ETV Bharat / sports

ಜಾವೆಲಿನ್ ಥ್ರೋನಲ್ಲಿ ಭಾರತಕ್ಕೆ ಐತಿಹಾಸಿಕ ಚೊಚ್ಚಲ ಚಿನ್ನದ ಪದಕ: ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್​ನಲ್ಲಿ ಚೋಪ್ರಾ ಭರ್ಜರಿ ಸಾಧನೆ.. - ಭಾರತಕ್ಕೆ ಐತಿಹಾಸಿಕ ಚೊಚ್ಚಲ ಚಿನ್ನದ ಪದಕ

World Athletics Championship 2023: ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್​ನ ಜಾವೆಲಿನ್ ಥ್ರೋನಲ್ಲಿ ನೀರಜ್ ಚೋಪ್ರಾ ಭಾರತಕ್ಕೆ ಐತಿಹಾಸಿಕ ಮೊದಲ ಚಿನ್ನದ ಪದಕ ಗೆದ್ದಿದ್ದಾರೆ. ತನ್ನ ಎರಡನೇ ಪ್ರಯತ್ನದಲ್ಲಿ 88.17 ಮೀಟರ್ ಜಾವೆಲಿನ್ ಎಸೆದು ಭಾರತದ ಹೆಗ್ಗಳಿಕೆಗೆ ಪಾತ್ರವಾದರು.

World Athletics Championship 2023
ಜಾವೆಲಿನ್ ಥ್ರೋನಲ್ಲಿ ಭಾರತಕ್ಕೆ ಐತಿಹಾಸಿಕ ಚೊಚ್ಚಲ ಚಿನ್ನದ ಪದಕ ಗೆದ್ದ ನೀರಜ್ ಚೋಪ್ರಾ: ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್​ನಲ್ಲಿ ಭರ್ಜರಿ ಸಾಧನೆ..
author img

By ETV Bharat Karnataka Team

Published : Aug 28, 2023, 6:56 AM IST

Updated : Aug 28, 2023, 7:08 AM IST

ಬುಡಾಪೆಸ್ಟ್‌ (ಹಂಗೇರಿ): ಭಾರತದ ಒಲಿಂಪಿಕ್‌ ಚಾಂಪಿಯನ್‌ ನೀರಜ್‌ ಚೋಪ್ರಾ ಅವರು ಭಾನುವಾರ ನಡೆದ ವಿಶ್ವ ಅಥ್ಲೆಟಿಕ್ಸ್‌ ಚಾಂಪಿಯನ್‌ಶಿಪ್‌ನಲ್ಲಿ ಭಾರತಕ್ಕೆ ಐತಿಹಾಸಿಕ ಚೊಚ್ಚಲ ಚಿನ್ನದ ಪದಕ ಗೆದ್ದುಕೊಟ್ಟಿದ್ದಾರೆ. ಇಲ್ಲಿ ನಡೆಯುತ್ತಿರುವ ಪುರುಷರ ಜಾವೆಲಿನ್ ಥ್ರೋ ಸ್ಪರ್ಧೆಯಲ್ಲಿ ಚಿನ್ನದ ಪದಕಕ್ಕೆ ಮುತ್ತಿಕ್ಕಿದ್ದಾರೆ.

ಕಳೆದ ಕೆಲವು ತಿಂಗಳುಗಳಿಂದ ಗಾಯದಿಂದ ಬಳಲುತ್ತಿದ್ದ ಚೋಪ್ರಾ, ಹಂಗೇರಿಯ ರಾಜಧಾನಿಯಲ್ಲಿ ನಡೆದ ಸ್ಪರ್ಧೆಯಲ್ಲಿ ತನ್ನ ಎರಡನೇ ಸರದಿಯಲ್ಲಿ 88.17 ರ ಬೃಹತ್ ಎಸೆತದೊಂದಿಗೆ ಚಿನ್ನಕ್ಕೆ ಮುತ್ತಿಕ್ಕುವಲ್ಲಿ ಯಶಸ್ವಿಯಾಗಿದ್ದಾರೆ.

