ETV Bharat / sports

ಒಲಿಂಪಿಕ್ ಅಸೋಸಿಯೇಷನ್​ನ ಹೊಸ ಸಮಿತಿಗಳಿಗೆ ಅನುಮೋದನೆ ಕೇಳಿದ ಅಧ್ಯಕ್ಷ: ಆಕ್ಷೇಪ ವ್ಯಕ್ತಪಡಿಸಿದ ಕಾರ್ಯದರ್ಶಿ! - ಐಒಎ ಅಧ್ಯಕ್ಷ ನರೇಂದ್ರ ಬಾತ್ರಾ

ಸಮಿತಿ ರಚನೆಯ ಹೊರತಾಗಿ, ಅಧ್ಯಕ್ಷರು ಇತರ ಆರು ಪತ್ರಗಳನ್ನು ಅನುಮೋದಿಸಲು ಪ್ರಯತ್ನಿಸಿದ್ದು, ಐಒಎ ಈ ಕಾರ್ಯಚಟುವಟಿಕೆಯನ್ನು ಪ್ರಶ್ನಿಸುತ್ತದೆ. ಆ ಪತ್ರಗಳ ಮೇಲೆ ಯಾವುದೇ ಕ್ರಮ ಕೈಗೊಳ್ಳದಂತೆ ಐಒಎ ಪ್ರಧಾನ ಕಾರ್ಯದರ್ಶಿ ರಾಜೀವ್ ಮೆಹ್ತಾ ಹೇಳಿದ್ದಾರೆ.

olympic
olympic
author img

By

Published : Jul 21, 2020, 8:21 AM IST

ನವದೆಹಲಿ: ಅಧ್ಯಕ್ಷ ನರೇಂದ್ರ ಬಾತ್ರಾ ಅವರ ಆದೇಶದ ಬಳಿಕ 2020 - 21ರವರೆಗೆ ರಚಿಸಲಾದ ಸಮಿತಿಗಳನ್ನು ಮುಂದಿನ ಕಾರ್ಯಕಾರಿ ಮಂಡಳಿಯ (ಇಸಿ) ಸಭೆಯಲ್ಲಿ ಚರ್ಚಿಸಿ ತಿದ್ದುಪಡಿ ಮಾಡಲಾಗುವುದು ಎಂದು ಒಲಿಂಪಿಕ್ ಅಸೋಸಿಯೇಷನ್ ​​ಆಫ್ ಇಂಡಿಯಾದ (ಐಒಎ) ಪ್ರಧಾನ ಕಾರ್ಯದರ್ಶಿ ರಾಜೀವ್ ಮೆಹ್ತಾ ಹೇಳಿದ್ದಾರೆ.

ಕಾರ್ಯನಿರ್ವಾಹಕ ಮಂಡಳಿ ಸಭೆಯ ಸದಸ್ಯರಿಗೆ ಬಾತ್ರಾ ನೋಟಿಸ್ ಕಳುಹಿಸಿ 2020-21ರವರೆಗೆ ಕೆಲವು ಸಮಿತಿಗಳನ್ನು ರಚಿಸಿದ್ದು, ಇದಕ್ಕೆ ಮೆಹ್ತಾ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಪ್ರಧಾನ ಕಾರ್ಯದರ್ಶಿಯಾಗಿರುವ ನಾನು ಆ ನೋಟಿಸ್​ ಕಳುಹಿಸಬೇಕಿತ್ತೇ ಹೊರತು ನರೇಂದ್ರ ಬಾತ್ರಾ ಅಲ್ಲ ಎಂದು ರಾಜೀವ್ ಮೆಹ್ತಾ ಹೇಳಿದ್ದಾರೆ.

ಕಾರ್ಯಕಾರಿ ಮಂಡಳಿಯ ಸದಸ್ಯರಿಗೆ ಪತ್ರ ಬರೆದಿರುವ ಮೆಹ್ತಾ, "ಸಮಿತಿಯ ರಚನೆಯ ಹೊರತಾಗಿ, ಅಧ್ಯಕ್ಷರು ಇತರ ಆರು ಪತ್ರಗಳನ್ನು ಅನುಮೋದಿಸಲು ಪ್ರಯತ್ನಿಸಿದ್ದು, ಐಒಎ ಈ ಕಾರ್ಯಚಟುವಟಿಕೆಯನ್ನು ಪ್ರಶ್ನಿಸುತ್ತದೆ. ಪ್ರತಿಯೊಂದನ್ನೂ ಮುಂದಿನ ಸಭೆಯಲ್ಲಿ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳಲಾಗುವುದು. ಅಲ್ಲಿಯವರೆಗೆ ಆ ಪತ್ರಗಳ ಮೇಲೆ ಯಾವುದೇ ಕ್ರಮ ತೆಗೆದುಕೊಳ್ಳದಂತೆ ನಾನು ಎಲ್ಲ ಸದಸ್ಯರಿಗೆ ಮನವಿ ಮಾಡುತ್ತೇನೆ" ಎಂದಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.