ETV Bharat / sports

Asian Games: ಮಹಿಳಾ ಬ್ಯಾಡ್ಮಿಂಟನ್​ನಲ್ಲಿ ಮಂಗೋಲಿಯಾ ಮಣಿಸಿ ಕ್ವಾರ್ಟರ್ ಫೈನಲ್‌ ಪ್ರವೇಶಿಸಿ ಭಾರತ - ಎರಡನೇ ಸಿಂಗಲ್ಸ್‌

Asian Games: ಏಷ್ಯನ್ ಗೇಮ್ಸ್‌ನ ಮಹಿಳಾ ಬ್ಯಾಡ್ಮಿಂಟನ್​ನಲ್ಲಿ ಭಾರತ ತಂಡವು 3-0 ಅಂಕಗಳಿಂದ ಮಂಗೋಲಿಯಾವನ್ನು ಸೋಲಿಸುವ ಮೂಲಕ ಕ್ವಾರ್ಟರ್‌ಫೈನಲ್‌ಗೆ ಕಾಲಿಟ್ಟಿದೆ. ಇದೀಗ ಏಷ್ಯನ್ ಗೇಮ್ಸ್​ನ ನಾಕೌಟ್ ಸುತ್ತಿನಲ್ಲಿ ಥಾಯ್ಲೆಂಡ್ ತಂಡವನ್ನು ಎದುರಿಸಲಿದೆ.

Asian Games
ಮಹಿಳಾ ಬ್ಯಾಡ್ಮಿಂಟನ್​ನಲ್ಲಿ ಮಂಗೋಲಿಯಾ ಮಣಿಸಿ ಕ್ವಾರ್ಟರ್ ಫೈನಲ್‌ಗೆ ಪ್ರವೇಶಿಸಿ ಭಾರತ...
author img

By ETV Bharat Karnataka Team

Published : Sep 28, 2023, 11:15 AM IST

ಹ್ಯಾಂಗ್‌ಝೌ(ಚೀನಾ): ಏಷ್ಯನ್ ಗೇಮ್ಸ್‌ನ ಟೀಮ್ ಈವೆಂಟ್​ನಲ್ಲಿ ಭಾರತ ಮಹಿಳಾ ಬ್ಯಾಡ್ಮಿಂಟನ್ ತಂಡವು ಮಂಗೋಲಿಯಾವನ್ನು 3-0 ಗೋಲುಗಳಿಂದ ಸೋಲಿಸಿ ಕ್ವಾರ್ಟರ್‌ಫೈನಲ್ ಪ್ರವೇಶಿಸಿದೆ. ಇಂದು ನಡೆದ ಬ್ಯಾಡ್ಮಿಂಟನ್ ಪಂದ್ಯದಲ್ಲಿ ಭಾರತ ತಂಡವು ಪ್ರಯಾಸ ಪಡದೇ ಪ್ರಾಬಲ್ಯ ಸಾಧಿಸಿ, ಅನಾಯಾಸವಾಗಿ ಜಯ ಸಾಧಿಸಿತು.

ಎರಡು ಬಾರಿಯ ಒಲಿಂಪಿಕ್ ಪದಕ ವಿಜೇತೆ ಪಿವಿ ಸಿಂಧು ಆರಂಭಿಕ ಪಂದ್ಯವನ್ನು ಆಡಿದರು. 21-3, 21-3 ನೇರ ಸೆಟ್​ಗಳ ಮೂಲಕ 20 ನಿಮಿಷಗಳಲ್ಲಿ ಮಯಾಗ್‌ಮಾರ್ಟ್‌ಸೆರೆನ್ ಗನ್‌ಬಾಟರ್ ವಿರುದ್ಧ ವಿಜಯ ಸಾಧಿಸಿದ್ದಾರೆ. ಸಿಂಧು ಪಾಯಿಂಟ್‌ಗಳನ್ನು ಗಳಿಸಲು ಕಷ್ಟಪಡಲಿಲ್ಲ. ಪ್ರತಿ ಸರ್ವ್‌ನಲ್ಲಿ ಪಾಯಿಂಟ್‌ಗಳನ್ನು ಪಡೆದು, ಎದುರಾಳಿಯನ್ನು ಅನಾಯಾಸವಾಗಿ ಸೋಲಿಸಿದರು. ಸಿಂಧು ಕ್ವಾರ್ಟರ್‌ಫೈನಲ್‌ನಲ್ಲಿ ಪೋರ್ನ್‌ಪಾವೀ ಚೊಚುವಾಂಗ್‌ರನ್ನು ಎದುರಿಸುವ ಸಾಧ್ಯತೆಯಿದೆ. ಎರಡನೆಯದು ವಿಶ್ವದಲ್ಲಿ ಉನ್ನತ ಸ್ಥಾನದಲ್ಲಿರುವುದರಿಂದ ಅವರು ತಮ್ಮ ಆಟವನ್ನು ಸುಧಾರಿಸಬೇಕಾಗಿದೆ.

