ETV Bharat / sports

Hockey World Cup: ಹಾಕಿಯಲ್ಲಿ 28 ಪದಕ ಗೆದ್ದಿರುವ ಭಾರತ: ಸ್ವಾತಂತ್ರ್ಯ ಪೂರ್ವದಲ್ಲೇ ಒಲಿಂಪಿಕ್ಸ್‌ನಲ್ಲಿ ಗೆಲುವಿನ ಸಿಹಿ - ಕಾಮನ್‌ವೆಲ್ತ್ ಗೇಮ್ಸ್‌

ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ 12 ಪದಕ ಹಾಕಿಯಲ್ಲೇ ಗೆದ್ದಿರುವ ಭಾರತ ತಂಡ - ಮೂರು ಬಾರಿ ಏಷ್ಯನ್​ ಚಾಪಿಂಯನ್​ ಭಾರತ - 1975ರಲ್ಲಿ ವಿಶ್ವಕಪ್​ ಗೆದ್ದು ದಾಖಲೆ ನಿರ್ಮಾಣ.

Indian hockey team has won many titles in international tournaments.
ಟೋಕಿಯೋ ಒಲಂಪಿಕ್ಸ್​ ಸಾಧನೆ
author img

By

Published : Jan 9, 2023, 4:59 PM IST

ನವದೆಹಲಿ: 2023ರ ಹಾಕಿ ವಿಶ್ವಕಪ್‌ನ 15ನೇ ಆವೃತ್ತಿಯು ಒಡಿಶಾದ ಭುವನೇಶ್ವರ ಮತ್ತು ರೂರ್ಕೆಲಾದಲ್ಲಿ ಜನವರಿ 13 ರಿಂದ 29 ರವರೆಗೆ ಪ್ರಾರಂಭವಾಗಲಿದೆ. ಈ ಮಹಾನ್ ಹಾಕಿ ಕದನದಲ್ಲಿ, ವಿಶ್ವದ 16 ದೇಶಗಳು ವಿಶ್ವ ಚಾಂಪಿಯನ್ ಪಟ್ಟಕ್ಕಾಗಿ ಸೆಣಸಾಡಲಿವೆ. ವಿಶ್ವಕಪ್‌ನಲ್ಲಿ ಭಾಗವಹಿಸುವ ತಂಡಗಳನ್ನು ನಾಲ್ಕು ಗುಂಪುಗಳಾಗಿ ವಿಂಗಡಿಸಲಾಗಿದೆ. ಎ ಗುಂಪಿನಲ್ಲಿ ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ, ಫ್ರಾನ್ಸ್, ಅರ್ಜೆಂಟೀನಾ, ಪೂಲ್ ಬಿ ಯಲ್ಲಿ ಬೆಲ್ಜಿಯಂ, ಜಪಾನ್, ಕೊರಿಯಾ, ಜರ್ಮನಿ, ಪೂಲ್, ಸಿ ಯಲ್ಲಿ ನೆದರ್‌ಲ್ಯಾಂಡ್, ಚಿಲಿ, ಮಲೇಷ್ಯಾ, ನ್ಯೂಜಿಲ್ಯಾಂಡ್​ ಮತ್ತು ಪೂಲ್, ಡಿ ನಲ್ಲಿ ಭಾರತ, ವೇಲ್ಸ್, ಸ್ಪೇನ್, ಇಂಗ್ಲೆಂಡ್ ತಂಡಗಳಿವೆ. ಸ್ಪೇನ್​, ಕೊರಿಯಾ ಮತ್ತು ಫ್ರಾನ್ಸ್​ ತಂಡಗಳು ಭಾರತಕ್ಕೆ ಬಂದಿಳಿದಿವೆ.

ಸ್ವಾತಂತ್ರ್ಯ ಪೂರ್ವವೇ ಹಾಕಿಯಲ್ಲಿ ಭಾರತಕ್ಕೆ ಪದಕ: ಒಲಿಂಪಿಕ್ಸ್ ಹಾಕಿಯಲ್ಲಿ ಭಾರತ 12 ಪದಕಗಳನ್ನು ಗೆದ್ದು ಸ್ವಾತಂತ್ರ್ಯ ಪೂರ್ವದಲ್ಲಿಯೇ ಭಾರತದ ಹೆಸರನ್ನು ವಿಶ್ವದಾದ್ಯಂತ ಬೆಳಗುವಂತೆ ಮಾಡಿತ್ತು. ಭಾರತ ಹಾಕಿ ತಂಡ ಒಲಿಂಪಿಕ್ಸ್‌ನಲ್ಲಿ ಎಂಟು ಚಿನ್ನ, ಒಂದು ಬೆಳ್ಳಿ ಮತ್ತು ಮೂರು ಕಂಚಿನ ಪದಕ ಸೇರಿದಂತೆ 12 ಪದಕಗಳನ್ನು ಗೆದ್ದಿದೆ. 1928 ರಿಂದ 1956 ರವರೆಗೆ ಭಾರತ ಹಾಕಿ ತಂಡ ನಿರಂತರವಾಗಿ ಚಿನ್ನದ ಪದಕಗಳನ್ನು ಗೆದ್ದು ಇತಿಹಾಸ ಸೃಷ್ಟಿಸಿದೆ.