Javelin thrower Neeraj Chopra wins India's first gold
ಜಾವೆಲಿನ್ ಥ್ರೋನಲ್ಲಿ ಭಾರತಕ್ಕೆ ಐತಿಹಾಸಿಕ ಚೊಚ್ಚಲ ಚಿನ್ನದ ಪದಕ ಗೆದ್ದ ನೀರಜ್ ಚೋಪ್ರಾ: ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್​ನಲ್ಲಿ ಭರ್ಜರಿ ಸಾಧನೆ..

ಪಾಕಿಸ್ತಾನದ ಅರ್ಷದ್ ನದೀಮ್ 87.82 ಅಂತರ ಎಸೆದು, ತಮ್ಮ ದೇಶಕ್ಕೆ ಮೊದಲ ವಿಶ್ವ ಚಾಂಪಿಯನ್‌ಶಿಪ್​ನಲ್ಲಿ ಬೆಳ್ಳಿ ಪದಕವನ್ನು ಪಡೆದರು. ಜೆಕ್ ಗಣರಾಜ್ಯದ ಯಾಕೂಬ್ ವಡ್ಲೆಜ್ 86.67 ಜಾವೆಲಿನ್ ಎಸೆದು ಕಂಚಿನ ಪದಕಕ್ಕೆ ತೃಪ್ಪಿಪಟ್ಟುಕೊಂಡರು. ಕಣದಲ್ಲಿದ್ದ ಇತರ ಇಬ್ಬರು ಭಾರತೀಯರು ಕೂಡ ಅತ್ಯುತ್ತಮ ಪ್ರದರ್ಶನ ತೋರಿದರಾದರೂ ಪದಕ ಪಡೆಯುವಲ್ಲಿ ವಿಫಲರಾದರು. ಕಿಶೋರ್ ಕುಮಾರ್ ಜೆನಾ ಅವರು 84.77ರ ವೈಯಕ್ತಿಕ ಅತ್ಯುತ್ತಮ ಎಸೆತದೊಂದಿಗೆ ಐದನೇ ಸ್ಥಾನ ಪಡೆದರು. ಮನು 84.14 ಅಂಕಗಳೊಂದಿಗೆ ಆರನೇ ಸ್ಥಾನ ಪಡೆದರು. ಆದರೆ, ಭಾರತವು ನೀರಜ್ ಚೋಪ್ರಾರಿಂದ ಹೆಚ್ಚಿನ ಭರವಸೆ ಹೊಂದಿತ್ತು. ಚೋಪ್ರಾ ತಮ್ಮ ಎರಡನೇ ರೌಂಡ್​ನಲ್ಲಿ ಅದ್ಭುತವಾದ ಎಸೆತದೊಂದಿಗೆ ತಮ್ಮ ಮೊದಲ ವಿಶ್ವ ಚಾಂಪಿಯನ್‌ಶಿಪ್​ನಲ್ಲಿ ಚಿನ್ನವನ್ನು ತಮ್ಮದಾಗಿಸಿಕೊಂಡರು.

ಇದಕ್ಕೂ ಮುನ್ನ, 2003 ರಲ್ಲಿ ಪ್ಯಾರಿಸ್‌ನಲ್ಲಿ ನಡೆದ ವಿಶ್ವ ಚಾಂಪಿಯನ್‌ಶಿಪ್‌ನ ಮಹಿಳಾ ಲಾಂಗ್ ಜಂಪ್‌ನಲ್ಲಿ ಅಂಜು ಬಾಬಿ ಜಾರ್ಜ್ ಕಂಚಿನ ಪದಕ ಒಡೆದಿದ್ದರು. ಆದರೆ, ಯಾವುದೇ ಭಾರತೀಯ ಪುರುಷ ಅಥವಾ ಮಹಿಳೆ ಚಿನ್ನದ ಪದಕವನ್ನು ಗೆದ್ದಿರಲಿಲ್ಲ. ನೀರಜ್ ಚೋಪ್ರಾ ಕಳೆದ ವರ್ಷ (2022) ಯುಎಸ್‌ನ ಒರೆಗಾನ್‌ನಲ್ಲಿ ಬೆಳ್ಳಿ ಗೆದ್ದಿದ್ದರು.

