ರಾಂಚಿ (ಜಾರ್ಖಂಡ್): ರಾಜಧಾನಿ ರಾಂಚಿಯಲ್ಲಿ ಎಫ್‌ಐಎಚ್ ಹಾಕಿ ಒಲಿಂಪಿಕ್ ಅರ್ಹತಾ ಪಂದ್ಯಗಳು ನಡೆಯಲಿದ್ದು, ಭಾರತೀಯ ಮಹಿಳಾ ಹಾಕಿ ತಂಡ ಗೆಲುವಿನ ನಿರೀಕ್ಷೆ ಹೊಂದಿದೆ. ಪ್ಯಾರಿಸ್ನಲ್ಲಿ ನಡೆಯುವ ಜಾಗತಿಕ ಕ್ರೀಡಾಜಾತ್ರೆ ಒಲಿಂಪಿಕ್ಸ್‌ಗೆ ಸ್ಥಾನ ಪಡೆಯುವ ಭರವಸೆ ಹೊಂದಿರುವ ತಂಡ, ಅದಕ್ಕೆ ಬೇಕಾದ ಎಲ್ಲ ಸಿದ್ಧತೆ ಕೂಡ ನಡೆಸಿದೆ. ಶನಿವಾರ ಅರ್ಹತಾ ಪಂದ್ಯಗಳು ನಡೆಯಲಿದ್ದು, ಕ್ವಾಲಿಫೈಯರ್‌ನ ಆರಂಭಿಕ ಪಂದ್ಯದಲ್ಲಿ ಭಾರತೀಯ ಮಹಿಳಾ ಹಾಕಿ ಅಮೆರಿಕವನ್ನು ಎದುರಿಸಲಿದೆ. ಮುಂಬರುವ 2024ರ ಪ್ಯಾರಿಸ್ ಒಲಿಂಪಿಕ್ಸ್ ಕ್ರೀಡಾ ಜಾತ್ರೆಗೆ ಅರ್ಹತೆ ಪಡೆಯಲು ಭಾರತವು ಮೊದಲ ಮೂರರಲ್ಲಿ ಸ್ಥಾನ ಪಡೆಯಬೇಕಾಗಿದೆ.
-
We are in Ranchi for the FIH Hockey Olympic Qualifier. #EnrouteToParis
— International Hockey Federation (@FIH_Hockey) January 12, 2024 " class="align-text-top noRightClick twitterSection" data="
📆 Tournament to be played from 13th Jan - 19th Jan 2024.
📱Download the https://t.co/71D0pOpuZ8 App to watch all the games LIVE!@TheHockeyIndia #HockeyEquals pic.twitter.com/USubmH9eZt
">We are in Ranchi for the FIH Hockey Olympic Qualifier. #EnrouteToParis
— International Hockey Federation (@FIH_Hockey) January 12, 2024
📆 Tournament to be played from 13th Jan - 19th Jan 2024.
📱Download the https://t.co/71D0pOpuZ8 App to watch all the games LIVE!@TheHockeyIndia #HockeyEquals pic.twitter.com/USubmH9eZtWe are in Ranchi for the FIH Hockey Olympic Qualifier. #EnrouteToParis
— International Hockey Federation (@FIH_Hockey) January 12, 2024
📆 Tournament to be played from 13th Jan - 19th Jan 2024.
