ETV Bharat / sports

ಕುಸ್ತಿಪಟುಗಳ ಪ್ರತಿಭಟನೆ: ರೈತ ಸಂಘಗಳು, ಖಾಪ್‌ಗಳ ಬೆಂಬಲ.. ಆರೋಪಿ ಬಂಧನಕ್ಕೆ ಮೇ 21 ಗಡುವು - Bhartiya Kisan Union

ದೆಹಲಿಯ ಜಂತರ್​ ಮಂತರ್​ನಲ್ಲಿ ನಡೆಯುತ್ತಿರುವ ಕುಸ್ತಿಪಟುಗಳ ಪ್ರತಿಭಟನೆಗೆ ರೈತ ಸಂಘಗಳು, ಖಾಪ್‌ಗಳ ಬೆಂಬಲ ಸೂಚಿಸಿದ್ದಾರೆ.

Wrestlers' protest: Farmer unions, Khaps join in, give govt May 21 deadline
ಕುಸ್ತಿಪಟುಗಳ ಪ್ರತಿಭಟನೆ: ರೈತ ಸಂಘಗಳು, ಖಾಪ್‌ಗಳ ಬೆಂಬಲ.. ಬಂಧನಕ್ಕೆ ಮೇ 21 ಗಡುವು
author img

By

Published : May 7, 2023, 10:45 PM IST

ನವದೆಹಲಿ: ಡಬ್ಲ್ಯುಎಫ್‌ಐ ಮುಖ್ಯಸ್ಥ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಮಾಡಿ ಪ್ರತಿಭಟನೆ ನಡೆಸುತ್ತಿರುವ ಕುಸ್ತಿಪಟುಗಳಿಗೆ ಖಾಪ್ ಪಂಚಾಯತ್ ಮುಖಂಡರು ಭಾನುವಾರ ಬೆಂಬಲ ನೀಡಿದ್ದಾರೆ. ಈ ಬಗ್ಗೆ ಪರಿಶೀಲಿಸಲು ಖಾಪ್ ಸರ್ಕಾರಕ್ಕೆ 15 ದಿನಗಳ ಗಡುವು ನೀಡಿತು. ಅಲ್ಲದೆ, ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರನ್ನು ಬಂಧಿಸುವಂತೆ ಒತ್ತಾಯಿಸಿದ್ದಾರೆ.

ಪ್ರತಿಭಟನಾ ನಿರತ ಕುಸ್ತಿಪಟುಗಳಿಗೆ ಸಲಹೆ ನೀಡುತ್ತಿರುವ 31 ಸದಸ್ಯರ ಸಮಿತಿಯು ಮೇ 21 ರೊಳಗೆ ಡಬ್ಲ್ಯುಎಫ್‌ಐ ಮುಖ್ಯಸ್ಥ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರನ್ನು ಬಂಧಿಸದಿದ್ದರೆ, "ಮಹತ್ವದ ನಿರ್ಧಾರ" ತೆಗೆದುಕೊಳ್ಳುವುದಾಗಿ ಹೇಳಿದೆ. ಭಾರತೀಯ ಕಿಸಾನ್ ಯೂನಿಯನ್ (ಬಿಕೆಯು) ವಕ್ತಾರ ರಾಕೇಶ್ ಟಿಕೈತ್, ಖಾಪ್ ಮಹಮ್ 24 ಮುಖ್ಯಸ್ಥ ಮೆಹರ್ ಸಿಂಗ್ ಮತ್ತು ಸಂಕ್ಯುತ್ ಕಿಸಾನ್​ ಮೋರ್ಚಾದ (ರಾಜಕೀಯೇತರ) ಬಲದೇವ್ ಸಿಂಗ್ ಸಿರ್ಸಾ ಅವರು ಡಯಾಸ್‌ನಲ್ಲಿ ಕುಸ್ತಿಪಟುಗಳೊಂದಿಗೆ ಸೇರಿಕೊಂಡು ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದರು.

Wrestlers' protest: Farmer unions, Khaps join in, give govt May 21 deadline
ಜಂತರ್ ಮಂತರ್​ನಲ್ಲಿ ಕುಸ್ತಿಪಟುಗಳ ಕ್ಯಾಂಡಲ್ ಮೆರವಣಿಗೆ

"ಖಾಪ್ ಪಂಚಾಯತ್ ಮತ್ತು ಎಸ್‌ಕೆಎಂನ ಅನೇಕ ಮುಖಂಡರು ಇಂದು ಸಭೆಯಲ್ಲಿ ಭಾಗವಹಿಸಿದ್ದರು. ಪ್ರತಿ ಖಾಪ್‌ನ ಸದಸ್ಯರು ಪ್ರತಿದಿನ ಪ್ರತಿಭಟನಾ ಸ್ಥಳಕ್ಕೆ ಬರಲು ನಾವು ನಿರ್ಧರಿಸಿದ್ದೇವೆ. ಅವರು ಹಗಲಿನಲ್ಲಿ ಇಲ್ಲಿಯೇ ಇದ್ದು ಸಂಜೆಯ ವೇಳೆಗೆ ಹಿಂತಿರುಗುತ್ತಾರೆ" ಎಂದು ಟಿಕಾಯತ್ ಬೃಹತ್ ಸಭೆಯ ಮೊದಲು ಹೇಳಿದರು. "ಕುಸ್ತಿಪಟುಗಳ ಸಮಿತಿಯು ಪ್ರತಿಭಟನೆಯನ್ನು ನೋಡಿಕೊಳ್ಳುತ್ತದೆ ಮತ್ತು ನಾವು ಹೊರಗಿನಿಂದ ಕುಸ್ತಿಪಟುಗಳಿಗೆ ಬೆಂಬಲ ನೀಡುತ್ತೇವೆ. ಮೇ 21 ರ ಒಳಗೆ ಸರ್ಕಾರವು ನಿರ್ಣಯವನ್ನು ನೀಡದಿದ್ದರೆ, ನಾವು ನಮ್ಮ ಮುಂದಿನ ಕಾರ್ಯತಂತ್ರವನ್ನು ರೂಪಿಸುತ್ತೇವೆ" ಎಂದು ಅವರು ಹೇಳಿದರು.

