ನವದೆಹಲಿ: ಜಮ್ಮು ಮತ್ತು ಕಾಶ್ಮೀರ ಮೂಲದ ಆಲ್ಪೈನ್ ಸ್ಕಿಯರ್ ಆರೀಫ್ ಮೊಹಮ್ಮದ್ ಖಾನ್ ಚಳಿಗಾಲದ ಒಲಿಂಪಿಕ್ಸ್‌ನಲ್ಲಿ ಎರಡು ಈವೆಂಟ್ಗಳಿಗೆ ಅರ್ಹತೆ ಪಡೆದ ಭಾರತದ ಮೊದಲ ಅಥ್ಲೀಟ್ ಎನಿಸಿಕೊಂಡಿದ್ದಾರೆ. ಚೀನಾದ ಬೀಜಿಂಗ್ನಲ್ಲಿ ಮುಂದಿನ ವರ್ಷ ಫೆಬ್ರವರಿ 4ರಿಂದ ಈ ಕ್ರೀಡಾಕೂಟ ನಡೆಯಲಿದೆ.
ದುಬೈನಲ್ಲಿ ನಡೆದ ಕ್ವಾಲಿಫೈಯರ್ ಈವೆಂಟ್ನಲ್ಲಿ ಆರಿಫ್ ಆಲ್ಪೈನ್ ಸ್ಕೀಯಿಂಗ್ ಸ್ಲಾಲೋಮ್ ವಿಭಾಗದಲ್ಲಿ ವಿಂಟರ್ ಒಲಿಂಪಿಕ್ಸ್ಗೆ ಅವಕಾಶ ಗಿಟ್ಟಿಸಿಕೊಂಡಿದ್ದರು. ಇದೀಗ ಒಂದು ತಿಂಗಳ ನಂತರ ಜೈಂಟ್ ಸ್ಲಾಲಮ್ ವಿಭಾಗದಲ್ಲೂ ಅವಕಾಶ ಪಡೆದುಕೊಂಡಿದ್ದಾರೆ.
"JSW ಬೆಂಬಲಿತ ಆಲ್ಪೈನ್ ಸ್ಕೀಯರ್ ಆರೀಫ್ ಖಾನ್ ಅವರು ಈ ಹಿಂದೆ 2022 ರ ಚಳಿಗಾಲದ ಒಲಿಂಪಿಕ್ಸ್‌ನಲ್ಲಿ ಸ್ಲಾಲೋಮ್ ಈವೆಂಟ್‌ಗೆ ಅರ್ಹತೆ ಪಡೆದುಕೊಂಡಿದ್ದರು. ಇದೀಗ ಜೈಂಟ್ಸ್ ಸ್ಲಾಲೋಮ್ ಈವೆಂಟ್‌ಗೂ ಅರ್ಹತೆ ಪಡೆದಿದ್ದಾರೆ.
ಈ ಮೂಲಕ ಭಾರತದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಭಾರತೀಯನೊಬ್ಬ ಎರಡು ವಿಭಿನ್ನ ಈವೆಂಟ್ಗಳಲ್ಲಿ ಚಳಿಗಾಲದ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸುತ್ತಿದ್ದಾರೆ" ಎಂದು ಆರೀಫ್ ಖಾನ್ ಸ್ಪಾನ್ಸರ್ ಆಗಿರುವ ಜೆಎಸ್ಡಬ್ಲ್ಯೂ ಸ್ಪೋರ್ಟ್ಸ್ ಬುಧವಾರ ತನ್ನ ಫೇಸ್ಬುಕ್ ಖಾತೆಯಲ್ಲಿ ಹಂಚಿಕೊಂಡಿದೆ.
2018ರ ಚಳಿಗಾಲದ ಕ್ರೀಡಾಕೂಟದಲ್ಲಿ ಭಾರತದಿಂದ ಜಗದೀಶ್ ಸಿಂಗ್ ಮತ್ತು ಶಿವ ಕೇಶವನ್ ಅರ್ಹತೆ ಪಡೆದಿದ್ದರು. ಆದರೆ, 2022ರ ಈವೆಂಟ್ನಲ್ಲಿ ಆರೀಫ್ ಖಾನ್ ಮಾತ್ರ ಭಾರತವನ್ನು ಪ್ರತಿನಿಧಿಸುತ್ತಿದ್ದಾರೆ.
ಇದನ್ನೂ ಓದಿ:90 ಮೀಟರ್ ಜಾವಲಿನ್ ಎಸೆದು ಅತ್ಯುತ್ತಮರ ಪಟ್ಟಿಗೆ ಸೇರಬೇಕು: ಚಿನ್ನದ ಹುಡ್ಗ ನೀರಜ್ ಚೋಪ್ರಾ ಗುರಿ