ನವದೆಹಲಿ: ಆರ್ಚರಿ (ಬಿಲ್ಲುಗಾರಿಕೆ) ವಿಶ್ವಚಾಂಪಿಯನ್ಶಿಪ್ನಲ್ಲಿ 3 ಬೆಳ್ಳಿ ಪದಕ ಗೆದ್ದಿದ್ದ ಜ್ಯೋತಿ ಸುರೇಖ ವೆಣ್ಣಮ್ (Jyothi Surekha Vennam) ಏಷ್ಯನ್ ಆರ್ಚರಿ ಚಾಂಪಿಯನ್ಶಿಪ್ನಲ್ಲಿ (Asian Archery Championships) ದಕ್ಷಿಣ ಕೊರಿಯಾದ ಓಹ್ ಯೂಹ್ಯುನ್ ಅವರನ್ನು ಒಂದು ಅಂಕದಿಂದ ಮಣಿಸಿ ಕಾಂಪೌಂಡ್ ವಿಭಾಗದಲ್ಲಿ ಚಿನ್ನದ ಪದಕದ ಸಾಧನೆ ಮಾಡಿದರು.
ಕಳೆದ ಸೆಪ್ಟೆಂಬರ್ನಲ್ಲಿ ಯಂಕ್ಟಾನ್ ವಿಶ್ವಚಾಂಪಿಯನ್ಶಿಪ್ನಲ್ಲಿ 3 ಬೆಳ್ಳಿ ಪದಕಗಳನ್ನು ಗೆದ್ದಿದ್ದ ಜ್ಯೋತಿ ಫೈನಲ್ನಲ್ಲಿ ಓಹ್ ಯೂಹ್ಯುನ್ ಅವರನ್ನು 146-145 ಅಂಕಗಳ ಅಂತರದಿಂದ ಮಣಿಸಿ ಏಷ್ಯನ್ ಆರ್ಚರಿ ಚಾಂಪಿಯನ್ಶಿಪ್ನಲ್ಲಿ ಗಣನೀಯ ಸಾಧನೆ ತೋರಿದ್ದಾರೆ.
ಇದಕ್ಕೂ ಮುನ್ನ ಸೆಮಿಫೈಲ್ನಲ್ಲಿ 2015ರ ವಿಶ್ವಚಾಂಪಿಯನ್ ಕಿಮ್ ಯುನ್ಹೀ ವಿರುದ್ಧ ಭಾರತೀಯ ಬಿಲ್ಲುಗಾರ್ತಿ 148-143 ಅಂಕಗಳ ಅಂತರದಲ್ಲಿ ಜಯ ಸಾಧಿಸಿದ್ದರು.
ಡಬಲ್ಸ್ನಲ್ಲಿ ಬೆಳ್ಳಿ:
ಸಿಂಗಲ್ಸ್ನಲ್ಲಿ ಚಿನ್ನ ಗೆದ್ದ ಜ್ಯೋತಿ ವೆಣ್ಣಮ್ ಮಿಶ್ರ ಡಬಲ್ಸ್ನಲ್ಲೂ ಬೆಳ್ಳಿ ಪದಕಕ್ಕೆ ಕೊರಳೊಡ್ಡಿದರು. ಜ್ಯೋತಿ ಮತ್ತು ರಿಷಭ್ ಯಾದವ್ ಜೋಡಿ ಕೊರಿಯಾದ ಅಗ್ರ ಶ್ರೇಯಾಂಕದ ಕಿಮ್ ಯುನ್ಹೀ ಮತ್ತು ಚೋಯ್ ಯಂಗ್ಹೀ ಜೋಡಿ ವಿರುದ್ಧ 155-154 ಅಂತರದಿಂದ ಸೋಲು ಕಂಡು ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟುಕೊಂಡರು.
ಇದನ್ನೂ ಓದಿ: Mushtaq Ali Trophy: ಬೆಂಗಾಲ್ ಮಣಿಸಿ ಸೆಮಿಫೈನಲ್ಸ್ ಪ್ರವೇಶಿಸಿದ ಕರ್ನಾಟಕದ ಆಟ 'ಸೂಪರ್'