ETV Bharat / sports

ಪುರುಷರ ಅಂತಾರಾಷ್ಟ್ರೀಯ ಕ್ರಿಕೆಟ್‌ ಪಂದ್ಯಕ್ಕೆ ಮೊದಲ ಮಹಿಳಾ ಅಂಪೈರ್‌ ಕಿಮ್ ಕಾಟನ್!

ಅಂತಾರಾಷ್ಟ್ರೀಯ ಪುರುಷರ ಕ್ರಿಕೆಟ್​ನಲ್ಲಿ ಮೊದಲ ಮಹಿಳಾ ಅಂಪೈರ್​ ಆಗಿ ಕಿಮ್ ಕಾಟನ್ ಕಾರ್ಯನಿರ್ವಹಿಸಿ ಇತಿಹಾಸ ಸೃಷ್ಟಿದ್ದಾರೆ.

first female to umpire in men's international match featuring full-member countries
ಇತಿಹಾಸವನ್ನು ಸೃಷ್ಟಿಸಿದ ಕಿಮ್ ಕಾಟನ್
author img

By

Published : Apr 5, 2023, 9:22 PM IST

ಡ್ಯುನೆಡಿನ್ (ನ್ಯೂಜಿಲೆಂಡ್): ಇಲ್ಲಿ ನಡೆದ ನ್ಯೂಜಿಲೆಂಡ್- ಶ್ರೀಲಂಕಾ ನಡುವಿನ ಪುರುಷರ ಎರಡನೇ ಟಿ20 ಪಂದ್ಯಕ್ಕೆ ಕಿಮ್ ಕಾಟನ್ ಎಂಬ ಮಹಿಳೆ ಅಂಪೈರಿಂಗ್​ ಮಾಡಿದರು. ಈ ಮೂಲಕ ಅವರು ಇತಿಹಾಸ ನಿರ್ಮಿಸಿದ್ದಾರೆ. ಪುರುಷರ ಅಂತರಾಷ್ಟ್ರೀಯ ಕ್ರಿಕೆಟ್​ಗೆ ಅಂಪೈರ್ ಕಾರ್ಯ ನಿರ್ವಹಿಸಿದ ಮೊದಲ ಮಹಿಳೆ ಎಂಬ ಕೀರ್ತಿ ಇವರಿಗೆ ಸಲ್ಲುತ್ತಿದೆ.

ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಈ ಐತಿಹಾಸಿಕ ಕ್ಷಣವನ್ನು ತನ್ನ ಟ್ವಿಟರ್​ ಪೇಜ್​ನಲ್ಲಿ ಹಂಚಿಕೊಂಡಿದೆ. "ನ್ಯೂಜಿಲೆಂಡ್ ಮತ್ತು ಶ್ರೀಲಂಕಾ ನಡುವಿನ 2ನೇ ಅಂತಾರಾಷ್ಟ್ರೀಯ ಟಿ20 ಸಮಯದಲ್ಲಿ ಕಿಮ್ ಕಾಟನ್ ಎರಡು ಐಸಿಸಿ ಪೂರ್ಣ ಸದಸ್ಯ ರಾಷ್ಟ್ರಗಳ ನಡುವಿನ ಪುರುಷರ ಪಂದ್ಯದಲ್ಲಿ ಅಂಪೈರ್​ ಆಗಿ ಕಾರ್ಯನಿರ್ವಹಿಸಿ ಇತಿಹಾಸ ಸೃಷ್ಟಿಸಿದರು" ಎಂದು ತಿಳಿಸಿದೆ.

  • Kim Cotton created history during the second #NZvSL T20I by becoming the first female umpire to stand in a men’s international match between two ICC Full Member countries 👏 pic.twitter.com/Kpez8BA1UP

    — ICC (@ICC) April 5, 2023 " class="align-text-top noRightClick twitterSection" data=" ">

ಪಂದ್ಯ: ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ನ್ಯೂಜಿಲೆಂಡ್ 9 ವಿಕೆಟ್​​ಗಳ ಜಯ ಸಾಧಿಸಿತು. ಈ ಪಂದ್ಯದಲ್ಲಿ ವೇಗದ ಬೌಲರ್ ಆಡಮ್ ಮಿಲ್ನೆ ಬಿರುಗಾಳಿ ಎಬ್ಬಿಸಿದರು. ಮಿಲ್ನೆ ಶ್ರೀಲಂಕಾ ತಂಡದ ಪ್ರಮುಖ ಐದು ವಿಕೆಟ್​ ಉರುಳಿಸಿದ್ದಲ್ಲದೇ, ವೇಗದ ಎಸೆತಕ್ಕೆ ಪಾಥುಮ್ ನಿಸ್ಸಾಂಕಾ ಅವರ ಬ್ಯಾಟ್ ಮುರಿದು ಬಿತ್ತು. ಕಿವೀಸ್​ ಬೌಲಿಂಗ್​ ದಾಳಿಗೆ ನಲುಗಿದ ಸಿಂಹಳೀಯರು 19 ಓವರ್​ಗೆ ಆಲ್​ಔಟ್​ ಆಗಿ 141 ರನ್‌ಗಳ ಸಾಧಾರಣ ಗುರಿ ನೀಡಿದರು.

