ನವದೆಹಲಿ: ಕ್ರೀಡಾ ಪಟುಗಳಿಗೆ ಕೇಂದ್ರ ಕ್ರೀಡಾ ಸಚಿವಾಲಯ ಸಿಹಿ ಸುದ್ದಿ ನೀಡಿದೆ. ಕ್ರೀಡಾ ಟಾರ್ಗೆಟ್ ಒಲಿಂಪಿಕ್ ಪೋಡಿಯಂ ಸ್ಕೀಮ್ ಅಡಿ ಭಾರತೀಯ ಈಜುಗಾರರಿಗೆ ತರಬೇತಿ ಮತ್ತು ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಲು ಹಣಕಾಸಿನ ನೆರವು ಘೋಷಿಸಲಾಗಿದೆ. ಅದರಂತೆ ಈಜುಗಾರರಾದ ಸಜನ್ ಪ್ರಕಾಶ್, ಶ್ರೀಹರಿ ನಟರಾಜ್, ಮಾನ್ ಪಟೇಲ್ ಮತ್ತು ಕೆನಿಶಾ ಗುಪ್ತಾ ಅವರು ಸರ್ಕಾರದಿಂದ ತರಬೇತಿ ಮತ್ತು ಸ್ಪರ್ಧೆಗೆ ಹಣಕಾಸಿನ ಸಹಾಯ ಪಡೆಯಲಿದ್ದಾರೆ.
ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸಿದ್ದ ಸಜನ್ ಅವರಿಗೆ ತರಬೇತಿ ವೆಚ್ಚ ಹಾಗೂ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಲು 15.1 ಲಕ್ಷ ರೂ. ಮಂಜೂರು ಮಾಡಲಾಗಿದ್ದರೆ, ಶ್ರೀಹರಿ ನಟರಾಜ್ 22.02 ಲಕ್ಷ ರೂ. ನೆರವು ಪಡೆಯಲಿದ್ದಾರೆ. ಅಲ್ಲದೇ, ಮಾನ್ ಪಟೇಲ್ ಮತ್ತು ಯುವ ಈಜುಪಟು ಕೆನಿಶಾ ಗುಪ್ತಾ ಫ್ರೆಂಚ್ ಓಪನ್ ಚಾಂಪಿಯನ್‌ಶಿಪ್‌ನಲ್ಲಿ ಸ್ಪರ್ಧಿಸಲು ತಲಾ 3.89 ಲಕ್ಷ ರೂಪಾಯಿಗಳನ್ನು ಪಡೆಯಲಿದ್ದಾರೆ. ಸಜನ್ ಪ್ರಕಾಶ್ ಈ ವರ್ಷ ಮೊನಾಕೊ, ಬಾರ್ಸಿಲೋನಾ ಮತ್ತು ಕ್ಯಾನೆಟ್‌ನಲ್ಲಿ ನಡೆಯುವ ಮೇರ್ ನಾಸ್ಟ್ರಮ್ ಸ್ಪರ್ಧೆ ಮತ್ತು ಡೆನ್ಮಾರ್ಕ್‌ನ ಡ್ಯಾನಿಶ್ ಓಪನ್‌ನಲ್ಲಿ ಸ್ಪರ್ಧಿಸಲಿದ್ದಾರೆ.
ಬಳಿಕ ಜೂನ್ ಮತ್ತು ಜುಲೈ ನಡುವೆ ಸ್ಪೇನ್‌ನ ಸಿಯೆರಾ ನೆವಾಡಾ ತರಬೇತಿ ಕೇಂದ್ರದಲ್ಲಿ ತರಬೇತಿ ಶಿಬಿರದಲ್ಲಿ ಭಾಗವಹಿಸಲಿದ್ದಾರೆ. ಟೋಕಿಯೋ 2020 ರಲ್ಲಿ ಸ್ಪರ್ಧಿಸಿದ್ದ ಶ್ರೀಹರಿ ನಟರಾಜ್ ಮಾರ್ಚ್ 31 ರಿಂದ ಪ್ರಾರಂಭವಾಗುವ ಫ್ರೆಂಚ್ ಓಪನ್ ಈಜು ಚಾಂಪಿಯನ್‌ಶಿಪ್ ಮತ್ತು ಮೇರ್ ನಾಸ್ಟ್ರಮ್‌ನಲ್ಲಿನ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ.
ಓದಿ: ಐಪಿಎಲ್ 2022: KKR ವಿರುದ್ಧದ ಸಿಎಸ್‌ಕೆ ಪಂದ್ಯಕ್ಕೆ ಮೊಯಿನ್ ಅಲಿ ಡೌಟ್, ಮುಂಬೈಗೆ ಸೂರ್ಯಕುಮಾರ್ ಅಲಭ್ಯ..!