ಹ್ಯಾಂಗ್ಝೌ: ಚೀನಾದ ಹ್ಯಾಂಗ್ಝೌನಲ್ಲಿ ನಡೆಯುತ್ತಿರುವ ಪ್ಯಾರಾ ಏಷ್ಯನ್ ಗೇಮ್ಸ್ನಲ್ಲಿ ಭಾರತ ಹೊಸ ದಾಖಲೆ ಬರೆದಿದೆ. ಏಷ್ಯನ್ ಪ್ಯಾರ ಗೇಮ್ಸ್ನ ಕೊನೆಯ ದಿನವಾದ ಇಂದು 100 ಪದಕಗಳನ್ನು ಗೆಲ್ಲುವ ಮೂಲಕ ಪ್ಯಾರಾ ಅಥ್ಲೀಟ್ಗಳು ಇತಿಹಾಸದ ಪುಟದಲ್ಲಿ ಭಾರತದ ಹೆಸರನ್ನು ಅಚ್ಚೊತ್ತಿದ್ದಾರೆ. 2018ರ ಪ್ಯಾರಾ ಗೇಮ್ಸ್ನಲ್ಲಿ ಭಾರತ 72 ಪದಕಗಳನ್ನು ಗೆದ್ದಿದ್ದು ಇದುವರೆಗಿನ ಅತ್ಯಧಿಕ ಸಾಧನೆಯಾಗಿತ್ತು. ಇದೀಗ ಹಿಂದಿನ ದಾಖಲೆಯನ್ನು ಮುರಿದಿರುವ ಪ್ಯಾರಾ ಅಥ್ಲೀಟ್ಗಳು ಈವರೆಗೂ ಒಟ್ಟು 108 ಪಂದ್ಯಗಳನ್ನು ಗೆದ್ದು ಮುನ್ನಗುತ್ತಿದ್ದಾರೆ.
-
100 MEDALS at the Asian Para Games! A moment of unparalleled joy. This success is a result of the sheer talent, hard work, and determination of our athletes.
— Narendra Modi (@narendramodi) October 28, 2023 " class="align-text-top noRightClick twitterSection" data="
This remarkable milestone fills our hearts with immense pride. I extend my deepest appreciation and gratitude to our… pic.twitter.com/UYQD0F9veM
">100 MEDALS at the Asian Para Games! A moment of unparalleled joy. This success is a result of the sheer talent, hard work, and determination of our athletes.
— Narendra Modi (@narendramodi) October 28, 2023
This remarkable milestone fills our hearts with immense pride. I extend my deepest appreciation and gratitude to our… pic.twitter.com/UYQD0F9veM100 MEDALS at the Asian Para Games! A moment of unparalleled joy. This success is a result of the sheer talent, hard work, and determination of our athletes.
— Narendra Modi (@narendramodi) October 28, 2023
This remarkable milestone fills our hearts with immense pride. I extend my deepest appreciation and gratitude to our… pic.twitter.com/UYQD0F9veM
ಟ್ವೀಟ್ ಮಾಡಿ ಅಭಿನಂದಿಸಿದ ಪ್ರಧಾನಿ ಮೋದಿ: ಈ ಮಹತ್ತರ ಸಾಧನೆಗೆ ಭಾರತದ ಪ್ರಧಾನಿ ನರೇಂದ್ರ ಮೋದಿ ಪ್ಯಾರಾ ಅಥ್ಲೀಟ್ಗಳಿಗೆ ಶುಭಕೋರಿದ್ದಾರೆ. ತಮ್ಮ ಅಧಿಕೃತ ಎಕ್ಸ್ (ಟ್ವಿಟ್ಟರ್) ಖಾತೆಯಲ್ಲಿ, ಪ್ಯಾರಾ ಏಷ್ಯನ್ ಗೇಮ್ಸ್ನಲ್ಲಿ ಭಾರತಕ್ಕೆ 100 ಪದಕಗಳ ಗರಿ! ಇದು ಅಪೂರ್ವ ಆನಂದದ ಕ್ಷಣವಾಗಿದೆ. ಈ ಯಶಸ್ಸು ನಮ್ಮ ಕ್ರೀಡಾಪಟುಗಳ ಪ್ರತಿಭೆ, ಕಠಿಣ ಪರಿಶ್ರಮ ಮತ್ತು ದೃಢ ನಿರ್ಧಾರದ ಫಲವಾಗಿದೆ. ಈ ಗಮನಾರ್ಹ ಸಾಧನೆ ಮಾಡಿದ ಕ್ರೀಡಾಪಟುಗಳು, ತರಬೇತುದಾರರಿಗೆ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ. ಭಾರತದ ಯುವಕರಿಗೆ ಅಸಾಧ್ಯವಾದದು ಯಾವುದೂ ಇಲ್ಲ ಎಂಬುದನ್ನು ಮತ್ತೊಮ್ಮೆ ಸಾಬೀತು ಪಡಿಸಿದ್ದಾರೆ. ಈ ಸಾಧನೆ ನಮಗೆಲ್ಲರಿಗೂ ಸ್ಫೂರ್ತಿದಾಯಕ ಎಂದು ಪೋಸ್ಟ್ನಲ್ಲಿ ಹರ್ಷ ವ್ಯಕ್ತಪಡಿಸಿದ್ದಾರೆ.
