ETV Bharat / sports

ಕಾಮನ್‌ವೆಲ್ತ್ ಗೇಮ್ಸ್: ಕಂಚಿನ ಪದಕ ಗೆದ್ದ ಭಾರತದ ಮಹಿಳಾ ಹಾಕಿ ತಂಡ

ಕಾಮನ್‌ವೆಲ್ತ್ ಗೇಮ್ಸ್​ನಲ್ಲಿ ನ್ಯೂಜಿಲೆಂಡ್ ವಿರುದ್ಧ ಭಾರತದ ಮಹಿಳಾ ಹಾಕಿ ತಂಡ ಜಯ ಸಾಧಿಸಿ ಕಂಚಿನ ಪದಕಕ್ಕೆ ಕೊರಳೊಡ್ಡಿದೆ.

Indian women hockey team wins bronze medal at Commonwealth Games
ಕಾಮನ್‌ವೆಲ್ತ್ ಗೇಮ್ಸ್: ಕಂಚಿನ ಪದಕ ಗೆದ್ದ ಭಾರತದ ಮಹಿಳಾ ಹಾಕಿ ತಂಡ
author img

By

Published : Aug 7, 2022, 3:45 PM IST

Updated : Aug 7, 2022, 4:08 PM IST

ಬರ್ಮಿಂಗ್‌ಹ್ಯಾಮ್‌(ಇಂಗ್ಲೆಂಡ್): ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆಯುತ್ತಿರುವ ಕಾಮನ್‌ವೆಲ್ತ್ ಗೇಮ್ಸ್​ನಲ್ಲಿ ಭಾರತದ ಮಹಿಳಾ ಹಾಕಿ ತಂಡ ಕಂಚಿನ ಪದಕ ಗೆದ್ದಿದೆ. ನ್ಯೂಜಿಲೆಂಡ್ ವಿರುದ್ಧ ಜಯ ಸಾಧಿಸುವ ಮೂಲಕ ಮಹಿಳಾ ತಂಡ ಕಂಚಿನ ಪದಕಕ್ಕೆ ಮುತ್ತಿಕ್ಕಿದೆ.

ಹಾಕಿಯ 3ನೇ ಕ್ವಾರ್ಟರ್‌ ಫೈನಲ್​ನಲ್ಲಿ ಭಾರತೀಯ ವನಿತೆಯರು ಪೆನಾಲ್ಟಿ ಶೂಟೌಟ್‌ನಲ್ಲಿ 2-1 ಗೋಲುಗಳಿಂದ ನ್ಯೂಜಿಲೆಂಡ್​ ತಂಡವನ್ನು ಸೋಲಿಸಿ ಕಂಚಿನ ಪದಕವನ್ನು ಗೆದ್ದರು. ಇದಕ್ಕೂ ಮೊದಲು ನ್ಯೂಜಿಲೆಂಡ್ ತಂಡ ಪಂದ್ಯ ಮುಗಿಯಲು ಕೇವಲ 17 ಸೆಕೆಂಡ್​ಗಳಲ್ಲಿ ತಮ್ಮ ಸ್ಕೋರ್​ಅನ್ನು ಸಮಗೊಳಿಸಿತು. ಆದ್ದರಿಂದ ಪಂದ್ಯವು ಪೆನಾಲ್ಟಿ ಶೂಟೌಟ್‌ಗೆ ಸಾಗಿತು. ಇದಕ್ಕಿಂತ ಮುಂಚೆ ಭಾರತದ ತಂಡ 1-0 ಮುನ್ನಡೆ ಸಾಧಿಸಿತ್ತು.

ಈ ಹಿಂದೆ ನಡೆದ ಸೆಮಿಫೈನಲ್‌ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ವಿವಾದಾತ್ಮಕ ಶೂಟೌಟ್‌ನಲ್ಲಿ 0-3 ಅಂತರದಿಂದ ಭಾರತದ ಮಹಿಳಾ ತಂಡ ಸೋಲು ಕಂಡಿತ್ತು. ಇದೀಗ ಇಂದು ಕಂಚಿಗಾಗಿ ನ್ಯೂಜಿಲೆಂಡ್​​ ವಿರುದ್ಧ ಹೋರಾಟ ನಡೆಸಿ ಪದಕಕ್ಕೆ ಗೆಲ್ಲುವಲ್ಲಿ ಯಶಸ್ಸು ಕಂಡಿದೆ.

ಇದನ್ನೂ ಓದಿ: ಕಾಮನ್‌ವೆಲ್ತ್ ಗೇಮ್ಸ್ 2022: ಬಾಕ್ಸರ್ ನೀತು ಗಂಗಾಸ್ ಮುಡಿಗೆ ಚಿನ್ನ

Last Updated : Aug 7, 2022, 4:08 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.