ಎರಡನೇ ಸಿಂಗಲ್ಸ್‌ನಲ್ಲಿ ಯುವ ಆಟಗಾರ್ತಿ ಅಶ್ಮಿತಾ ಚಲಿಹಾ ಭಾರತದ ಬ್ಯಾಡ್ಮಿಂಟನ್ ತಂಡದಿಂದ ಪ್ರಬಲ ಪ್ರದರ್ಶನವನ್ನು ಮುಂದುವರೆಸಿದರು. ಅವರು 21 ನಿಮಿಷಗಳ ಆಟದಲ್ಲಿ 21-2, 21-3 ನೇರ ಸೆಟ್​ಗಳ ಮೂಲಕ ಖೆರ್ಲೆನ್ ದರ್ಖಾನ್‌ಬಾಟರ್ ವಿರುದ್ಧ ಗೆದ್ದರು. ಅನುಪಮಾ ಉಪಾಧ್ಯಾಯ ಮೂರನೇ ಸಿಂಗಲ್ ಆಡಿದರು. ಅವರು ಕೇವಲ ಎರಡು ಅಂಕಗಳನ್ನು ಬಿಟ್ಟುಕೊಟ್ಟರು.

ಥಾಯ್ಲೆಂಡ್ ತಂಡವನ್ನು ಮಣಿಸುವುದು ಭಾರತಕ್ಕೆ ಸವಾಲು: ಟ್ರೀಸಾ ಜಾಲಿ ಮತ್ತು ಗಾಯತ್ರಿ ಗೋಪಿಚಂದ್ ಜೋಡಿಗೆ ಇಂದು ವಿಶ್ರಾಂತಿ ನೀಡಲಾಗಿತ್ತು. ಕ್ವಾರ್ಟರ್‌ಫೈನಲ್‌ನಲ್ಲಿ ಥಾಯ್ಲೆಂಡ್‌ ತಂಡವನ್ನು ಭಾರತ ಎದುರಿಸಲಿದೆ. ವಿಶ್ವ ನಂ.12 ಶ್ರೆಯಾಂಕದ ಪೋರ್ನ್‌ಪಾವೀ ಚೊಚುವಾಂಗ್ ಮತ್ತು ವಿಶ್ವ ನಂ. 17 ಶ್ರೇಯಾಂಕದ ಸುಪಾನಿಡಾ ಕಟೆಥಾಂಗ್ ಅವರ ವಿರುದ್ಧ ಕ್ವಾರ್ಟರ್​ಫೈನಲ್​​ನಲ್ಲಿ ಭಾರತ ಸೆಣಸಲಿದೆ. ಥಾಯ್ಲೆಂಡ್ ತಂಡವನ್ನು ಮಣಿಸುವುದು ಭಾರತಕ್ಕೆ ಕಠಿಣ ಕೆಲಸವಾಗಿದೆ.

ಇದನ್ನೂ ಓದಿ: Asian games: ಭಾರತಕ್ಕೆ ಮತ್ತೊಂದು ಪದಕ... ವುಶು ಫೈನಲ್‌ನಲ್ಲಿ ಬೆಳ್ಳಿ ಪದಕ ಗೆದ್ದ ರೋಶಿಬಿನಾ ದೇವಿ ನವೋರೆಮ್

Asian Games: ಪುರುಷರ 10 ಮೀಟರ್ ಏರ್ ಪಿಸ್ತೂಲ್​ನಲ್ಲಿ ಭಾರತಕ್ಕೆ ಸ್ವರ್ಣ ಪದಕ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.