-
🏅 India adds a radiant touch to its Medal Tally with a resounding roar of golden glory! 🥇🇮🇳
— SAI Media (@Media_SAI) October 28, 2023 " class="align-text-top noRightClick twitterSection" data="
In the Para Chess Men's team of B1 Category, the terrific trio of Ashwin, Darpan, and Soundarya secures a spectacular Gold, igniting our hearts with pride and joy! ✌️🏆🌟… pic.twitter.com/yEWtd8zz2s
">🏅 India adds a radiant touch to its Medal Tally with a resounding roar of golden glory! 🥇🇮🇳
— SAI Media (@Media_SAI) October 28, 2023
In the Para Chess Men's team of B1 Category, the terrific trio of Ashwin, Darpan, and Soundarya secures a spectacular Gold, igniting our hearts with pride and joy! ✌️🏆🌟… pic.twitter.com/yEWtd8zz2s🏅 India adds a radiant touch to its Medal Tally with a resounding roar of golden glory! 🥇🇮🇳
— SAI Media (@Media_SAI) October 28, 2023
In the Para Chess Men's team of B1 Category, the terrific trio of Ashwin, Darpan, and Soundarya secures a spectacular Gold, igniting our hearts with pride and joy! ✌️🏆🌟… pic.twitter.com/yEWtd8zz2s
ಚೆಸ್ನಲ್ಲಿ ಚಿನ್ನ, ಬೆಳ್ಳಿ, : ಚೆಸ್ನಲ್ಲಿ ಭಾರತ ಮೂರು ಪದಕಗಳನ್ನು ಜಯಿಸಿದೆ. ಪುರುಷರ ಬಿ1 ಚೆಸ್ ಈವೆಂಟ್ನಲ್ಲಿ ದರ್ಪಣ್ ಇನ್ನಾನಿ ಅಶ್ವಿನ್ ಮಕ್ವಾನ, ಸೌಂದರ್ಯ ಪ್ರದಾನ ಅವರ ಒಳಗೊಂಡ ತಂಡ ಫೈನಲ್ ಪಂದ್ಯದಲ್ಲಿ ಎದುರಾಳಿ ತಂಡವನ್ನು ಮಣಿಸಿ ಕ್ರಮವಾಗಿ ಚಿನ್ನ, ಬೆಳ್ಳಿ, ಕಂಚು ಮುಡಿಗೇರಿಸಿಕೊಂಡಿದ್ದಾರೆ.
ಜಾವೆಲಿನ್ನಲ್ಲಿ ಡಬಲ್ ಪದಕ: ಜಾವೆಲಿನ್ ಸ್ಪರ್ಧೆಯಲ್ಲಿ ಭಾರತದ ಪ್ಯಾರಾ ಅಥ್ಲೀಟ್ಗಳು ಚಿನ್ನ ಮತ್ತು ಕಂಚಿನ ಪದಕ ಜಯಿಸಿದ್ದಾರೆ. ಪುರುಷರ ಎಫ್55 ಜಾವೆಲಿನ್ ಥ್ರೋ ಈವೆಂಟ್ನಲ್ಲಿ ನೀರಜ್ ಯಾದವ್ 33.69 ಮೀ ದೂರ ಭರ್ಜಿ ಎಸೆಯುವ ಮೂಲಕ ಚಿನ್ನವನ್ನು ವಶ ಪಡಿಸಿಕೊಂಡು ಕ್ರೀಡಾಕೂಟದಲ್ಲಿ ಹೊಸ ದಾಖಲೆ ಬರೆದಿದ್ದಾರೆ. ಇದೇ ವಿಭಾಗದಲ್ಲಿ ಟೆಕ್ ಚಂದ್ ಎಂಬುವವರು ಕಂಚಿನ ಪದಕ ಗೆದ್ದಿದ್ದಾರೆ.