ಮೊದಲ ಓವರ್​ನಲ್ಲೇ ಬ್ಯಾಟ್​ ಮುರಿದ ಮಿಲ್ನೆ: ಮೊದಲ ಓವರ್​ನ ಐದನೇ ಎಸೆತ​ಕ್ಕೆ ಪಾಥುಮ್ ನಿಸ್ಸಾಂಕಾ ಡಿಫೆನ್ಸ್​ ಮಾಡಿದರು. ಬಾಲ್​ ಹಿಡಿಕೆಯ ಕೆಳಭಾಗಕ್ಕೆ ತಗುಲಿತ್ತು. ವೇಗಕ್ಕೆ ಬ್ಯಾಟ್​ ಎರಡು ತಂಡಾಯಿತು. 3.4 ನೇ ಎಸೆತದಲ್ಲಿ ನಿಸ್ಸಾಂಕಾ ಮಿಲ್ನೆಗೆ ವಿಕೆಟ್​ ಕೊಟ್ಟು ಪೆವಿಲಿಯನ್​ಗೆ ಮರಳಿದರು. ವಿಕೆಟ್ ಕೀಪರ್ ಕುಸಾಲ್ ಮೆಂಡಿಸ್ ಅವರನ್ನು 10 ರನೌಟ್​ ಆದರೆ, ನಂತರದ ಬ್ಯಾಟರ್​ಗಳಾದ ಕುಸಾಲ್ ಪೆರೆರಾ (35), ಚರಿತ್ ಅಸಲಂಕಾ (24), ಪ್ರಮೋದ್ ಮದುಶನ್ (1) ಮತ್ತು ದಿಶಾನ್ ಮಧುಶಂಕ (0) ಅವರನ್ನು ಆಡಮ್ ಮಿಲ್ನೆ ಹೊರಹಾಕಿದರು. ಮಿಲ್ನೆ 4 ಓವರ್‌ಗಳಲ್ಲಿ 26 ರನ್‌ ಕೊಟ್ಟು 5 ವಿಕೆಟ್​ ಪಡೆದರು. ಬೆನ್ ಲಿಸ್ಟರ್ ಎರಡು ಮತ್ತು ಹೆನ್ರಿ ಶಿಪ್ಲಿ, ರಚಿನ್ ರವೀಂದ್ರ ಮತ್ತು ಜೇಮ್ಸ್ ನೀಶಮ್ ತಲಾ 1 ವಿಕೆಟ್ ಪಡೆದರು.

142 ರನ್‌ಗಳ ಗುರಿಯನ್ನು ನ್ಯೂಜಿಲೆಂಡ್ 14.4 ಓವರ್‌ಗಳಲ್ಲಿ ಒಂದು ವಿಕೆಟ್ ಕಳೆದುಕೊಂಡು ಸಾಧಿಸಿತು. ಚಾಡ್ ಬೋವ್ಸ್ 31 ರನ್‌ಗಳ ಇನಿಂಗ್ಸ್ ಆಡಿದರು. ಟಿಮ್ ಸೀಫರ್ಟ್ ಅಜೇಯ 79 ರನ್ ಮತ್ತು ಟಾಮ್ ಲ್ಯಾಥಮ್ 20 ರನ್ ಗಳಿಸಿ ತಂಡವನ್ನು ಗೆಲುವಿನ ಗುರಿ ಮುಟ್ಟಿಸಿದರು. ಮಿಲ್ನೆ ಅವರಿಗಿದು ಮೊದಲ ಪಂಚ ವಿಕೆಟ್​ ಸಾಧನೆಯಾಗಿದೆ. ಇದುವರೆಗೆ ಅವರು 37 ಟಿ20 ಪಂದ್ಯಗಳಲ್ಲಿ 42 ವಿಕೆಟ್‌ಗಳನ್ನು ಪಡೆದಿದ್ದಾರೆ.

ಮೊದಲ ಟಿ20 ಪಂದ್ಯ ರೋಚಕ ಟೈನಲ್ಲಿ ಅಂತ್ಯವಾಗಿ, ಲಂಕಾ ಸೂಪರ್​ ಓವರ್​ನಲ್ಲಿ ಗೆಲುವು ಕಂಡಿತ್ತು. ಪಂದ್ಯದಲ್ಲಿ ನ್ಯೂಜಿಲೆಂಡ್​ ಗೆದ್ದಿದ್ದು ಸರಣಿ ಸಮಬಲವಾಗಿದೆ. ಮೂರನೇ ಟಿ20 ಪಂದ್ಯ ಏಪ್ರಿಲ್ 8 ರಂದು ನಡೆಯಲಿದ್ದು, ಇದು ಫೈನಲ್​ ಪಂದ್ಯವಾಗಿದೆ.

ಇದನ್ನೂ ಓದಿ: IPL 2023 RR vs PBKS: ಟಾಸ್​ ಗೆದ್ದ ಸಂಜು ಸ್ಯಾಮ್ಸನ್​ ಬೌಲಿಂಗ್​ ಆಯ್ಕೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.