ಇದೇ ವೇಳೆ ಸರ್ಕಾರಕ್ಕೆ ಮೇ 21ರವರೆಗೆ ಕಾಲಾವಕಾಶ ನೀಡಲಾಗಿದೆ ಎಂದು ಕುಸ್ತಿಪಟು ವಿನೇಶ್ ಫೋಗಟ್ ಹೇಳಿದ್ದಾರೆ. ಆ ದಿನದವರೆಗೂ ನಮ್ಮ ಬೇಡಿಕೆಗೆ ಮನ್ನಣೆ ಸಿಗದಿದ್ದರೆ ಮುಂದೆ ಏನಾದರೂ ದೊಡ್ಡ ನಿರ್ಧಾರ ತೆಗೆದುಕೊಳ್ಳುತ್ತೇವೆ. ಈ ಹೋರಾಟವನ್ನು ಯಾರೂ ಹೈಜಾಕ್ ಮಾಡಿಲ್ಲ. ಅನ್ಯಾಯದ ವಿರುದ್ಧದ ಹೋರಾಟದಲ್ಲಿ ಪಾಲ್ಗೊಂಡಿದ್ದಕ್ಕಾಗಿ ನಾವು ಇಡೀ ದೇಶಕ್ಕೆ ಧನ್ಯವಾದಗಳು. ನೀವು ಹೆಣ್ಣುಮಕ್ಕಳೊಂದಿಗೆ ನಿಂತು ಪ್ರೋತ್ಸಾಹಿಸುತ್ತಿದ್ದೀರಿ. ಇದು ಎಲ್ಲಿಯ ವರೆಗೆ ತಲುಪಿದರೂ ಅದನ್ನು ಎದುರಿಸಲು ಸಿದ್ಧ. ನಾವೂ ನಮ್ಮ ತರಬೇತಿಯನ್ನು ನೋಡಿಕೊಂಡು ಮುಂದುವರಿಯುತ್ತೇವೆ, ಅದನ್ನು ಕೂಡ ತಪ್ಪಿಸಿಕೊಳ್ಳಬಾರದು. ಸಿಂಗ್​​ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಆದರೆ ಸೆಕ್ಷನ್ 164 ರ ಅಡಿಯಲ್ಲಿ ಹೇಳಿಕೆಯನ್ನು ಇನ್ನೂ ದಾಖಲಿಸಲಾಗಿಲ್ಲ. ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರನ್ನು ಮೊದಲು ಬಂಧಿಸಿ ನಂತರ ವಿಚಾರಣೆ ನಡೆಸಬೇಕು ಎಂದು ನಾವು ಒತ್ತಾಯಿಸುತ್ತೇವೆ ಎಂದರು.

ಜಂತರ್ ಮಂತರ್​ನಲ್ಲಿ ಕುಸ್ತಿಪಟುಗಳ ಕ್ಯಾಂಡಲ್ ಮೆರವಣಿಗೆ: ರೈತ ಮುಖಂಡ ಟಿಕಾಯತ್ ಅವರು ಬೆಳಗ್ಗೆ ನಡೆದ ಸಭೆಯಲ್ಲಿ ಹೇಳಿದಂತೆ ದೆಹಲಿಯ ಜಂತರ್ ಮಂತರ್​ನಲ್ಲಿ ಕುಸ್ತಿಪಟುಗಳು ಕ್ಯಾಂಡಲ್ ಮಾರ್ಚ್ ನಡೆಸಿದರು. ಈ ಕ್ಯಾಂಡಲ್ ಮೆರವಣಿಗೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಪಾಲ್ಗೊಂಡಿದ್ದರು. ಈ ವೇಳೆ ಜನರು ವಂದೇ ಮಾತರಂ ಮತ್ತು ಭಾರತ್ ಮಾತಾ ಕೀ ಜೈ ಎಂಬ ಘೋಷಣೆಗಳನ್ನು ಕೂಗಿದರು. ಸಾಕ್ಷಿ ಮಲಿಕ್, ವಿನೇಶ್ ಫೋಗಟ್, ಬಜರಂಗ್ ಪೂನಿಯಾ ಅವರೊಂದಿಗೆ ಅನೇಕ ಕುಸ್ತಿಪಟುಗಳು, 360 ಗ್ರಾಮದ ಪಾಲಂನ ಮುಖ್ಯಸ್ಥ ಸುರೇಂದ್ರ ಸೋಲಂಕಿ ಕೂಡ ಕ್ಯಾಂಡಲ್ ಮಾರ್ಚ್‌ನಲ್ಲಿ ಭಾಗವಹಿಸಿದ್ದರು.

ಇದನ್ನೂ ಓದಿ: RR vs SRH: ಬಟ್ಲರ್​ - ಸಂಜು ಭರ್ಜರಿ ಆಟ, ಸನ್​ ರೈಸರ್ಸ್​ಗೆ 215 ರನ್​ ಬೃಹತ್​ ಗುರಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.