-
🥇🥉 India's double Podium Finish at #AsianParaGames2022 in Men's Javelin Throw F55! 🇮🇳
— SAI Media (@Media_SAI) October 28, 2023 ." class="align-text-top noRightClick twitterSection" data="
🥇 @neerajy31401032 claims GOLD with a massive throw of 33.69m, setting a new Para Games Record. His second 🥇 in this edition of the #AsianParaGames.@MahlawatTek secures the bronze 🥉… pic.twitter.com/zLZwcPVV8n
.">🥇🥉 India's double Podium Finish at #AsianParaGames2022 in Men's Javelin Throw F55! 🇮🇳
— SAI Media (@Media_SAI) October 28, 2023
🥇 @neerajy31401032 claims GOLD with a massive throw of 33.69m, setting a new Para Games Record. His second 🥇 in this edition of the #AsianParaGames.@MahlawatTek secures the bronze 🥉… pic.twitter.com/zLZwcPVV8n
.🥇🥉 India's double Podium Finish at #AsianParaGames2022 in Men's Javelin Throw F55! 🇮🇳
— SAI Media (@Media_SAI) October 28, 2023
🥇 @neerajy31401032 claims GOLD with a massive throw of 33.69m, setting a new Para Games Record. His second 🥇 in this edition of the #AsianParaGames.@MahlawatTek secures the bronze 🥉… pic.twitter.com/zLZwcPVV8n
ಓಟದ ಸ್ಫರ್ದೆಯಲ್ಲಿ ಚಿನ್ನ: ಪುರುಷರ 400 ಮೀ-ಟಿ47 ಓಟದ ಸ್ಪರ್ಧೆಯಲ್ಲಿ ಪ್ಯಾರಾ ಅಥ್ಲೀಟ್ ದಿಲೀಪ್ ಮಹದು ಗವಿತ್ ಚಿನ್ನವನ್ನು ಗೆದ್ದಿದ್ದಾರೆ. 49.48 ಮಿ. ಸೆಕೆಂಡ್ನಲ್ಲಿ 400 ಮೀಟರ್ ತಲುಪುವ ಮೂಲಕ ಈ ಸಾಧನೆ ಮಾಡಿದ್ದಾರೆ. ಮಹಿಳಾ 1500 ಮೀ. ಟಿ20 ಓಟದ ಸ್ಪರ್ಧೆಯಲ್ಲಿ ಪೂಜಾ ಕಂಚು ಗೆದ್ದಿದ್ದಾರೆ.
-
It is the 1st Medal of the day, a GOLD at #AsianParaGames2022 🇮🇳
— SAI Media (@Media_SAI) October 28, 2023 " class="align-text-top noRightClick twitterSection" data="
Such an incredible moment as Dilip Mahadu Gavit
claims GOLD in Men's 400m - T47 event, with time of 49.48 secs
Our hearts swell with pride and joy as we celebrate this achievement. Thank you, champion, for raising… pic.twitter.com/fawkUemtQP
">It is the 1st Medal of the day, a GOLD at #AsianParaGames2022 🇮🇳
— SAI Media (@Media_SAI) October 28, 2023
Such an incredible moment as Dilip Mahadu Gavit
claims GOLD in Men's 400m - T47 event, with time of 49.48 secs
Our hearts swell with pride and joy as we celebrate this achievement. Thank you, champion, for raising… pic.twitter.com/fawkUemtQPIt is the 1st Medal of the day, a GOLD at #AsianParaGames2022 🇮🇳
— SAI Media (@Media_SAI) October 28, 2023
Such an incredible moment as Dilip Mahadu Gavit
claims GOLD in Men's 400m - T47 event, with time of 49.48 secs
Our hearts swell with pride and joy as we celebrate this achievement. Thank you, champion, for raising… pic.twitter.com/fawkUemtQP
ಸ್ಕಲ್ಸ್ನಲ್ಲಿ ಬೆಳ್ಳಿ: ಮಿಶ್ರ ಡಬಲ್ಸ್ ಸ್ಕಲ್ಸ್ ಪಿಆರ್3 ಈವೆಂಟ್ನಲ್ಲಿ ಪ್ಯಾರಾ ರೋವರ್ಸ್ ಅನಿತಾ ಮತ್ತು ನಾರಾಯಣ ಕೊಂಗನಪಲ್ಲೆ ಜೋಡಿ ಬೆಳ್ಳಿಪದಕ ಗೆದ್ದಿದ್ದಾರೆ.
ಇದನ್ನೂ ಓದಿ: ಮಹಿಳಾ ಏಷ್ಯನ್ ಚಾಂಪಿಯನ್ ಟ್ರೋಫಿ: ಥಾಯ್ಲೆಂಡ್ ವಿರುದ್ಧ ಭಾರತಕ್ಕೆ 7-1 ಗೋಲುಗಳಿಂದ ಭರ್ಜರಿ ಗೆಲುವು