📱Download the https://t.co/71D0pOpuZ8 App to watch all the games LIVE!@TheHockeyIndia #HockeyEquals pic.twitter.com/USubmH9eZt
ಪ್ಯಾರಿಸ್ ಒಲಿಂಪಿಕ್ಸ್‌ಗೆ ಸ್ಥಾನ ಪಡೆಯುವ ಕದನ ಶನಿವಾರ ಆರಂಭವಾಗಲಿದ್ದು, ರಾಂಚಿಯ ಮರಂಗ್ ಗೊಮ್ಕೆ ಜೈಪಾಲ್ ಸಿಂಗ್ ಆಸ್ಟ್ರೋಟರ್ಫ್ ಹಾಕಿ ಕ್ರೀಡಾಂಗಣ ಸಿದ್ಧತೆಗೊಂಡಿದೆ. ಎಂಟು ತಂಡಗಳು ಕಣದಲ್ಲಿವೆ. ಜರ್ಮನಿ, ಜಪಾನ್, ಚಿಲಿ ಮತ್ತು ಝೆಕ್ ರಿಪಬ್ಲಿಕ್ ತಂಡಗಳು ಪೂಲ್ ಎ ಗುಂಪಿನಲ್ಲಿದ್ದರೆ, ಆತಿಥೇಯ ಭಾರತವು ಅಮೆರಿಕ, ನ್ಯೂಜಿಲೆಂಡ್ ಮತ್ತು ಇಟಲಿಯೊಂದಿಗೆ ಪೂಲ್ ಬಿ ಗುಂಪಿನಲ್ಲಿದೆ.
ಈ ಟೂರ್ನಿಯಲ್ಲಿ ಅಗ್ರ ಮೂರು ಸ್ಥಾನ ಗಳಿಸುವ ತಂಡಗಳಿಗೆ ಮಾತ್ರ ಒಲಿಂಪಿಕ್ಸ್‌ಗೆ ಟಿಕೆಟ್ ದೊರೆಯಲಿದೆ. ಸ್ಥಾನ ಪಡೆಯಲು ಸವಿತಾ ನೇತೃತ್ವದ ಭಾರತೀಯ ಮಹಿಳಾ ಹಾಕಿ ತಂಡ, ನಾಳೆಯೇ ಅಮೆರಿಕ ತಂಡವನ್ನು ಎದುರಿಸಲಿದೆ. ಏಷ್ಯನ್ ಗೇಮ್ಸ್‌ನಲ್ಲಿ ಮೂರನೇ ಸ್ಥಾನ ಪಡೆದು ನಿರಾಸೆ ಅನುಭವಿಸಿದ್ದ ಭಾರತ, ಅದನ್ನು ಮರೆತು ಇಲ್ಲಿ ಉತ್ತಮ ಪ್ರದರ್ಶನ ನೀಡುವ ವಿಶ್ವಾಸದಲ್ಲಿದೆ. ವಿಶ್ವದ ಐದನೇ ಕ್ರಮಾಂಕದ ಜರ್ಮನಿ ಇಲ್ಲಿ ಅತಿ ಹೆಚ್ಚಿನ ರ್‍ಯಾಂಕ್ ಪಡೆದ ತಂಡವಾದರೆ, ಭಾರತ (ಆರನೇ ಕ್ರಮಾಂಕ) ಎರಡನೇ ಉತ್ತಮ ರ್‍ಯಾಂಕ್ ಪಡೆದ ತಂಡವಾಗಿದೆ. ಇತ್ತೀಚೆಗೆ ನಡೆದ ಏಷ್ಯನ್ ಚಾಂಪಿಯನ್ಸ್ ಟ್ರೋಫಿಯ ಸೆಮಿ-ಫೈನಲ್‌ನಲ್ಲಿ ಚೀನಾ ವಿರುದ್ಧ ಭಾರತ ಸೆಣಸಿತ್ತು.
