ಬರ್ಮಿಂಗ್ಹ್ಯಾಮ್(ಯುಕೆ): ಕಾಮನ್ವೆಲ್ತ್ ಗೇಮ್ಸ್ನಲ್ಲಿ ಮಹಿಳಾ ಹಾಕಿ ತಂಡ ನಿರಾಸೆ ಅನುಭವಿಸಿತು. ಸೆಮಿಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ವಿವಾದಾತ್ಮಕ ಶೂಟೌಟ್‌ನಲ್ಲಿ 0-3 ಅಂತರದಿಂದ ಸೋಲು ಕಂಡಿತು. 1-1 ರಲ್ಲಿ ಸಮಬಲ ಕಂಡಿದ್ದ ಪಂದ್ಯ ಫಲಿತಾಂಶಕ್ಕಾಗಿ ನಡೆದ ಶೂಟೌಟ್‌ನಲ್ಲಿ ಭಾರತ ವನಿತೆಯರು ಗೋಲು ಗಳಿಸುವಲ್ಲಿ ಯಶಸ್ವಿಯಾಗಲಿಲ್ಲ. ಫೈನಲ್ ತಲುಪುವ ಮೂಲಕ ಚಿನ್ನ, ಬೆಳ್ಳಿ ಸಾಧನೆ ಮಾಡುವ ಗುರಿಯಲ್ಲಿದ್ದ ತಂಡ ಇದಿಗ ಕಂಚಿಗಾಗಿ ನ್ಯೂಜಿಲ್ಯಾಂಡ್ ವಿರುದ್ಧ ಆ.7 ರಂದು ಹೋರಾಡಲಿದೆ.
ಭಾರತದ ವನಿತೆಯರು ಎಸಗಿದ ಸಣ್ಣಪುಟ್ಟ ತಪ್ಪುಗಳನ್ನು ಮತ್ತು ಕೆಟ್ಟ ಪಾಸ್‌ಗಳನ್ನು ಆಸ್ಟ್ರೇಲಿಯಾ ಉಪಯೋಗಿಸಿಕೊಂಡಿತು. ಪಂದ್ಯದ 8ನೇ ನಿಮಿಷದಲ್ಲಿ ಭಾರತಕ್ಕೆ ಪೆನಾಲ್ಟಿ ಕಾರ್ನರ್ ಸಿಕ್ಕಿತು. ಗುರ್ಜಿತ್ ಕೌರ್ ಅದನ್ನು ಗೋಲಾಗಿ ಪರಿವರ್ತಿಸುವಲ್ಲಿ ವಿಫಲವಾದರು.
-
#CommonwealthGames | #Hockey: Indian Women's Team gave their best to level the match (1-1) with a brilliant goal by @VandanaHockey16 that lead to a penalty shootout, but were not able to tame the defending champs
— DD News (@DDNewslive) August 5, 2022 " class="align-text-top noRightClick twitterSection" data="
SO: 🇮🇳 0-3 🇦🇺
India will next play for bronze against New Zealand pic.twitter.com/HtWkH62VZo
">#CommonwealthGames | #Hockey: Indian Women's Team gave their best to level the match (1-1) with a brilliant goal by @VandanaHockey16 that lead to a penalty shootout, but were not able to tame the defending champs
— DD News (@DDNewslive) August 5, 2022
SO: 🇮🇳 0-3 🇦🇺
India will next play for bronze against New Zealand pic.twitter.com/HtWkH62VZo#CommonwealthGames | #Hockey: Indian Women's Team gave their best to level the match (1-1) with a brilliant goal by @VandanaHockey16 that lead to a penalty shootout, but were not able to tame the defending champs
— DD News (@DDNewslive) August 5, 2022
SO: 🇮🇳 0-3 🇦🇺
India will next play for bronze against New Zealand pic.twitter.com/HtWkH62VZo
ಬಳಿಕ 10ನೇ ನಿಮಿಷದಲ್ಲಿ ಆಸ್ಟ್ರೇಲಿಯಾದ ರೆಬೆಕಾ ಗ್ರೀನರ್ ಸವಿತಾ ಪೂನಿಯಾರ ತಡೆಗೋಡೆಯನ್ನು ಭೇದಿಸಿ ಗೋಲು ಗಳಿಸಿದರು. ಆಸ್ಟ್ರೇಲಿಯಾದ ಮುನ್ನಡೆ ಭಾರತವನ್ನು ಒತ್ತಡಕ್ಕೆ ದೂಡಿತು. ಮರು ನಿಮಿಷದಲ್ಲೇ ಮತ್ತೊಂದು ಗೋಲು ಗಳಿಸಲು ಮುಂದಾದ ಆಸ್ಟ್ರೇಲಿಯಾಗೆ ಸವಿತಾ ತಡೆಯೊಡ್ಡಿದರು.
ಪಂದ್ಯದ ಎರಡನೇ ಅವಧಿಯ ಮುಕ್ತಾಯಕ್ಕೆ 4 ನಿಮಿಷದ ವೇಳೆ ಭಾರತದ ಸುಶೀಲಾ ಚಾನು ಅವರ ಪಾಸ್ ಅನ್ನು ಕಟಾರಿಯಾ ಗೋಲು ಪೆಟ್ಟಿಗೆ ಸೇರಿಸಿ ಪಂದ್ಯ 1-1 ರಲ್ಲಿ ಸಮಬಲಗೊಳ್ಳುವಂತೆ ಮಾಡಿದರು.
ಶೂಟೌಟ್ ವಿವಾದ: ಪೆನಾಲ್ಟಿ ಶೂಟೌಟ್‌ನಲ್ಲಿ ವಿವಾದ ಉಂಟಾಯಿತು. ಆಸ್ಟ್ರೇಲಿಯಾದ ಆಂಬ್ರೋಸಿಯಾ ಮಲೋನ್ ಮೊದಲ ಪೆನಾಲ್ಟಿ ಅವಕಾಶ ಪಡೆದು ಚೆಂಡನ್ನು ಗೋಲಿನೆಡೆಗೆ ದೂಡಿದಾಗ ಅದನ್ನು ಗೋಲ್ಕೀಪರ್ ಸವಿತಾ ಯಶಸ್ವಿಯಾಗಿ ತಡೆದರು. ಆದರೆ, ಟೈಮರ್ ಆರಂಭವಾಗದ ಕಾರಣ ಮತ್ತೊಂದು ಅವಕಾಶ ನೀಡಲಾಯಿತು. ಈ ವೇಳೆ, ಮಲೋನ್ ಅದನ್ನು ಗೋಲಾಗಿ ಪರಿವರ್ತಿಸಿದರು. ಇದು ವಿವಾದಕ್ಕೆ ಕಾರಣವಾಯಿತು.