ಕಿರುಕುಳ ನೀಡುತ್ತಿದೆ ಎಂದು ಆರೋಪಿಸಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.