"ಭಾರತೀಯ ಮಹಿಳಾ ಹಾಕಿ ತಂಡದ ಒಲಿಂಪಿಕ್ಸ್‌ಗೆ ಟಿಕೆಟ್ ಪಡೆಯುವ ಕನಸು ಈಡೇರಲಿವೆ. ಇದು ತಂಡದ ಪ್ರತಿಯೊಬ್ಬ ಆಟಗಾರರನ ಕನಸು ಕೂಡ ಕೂಡ ಹೌದು. ಹಾಗಾಗಿ ಪ್ರತಿ ಆಟಗಾರರು ಉತ್ಸಾಹದಲ್ಲಿದ್ದಾರೆ. ಪ್ಯಾರಿಸ್ ಒಲಿಂಪಿಕ್ಸ್ ಅರ್ಹತೆಗೆ ನಾಳೆಯ ಪಂದ್ಯವು ನಮ್ಮ ಮೊದಲ ಹೆಜ್ಜೆಯಾಗಿದೆ. ಇದನ್ನು ಇಡೀ ತಂಡ ಅರ್ಥಮಾಡಿಕೊಂಡಿದೆ. ನಮ್ಮ ಶ್ರಮದ ಮೇಲೆ ನಮಗೆ ನಂಬಿಕೆ ಇದೆ. ವೈಯಕ್ತಿಕವಾಗಿ ಮತ್ತು ಇಡೀ ತಂಡವಾಗಿ ನಾವು ನಮ್ಮ ಕೆಲಸ ಮಾಡಲಿದ್ದೇವೆ. ಯುಎಸ್‌ಎ ಉತ್ತಮ ತಂಡವಾಗಿದ್ದರಿಂದ ಒತ್ತಡ ಸಹಜ. ಹಾಗಾಗಿ ನಾವು ಮಾನಸಿಕವಾಗಿ ಸಿದ್ಧರಾಗಿದ್ದೇವೆ. ಗೆಲುವು ನಮ್ಮ ಮೊದಲ ಆದ್ಯತೆ. ನಮಗೆ ನಮ್ಮ ಶಕ್ತಿಯ ಮೇಲೆ ವಿಶ್ವಾಸವಿದೆ" ಎಂದು ತಂಡದ ನಾಯಕಿ ಸವಿತಾ ಸುದ್ದಿಗಾರರೊಂದಿಗೆ ಮಾತಾಡುತ್ತಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಶನಿವಾರ ಇಲ್ಲಿ ನಡೆಯಲಿರುವ ಅಮೆರಿಕ ವಿರುದ್ಧದ ಪಂದ್ಯದೊಂದಿಗೆ ಭಾರತದ ಮಹಿಳಾ ಹಾಕಿ ತಂಡ ತನ್ನ ಅಭಿಯಾನ ಆರಂಭಿಸಲಿದೆ. 2019ರಲ್ಲಿ ನಡೆದ ಒಲಿಂಪಿಕ್ ಅರ್ಹತಾ ಸುತ್ತಿನಲ್ಲಿ ಭಾರತ ತಂಡವು ಅಮೆರಿಕವನ್ನು ಸೋಲಿಸಿತ್ತು. ಈ ಬಾರಿಯೂ ಅದು ಪುನರಾವರ್ತನೆ ಆಗಲಿದೆಯಾ ಅನ್ನೋದನ್ನು ಕಾದು ನೋಡಬೇಕಿದೆ.
ಭಾರತ ತಂಡವು ಜನವರಿ 13 ರಂದು ತನ್ನ ಆರಂಭಿಕ ಪಂದ್ಯದಲ್ಲಿ ಅಮೆರಿಕವನ್ನು ಎದುರಿಸಲಿದೆ, ನಂತರ ಜನವರಿ 14 ರಂದು ನ್ಯೂಜಿಲೆಂಡ್ ವಿರುದ್ಧದ ಪಂದ್ಯವನ್ನು ಎದುರಿಸಲಿದೆ. ಒಂದು ದಿನದ ವಿಶ್ರಾಂತಿಯ ನಂತರ ಭಾರತವು ಜನವರಿ 16 ರಂದು ಇಟಲಿಯಲ್ಲಿ ಆಡಲಿದ್ದು, ಸೆಮಿಫೈನಲ್ ಪಂದ್ಯಗಳು 18 ರಂದು ಮತ್ತು ಫೈನಲ್ ಜನವರಿ 19 ರಂದು ನಡೆಯಲಿದೆ.
ಇದನ್ನೂ ಓದಿ: ಕ್ರಿಕೆಟ್ ಗ್ರೌಂಡ್ಗೆ ಹೆಲಿಕಾಪ್ಟರ್‌ನಲ್ಲಿ ಡೇವಿಡ್ ವಾರ್ನರ್ ಗ್ರ್ಯಾಂಡ್ ಎಂಟ್ರಿ