ಭುವನೇಶ್ವರ(ಒಡಿಶಾ): ಆರು ಬಾರಿಯ ಚಾಂಪಿಯನ್ ಜರ್ಮನಿ ವಿರುದ್ಧ ಸೆಮಿಫೈನಲ್ನಲ್ಲಿ 2-4 ಅಂತರದಿಂದ ಸೋಲು ಕಾಣುವ ಮೂಲಕ ಭಾರತ ಕಿರಿಯರ ಹಾಕಿ ತಂಡ ವಿಶ್ವಕಪ್ ಟೂರ್ನಿಯಿಂದ ಹೊರಬಿದ್ದಿದೆ. ಈ ಮೂಲಕ ಹಾಲಿ ಚಾಂಪಿಯನ್ ಭಾರತ ನಿರಾಸೆಗೊಳಗಾಗಿದೆ. ಇದೀಗ ಫ್ರಾನ್ಸ್ ವಿರುದ್ಧ ಕಂಚಿಗಾಗಿ ಹೋರಾಟ ನಡೆಸಲಿದೆ.
ಭುವನೇಶ್ವರದ ಕಾಳಿಂಗ ಮೈದಾನದಲ್ಲಿ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಭಾರತ ತಂಡ ಜರ್ಮನಿ ವಿರುದ್ಧ ಸೋಲು ಕಂಡು, ಪ್ರಶಸ್ತಿ ಸುತ್ತಿನಿಂದ ಹೊರ ಬಂದಿದೆ. ಆರಂಭದಿಂದಲೂ ಭಾರತದ ಮೇಲೆ ಸವಾರಿ ಮಾಡಿದ ಬಲಿಷ್ಠ ಜರ್ಮನಿ 8ನೇ ಬಾರಿ ಫೈನಲ್ಗೆ ಪ್ರವೇಶ ಪಡೆದುಕೊಂಡಿದೆ.
-
Not the result we wanted but we gave it our all 💪
— Hockey India (@TheHockeyIndia) December 3, 2021 " class="align-text-top noRightClick twitterSection" data="
Here's how our Semi-Final match against Germany went 📸#IndiaKaGame #JWC2021 #RisingStars pic.twitter.com/U2DLNuGHve
">Not the result we wanted but we gave it our all 💪
— Hockey India (@TheHockeyIndia) December 3, 2021
Here's how our Semi-Final match against Germany went 📸#IndiaKaGame #JWC2021 #RisingStars pic.twitter.com/U2DLNuGHveNot the result we wanted but we gave it our all 💪
— Hockey India (@TheHockeyIndia) December 3, 2021
Here's how our Semi-Final match against Germany went 📸#IndiaKaGame #JWC2021 #RisingStars pic.twitter.com/U2DLNuGHve
ಮೊದಲಾರ್ಧದಲ್ಲಿ 2 ಪಾಯಿಂಟ್ ಪಡೆದುಕೊಂಡು ಮುನ್ನಡೆ ಕಾಯ್ದುಕೊಂಡಿದ್ದ ಜರ್ಮನಿ ತಂಡ ಕೊನೆಯಾರ್ಧದಲ್ಲಿ ಮತ್ತೆರೆಡು ಗೋಲು ಗಳಿಕೆ ಮಾಡಿತ್ತು. ಆದರೆ ಭಾರತ ಎರಡು ಗೋಲು ಗಳಿಕೆ ಮಾಡಲು ಮಾತ್ರ ಶಕ್ತವಾಯಿತು.
ಲೀಗ್ ಹಂತದಲ್ಲಿ ತಾನು ಆಡಿದ ಮೊದಲ ಪಂದ್ಯದಲ್ಲಿ ಫ್ರಾನ್ಸ್ ವಿರುದ್ಧ ಸೋಲು ಕಂಡಿದ್ದ ವಿವೇಕ್ ಸಾಗರ್ ನೇತೃತ್ವದ ಭಾರತ ತದನಂತರ ಕೆನಡಾ, ಪೋಲೆಂಡ್ ವಿರುದ್ಧ ಜಯ ಸಾಧಿಸಿ, ಅಂತಿಮ 8ರ ಘಟ್ಟಕ್ಕೆ ಪ್ರವೇಶ ಪಡೆದುಕೊಂಡಿತ್ತು. ಬಳಿಕ ಕ್ವಾರ್ಟರ್ ಫೈನಲ್ನಲ್ಲಿ ಬೆಲ್ಜಿಯಂ ವಿರುದ್ಧ ಜಯ ಸಾಧಿಸಿ, ಸೆಮೀಸ್ಗೆ ಲಗ್ಗೆ ಹಾಕಿತ್ತು. ಆದರೆ ಈ ಪಂದ್ಯದಲ್ಲಿ ಸೋತು ನಿರಾಸೆಗೊಳಗಾಗಿದೆ.
ಫೈನಲ್ನಲ್ಲಿ ಜರ್ಮನಿ-ಅರ್ಜೆಂಟೀನಾ ಫೈಟ್
ಮತ್ತೊಂದು ಸೆಮಿಫೈನಲ್ ಪಂದ್ಯದಲ್ಲಿ ಫ್ರಾನ್ಸ್ ವಿರುದ್ಧ ಪೆನಾಲ್ಟಿ ಕಾರ್ನರ್ನಲ್ಲಿ 3-1 ಅಂತರದಿಂದ ಗೆಲುವು ಸಾಧಿಸಿರುವ ಅರ್ಜೆಂಟೀನಾ ತಂಡ ಫೈನಲ್ಗೆ ಪ್ರವೇಶಿಸಿದೆ. ಪ್ರಶಸ್ತಿಗಾಗಿ ಜರ್ಮನಿ-ಅರ್ಜೆಂಟೀನಾ ಸೆಣಸಾಟ ನಡೆಸಲಿವೆ.