ಸಾಮಾನ್ಯವಾಗಿ ದೊಡ್ಡ ಮೊದಲ ಎಸೆತದೊಂದಿಗೆ ಪ್ರಾರಂಭಿಸುವ ಗುರಿಯನ್ನು ಹೊಂದಿರುವ ಚೋಪ್ರಾ, ಅರ್ಹತಾ ಹಂತದಲ್ಲಿ 88.77 ಮೀಟರ್‌ಗಳೊಂದಿಗೆ ಅತ್ಯದ್ಭುತವಾಗಿ ಸಾಧನೆ ಮಾಡಿದ್ದರು. ನಿನ್ನೆ (ಭಾನುವಾರ) ತನ್ನ ಮೊದಲ ಪ್ರಯತ್ನದಲ್ಲಿ ಫೌಲ್‌ ಮಾಡಿದರು. ಆದರೆ, ಟೋಕಿಯೊ ಒಲಿಂಪಿಕ್ ಚಿನ್ನದ ಪದಕ ವಿಜೇತ ಹಾಗೂ ಹರಿಯಾಣದ 25 ವರ್ಷದ ಚೋಪ್ರಾ, ನಂತರದ ಎಸೆತದಲ್ಲಿ 88.17 ಮೀಟರ್​ ದೂರ ಎಸೆದು ಚಿನ್ನದ ಪದಕ ಖಚಿತ ಪಡಿಸಿಕೊಂಡರು. ಈ ಎಸೆತವು ಅವರನ್ನು ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೆ ಏರಿಸಿತು.

  • The moment Neeraj Chopra created history and became the first Indian to win Gold at World Athletics Championships.

    Neeraj is India's pride...!! 🇮🇳 pic.twitter.com/OI9p97iCKa

    — Mufaddal Vohra (@mufaddal_vohra) August 27, 2023 " class="align-text-top noRightClick twitterSection" data=" ">

ಜರ್ಮನಿಯ ಜೂಲಿಯನ್ ವೆಬರ್ ತನ್ನ ಎರಡನೇ ಪ್ರಯತ್ನದಲ್ಲಿ 85.79 ಮೀ ಎಸೆತದೊಂದಿಗೆ ಎರಡನೇ ಸ್ಥಾನ ಪಡೆದರೆ, ಜೆಕ್ ಗಣರಾಜ್ಯದ ಯಾಕುಬ್ ವಡ್ಲೆಜ್ ತನ್ನ ಎರಡನೇ ಪ್ರಯತ್ನದಲ್ಲಿ 84.18 ಮೀ ಎಸೆದು ಮೂರನೇ ಸ್ಥಾನ ಪಡೆದರು. ಚೋಪ್ರಾ ಅವರು ತಮ್ಮ ಮೂರನೇ ಪ್ರಯತ್ನದಲ್ಲಿ ಕೇವಲ 86.32 ಮೀಟರ್‌ಗಳಷ್ಟು ದೂರ ಮಾತ್ರ ಎಸೆದರು. ಆದರೆ, ಪಾಕಿಸ್ತಾನದ ಅರ್ಷದ್ ನದೀಮ್ ತಮ್ಮ ಮೂರನೇ ಪ್ರಯತ್ನದಲ್ಲಿ 87.82 ಮೀಟರ್‌ಗಳ ಅಮೋಘ ಎಸೆತದೊಂದಿಗೆ ಕಣಕ್ಕೆ ಧುಮುಕಿದರು.