ಭಾರತ ಮೂರು ಬಾರಿ ಏಷ್ಯಾ ಚಾಂಪಿಯನ್: ಭಾರತೀಯ ಪುರುಷರ ಹಾಕಿ ತಂಡ ಮೂರು ಬಾರಿ ಏಷ್ಯಾ ಚಾಂಪಿಯನ್ ಆಗಿ ಹೊರಹೊಮ್ಮಿದೆ. 2003, 2007, 2017ರಲ್ಲಿ ಭಾರತ ಏಷ್ಯಾದ ಚಾಂಪಿಯನ್ ಆಗಿದೆ. ಇದಲ್ಲದೇ ಐದು ಬಾರಿ ಬೆಳ್ಳಿ ಪದಕ (1982, 1985, 1989, 1994, 2013) ಮತ್ತು ಎರಡು ಬಾರಿ ಕಂಚಿನ ಪದಕ (1999, 2022) ಗೆದ್ದಿದೆ. ಐದು ಬಾರಿ ಚಾಂಪಿಯನ್ ಆಗಿರುಬವ ದಕ್ಷಿಣ ಕೊರಿಯಾ ಏಷ್ಯಾಕಪ್‌ನಲ್ಲಿ ಪ್ರಬಲ ತಂಡವಾಗಿದೆ.

ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಚಿನ್ನ ಗೆದ್ದಿಲ್ಲ: ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಭಾರತ ಹಾಕಿ ತಂಡಕ್ಕೆ ಚಿನ್ನ ಗೆಲ್ಲಲಾಗಿಲ್ಲ. ಭಾರತ ತಂಡ ಮೂರು ಬಾರಿ ಫೈನಲ್ ತಲುಪಿದ್ದರೂ ಮೂರೂ ಬಾರಿ ಸೋಲನ್ನು ಎದುರಿಸಬೇಕಾಯಿತು. ಭಾರತದ ಹಾಕಿ ತಂಡವು ದೆಹಲಿ ಕಾಮನ್‌ವೆಲ್ತ್ ಗೇಮ್ಸ್ 2010, ಗ್ಲಾಸ್ಗೋ 2014 ಮತ್ತು ಬರ್ಮಿಂಗ್ಹ್ಯಾಮ್ ಕಾಮನ್‌ವೆಲ್ತ್ ಗೇಮ್ಸ್ 2022 ರಲ್ಲಿ ಬೆಳ್ಳಿ ಪದಕವನ್ನು ಗೆದ್ದಿದೆ. ಅದೇ ರೀತಿ ಭಾರತವು 1998 ಕೌಲಾಲಂಪುರ್ ಮತ್ತು 2018 ರ ಗೋಲ್ಡ್ ಕೋಸ್ಟ್ ಕಾಮನ್​​ವೆಲ್ತ್​​ ಕ್ರೀಡಾಕೂಟದಲ್ಲಿ ನಾಲ್ಕನೇ ಸ್ಥಾನವನ್ನು ಗಳಿಸಿದೆ.

ಒಮ್ಮೆ ವಿಶ್ವಕಪ್ ಗೆದ್ದ ದಾಖಲೆ: ಹಾಕಿ ವಿಶ್ವಕಪ್‌ನಲ್ಲಿ ಭಾರತ ಎರಡು ಬಾರಿ ಫೈನಲ್ ತಲುಪಿ ಮೂರನೇ ಬಾರಿಗೆ ಕಪ್​ ವಶಪಡಿಸಿಕೊಂಡಿತು. 1975 ರಲ್ಲಿ ಭಾರತ ವಿಶ್ವ ಚಾಂಪಿಯನ್ ಆಗುವ ಕನಸನ್ನು ನನಸು ಮಾಡುಕೊಂಡಿತು. 1975ರ ಫೈನಲ್‌ನಲ್ಲಿ ಭಾರತ 2-1 ಗೋಲುಗಳಿಂದ ಪಾಕಿಸ್ತಾನವನ್ನು ಮಣಿಸಿ ಟೈಟಲ್​ ತನ್ನದಾಗಿಸಿಕೊಂಡಿತು.

1973ರ ವಿಶ್ವಕಪ್‌ನಲ್ಲಿ ನೆದರ್ಲೆಂಡ್ಸ್ ಪೆನಾಲ್ಟಿ ಶೂಟೌಟ್‌ನಲ್ಲಿ ಭಾರತವನ್ನು 4-2 ಗೋಲುಗಳಿಂದ ಸೋಲಿಸಿತು. ಇದರಿಂದಾಗಿ ಭಾರತ ಬೆಳ್ಳಿ ಪದಕಕ್ಕೆ ತೃಪ್ತಿಪಡಬೇಕಾಯಿತು. 1971 ರ ವಿಶ್ವಕಪ್‌ನಲ್ಲಿ, ಹೆಚ್ಚುವರಿ ಸಮಯದ ನಂತರ ಭಾರತವು ಕೀನ್ಯಾವನ್ನು 2-1 ರಿಂದ ಸೋಲಿಸುವ ಮೂಲಕ ಕಂಚಿನ ಪದಕವನ್ನು ಗೆದ್ದುಕೊಂಡಿತು.

ಇದನ್ನೂ ಓದಿ: ಹಾಕಿ ವಿಶ್ವಕಪ್ 2023: ಒಡಿಶಾಗೆ ಬಂದಿಳಿದ ಸ್ಪೇನ್​, ಕೊರಿಯಾ, ಫ್ರಾನ್ಸ್​ ತಂಡಗಳು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.