ಸ್ಟಾವೆಂಜರ್(ನಾರ್ವೆ): ಚೆಸ್ ಲೋಕದಲ್ಲಿ ಮಿನುಗುತ್ತಿರುವ ತಮಿಳುನಾಡಿನ ಜೂನಿಯರ್ ಚೆಸ್ ಮಾಸ್ಟರ್ ಆರ್ ಪ್ರಗ್ನಾನಂದ ಅವರು ಇಲ್ಲಿ ನಡೆಯುತ್ತಿರುವ ನಾರ್ವೆ ಚೆಸ್ ಗ್ರೂಪ್ ಎ ಓಪನ್ ಚೆಸ್ ಟೂರ್ನಿಯಲ್ಲಿ ಒಂಬತ್ತು ಸುತ್ತುಗಳಲ್ಲಿ 7.5 ಅಂಕ ಗಳಿಸಿ ವಿಜೇತರಾಗಿ ಹೊರಹೊಮ್ಮಿದ್ದಾರೆ.
16 ವರ್ಷದ ಯುವ ಗ್ರ್ಯಾಂಡ್ ಮಾಸ್ಟರ್ ಆರ್ ಪ್ರಗ್ನಾನಂದ ಉತ್ತಮವಾಗಿ ಆಟ ಆಡಿ ಒಂಬತ್ತು ಸುತ್ತುಗಳ ಮೂಲಕ ಅಜೇಯರಾಗಿ ಉಳಿದರು. ಶುಕ್ರವಾರ ತಡರಾತ್ರಿ ಸಹ ವಿ ಪ್ರಣೀತ್ ವಿರುದ್ಧ ಗೆಲುವಿನೊಂದಿಗೆ ಪಂದ್ಯಾವಳಿ ಮುಗಿಸಿದರು. ಪ್ರಗ್ನಾನಂದಾ ಅವರು ಮಾರ್ಸೆಲ್ ಎಫ್ರೊಯಿಮ್ಸ್ಕಿ (ಇಸ್ರೇಲ್) ಮತ್ತು ಜಂಗ್ ಮಿನ್ ಸಿಯೊ (ಸ್ವೀಡನ್) ವಿರುದ್ಧ ಪೂರ್ಣ ಅಂಕ ಪಡೆದರು. ಆರು ಪಾಯಿಂಟ್‌ಗಳೊಂದಿಗೆ ಪ್ರಣೀತ್ ಜಂಟಿಯಾಗಿ ಮೂರನೇ ಸ್ಥಾನದಲ್ಲಿದ್ದರು. ಆದರೆ, ಟೈ-ಬ್ರೇಕ್ ಸ್ಕೋರ್‌ನಿಂದ ಆರನೇ ಸ್ಥಾನ ಪಡೆದರು. ಪ್ರಣೀತ್ ಅವರನ್ನು ಸೋಲಿಸುವುದರ ಹೊರತಾಗಿ, ಅಂತಾರಾಷ್ಟ್ರೀಯ ಆಟಗಾರರನ್ನು ಕೂಡ ಹಿಮ್ಮಟ್ಟಿ ಜಯಗಳಿಸುವಲ್ಲಿ ಯಶಸ್ವಿಯಾದರು.
ಇದನ್ನೂ ಓದಿ: ಹಾರ್ದಿಕ್ ಪಾಂಡ್ಯ ತಂಡಕ್ಕೆ ಕಮ್ಬ್ಯಾಕ್ ಮಾಡಿದ್ದು ರೋಚಕ.. 4 ತಿಂಗಳ ಕಾಲ ಬೆಳಗ್ಗೆ 5 ಗಂಟೆಗೆ ಎದ್ದು ತರಬೇತಿ