ಗಾಯದ ನಂತರ, ಈ ವರ್ಷದ ಆರಂಭದಲ್ಲಿ ತನ್ನ ಭುಜದ ಮೇಲೆ ಶಸ್ತ್ರಚಿಕಿತ್ಸೆ ಹೊಂದಿದ್ದ ನದೀಮ್, ಮೊದಲ ಯತ್ನದಲ್ಲಿ 74.90 ಮೀಟರ್‌ ದೂರ ಎಸೆಯುವುದರೊಂದಿಗೆ ಪ್ರಾರಂಭಿಸಿ 82.81 ಮೀಟರ್​ ಹಾಗೂ ತಮ್ಮ ಮೂರನೇ ರೌಂಡ್​ನಲ್ಲಿ 87.82 ಮೀ ದೂರ ಎಸೆದ ಮೊದಲ ಪಾಕಿಸ್ತಾನದ ಜಾವಲಿನ್​ ಎಸೆತಗಾರರಾಗಿ ಗುರುತಿಸಿಕೊಂಡರು. ಇನ್ನು ಭಾರತದ ಡಿ.ಪಿ. ಮನು ಅವರು ತಮ್ಮ ಮೂರನೇ ಪ್ರಯತ್ನದಲ್ಲಿ 83.72 ಮೀಟರ್‌ಗಳೊಂದಿಗೆ ಸ್ಪರ್ಧೆಯ ಮೊದಲಾರ್ಧದಲ್ಲಿ ತಮ್ಮ ಅತ್ಯುತ್ತಮ ಪ್ರಯತ್ನ ಮಾಡಿ, ಐದನೇ ಸ್ಥಾನ ಪಡೆದರು ಮತ್ತು ಕಿಶೋರ್ ಕುಮಾರ್ ಜೆನಾ ತಮ್ಮ ಎರಡನೇ ಪ್ರಯತ್ನದಲ್ಲಿ 82.82 ಮೀ. ಅಂಕ ಪಡೆದು ಏಳನೇ ಸ್ಥಾನದಲ್ಲಿ ಉಳಿದುಕೊಂಡರು.

ಚಿನ್ನದ ಪದಕದ ಮುದ್ರೆಯೊತ್ತಿದ ಚೋಪ್ರಾ: ಚೋಪ್ರಾ ತಮ್ಮ ನಾಲ್ಕನೇ ಪ್ರಯತ್ನದಲ್ಲಿ ಕೇವಲ 84.62 ಮೀ ಎಸೆಯಲು ಸಾಧ್ಯವಾದರೆ, ನದೀಮ್ 87.15 ಮೀ ಎಸೆದರು ಹಾಗೂ ಜರ್ಮನಿಯ ಜೂಲಿಯನ್ ವೆಬರ್ ಅವರ 85.7 ಪ್ರಯತ್ನದಿಂದ ಮೂರನೇ ಸ್ಥಾನದಲ್ಲಿ ಉಳಿದರು. ಅರ್ಷದ್ ನಡೆಮ್ ಆರನೇ ಸುತ್ತಿನಲ್ಲಿ ದೊಡ್ಡದರೊಂದಿಗೆ ಅಂತಿಮ ಪ್ರಯತ್ನವನ್ನು ಮಾಡಿದರು. ಆದರೆ, ಅದಕ್ಕೂ ಮುನ್ನವೇ ಚೋಪ್ರಾ ಚಿನ್ನದ ಪದಕದ ಮುದ್ರೆಯೊತ್ತಿದರು. ನೀರಜ್ ಚೋಪ್ರಾ ಭಾನುವಾರ ಮತ್ತೊಮ್ಮೆ ಇತಿಹಾಸ ಬರೆದಿದ್ದು, ಪುರುಷರ ಜಾವೆಲಿನ್ ಫೈನಲ್‌ನಲ್ಲಿ 88.17 ಮೀಟರ್ ದೊಡ್ಡ ಎಸೆತದೊಂದಿಗೆ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕ ಗೆದ್ದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

ಇದನ್ನೂ ಓದಿ: World Athletics Championship: ರಿಲೇ ಫೈನಲ್​ನಲ್ಲಿ ಮುಗ್ಗರಿಸಿದ ಭಾರತ ತಂಡ.. ಐದನೇ ಸ್ಥಾನಕ್ಕೆ ತೃಪ್ತಿ

Last Updated : Aug 28, 2023, 7:08 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.