ETV Bharat / sports

2036ರ ಒಲಿಂಪಿಕ್ಸ್, 2030 ಯೂತ್ ಗೇಮ್ಸ್ ಆತಿಥ್ಯಕ್ಕೆ ಭಾರತ ಪ್ರಯತ್ನಿಸುತ್ತದೆ: ಪ್ರಧಾನಿ ನರೇಂದ್ರ ಮೋದಿ

author img

By ETV Bharat Karnataka Team

Published : Nov 1, 2023, 10:12 PM IST

ಏಷ್ಯನ್ ಪ್ಯಾರಾ ಗೇಮ್ಸ್​ನಲ್ಲಿ ಭಾಗವಹಿಸಿದ ಅಥ್ಲೀಟ್​​ಗಳ ಜೊತೆ ದೆಹಲಿಯ ಮೇಜರ್ ಧ್ಯಾನ್ ಚಂದ್ ಸ್ಟೇಡಿಯಂ ಪ್ರಧಾನಿ ನರೇಂದ್ರ ಮೋದಿ ಸಂವಾದ ನಡೆಸಿದರು.

Prime Minister Narendra Modi
ಪ್ರಧಾನಿ ನರೇಂದ್ರ ಮೋದಿ

ನವದೆಹಲಿ: 2036ರ ಒಲಿಂಪಿಕ್ಸ್ ಮತ್ತು 2030 ಯೂತ್ ಗೇಮ್ಸ್ ಆತಿಥ್ಯ ವಹಿಸಲು ದೇಶವು ಪ್ರಯತ್ನಿಸುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಚೀನಾದ ಹ್ಯಾಂಗ್​ಝೌನಲ್ಲಿ ನಡೆದ ಏಷ್ಯನ್ ಪ್ಯಾರಾ ಗೇಮ್ಸ್​ನಲ್ಲಿ ಭಾಗವಹಿಸಿದ ಅಥ್ಲೀಟ್​ಗಳೊಂದಿಗಿನ ಸಂವಾದದ ವೇಳೆ ಪ್ರಸ್ತಾಪಿಸಿದ್ದಾರೆ.

  • #WATCH | Delhi: "We are witnessing India's growth in terms of sporting culture and sporting society...Now we are planning to host the 2030 Youth Olympics and 2036 Olympics," says PM Modi while interacting with Asian Para Games Athletes. pic.twitter.com/XMkgT3UOdC

    — ANI (@ANI) November 1, 2023 " class="align-text-top noRightClick twitterSection" data=" ">

ದೆಹಲಿಯ ಮೇಜರ್ ಧ್ಯಾನ್ ಚಂದ್ ಸ್ಟೇಡಿಯಂನಲ್ಲಿ ಪ್ಯಾರಾ ಅಥ್ಲೀಟ್‌ಗಳೊಂದಿಗೆ ಸಂವಾದ ನಡೆಸಿದ ಪ್ರಧಾನಮಂತ್ರಿ, ಸರ್ಕಾರದ ವಿಧಾನವು "ಕ್ರೀಡಾಪಟು ಕೇಂದ್ರಿತ" ವಾಗಿದೆ. ಭಾರತವು ತನ್ನ ಕ್ರೀಡಾ ಸಂಸ್ಕೃತಿ ದೃಷ್ಟಿಯಿಂದ ಮತ್ತು "ಕ್ರೀಡಾ ಸಮಾಜ" ವಾಗಿಯೂ ಬೆಳೆಯುತ್ತಿದೆ. ನಾವು 2030 ಯೂತ್ ಒಲಿಂಪಿಕ್ಸ್ ಮತ್ತು 2036 ಒಲಿಂಪಿಕ್ಸ್ ಅನ್ನು ಆಯೋಜಿಸಲು ಪ್ರಯತ್ನಿಸುತ್ತಿದ್ದೇವೆ ಇದರಿಂದ ಭಾರತವು ಮುನ್ನಡೆಯಲು ಆತ್ಮಸ್ಥೈರ್ಯ ಗಳಿಸುತ್ತದೆ ಎಂದು ಅವರು ಹೇಳಿದರು.

"ನಿಮ್ಮನ್ನು ಭೇಟಿಯಾಗಲು ನಾನು ಅವಕಾಶಗಳನ್ನು ಹುಡುಕುತ್ತಲೇ ಇದ್ದೇನೆ. ನಾನು ನಿಮ್ಮ ನಡುವೆ ಬಂದಿರುವುದು ಒಂದೇ ಒಂದು ವಿಷಯಕ್ಕಾಗಿ ಮತ್ತು ಅದು ನಿಮ್ಮನ್ನು ಅಭಿನಂದಿಸಲು. ನೀವು ಭಾರತದ ಹೊರಗೆ, ಚೀನಾದಲ್ಲಿ ಆಡುತ್ತಿದ್ದೀರಿ. ನೀವೆಲ್ಲರೂ ದೇಶವನ್ನು ಹೆಮ್ಮೆ ಪಡುವಂತೆ ಮಾಡಿದ ರೀತಿ ಸಂಪೂರ್ಣವಾಗಿ ಅಭೂತಪೂರ್ವವಾಗಿದೆ. ನಿಮ್ಮ ಕಾರ್ಯವೈಖರಿಯು ಇಡೀ ರಾಷ್ಟ್ರವನ್ನು ರೋಮಾಂಚನಗೊಳಿಸಿದೆ" ಎಂದರು.

"ನಿಮ್ಮಲ್ಲಿ ಆಟಗಳಿಗೆ ಆಯ್ಕೆಯಾದವರು, ಕೆಲವರು ಗೆದ್ದರು, ಕೆಲವರು ಕಲಿತರು. ಆದರೆ ಯಾರೂ ಸೋತಿಲ್ಲ ... ಕ್ರೀಡೆಯಲ್ಲಿ, ಕೇವಲ ಎರಡು ವಿಷಯಗಳು ನಡೆಯುತ್ತವೆ, ಒಂದೋ ನೀವು ಗೆಲ್ಲುತ್ತೀರಿ ಅಥವಾ ನೀವು ಕಲಿಯುತ್ತೀರಿ. ನೀವು ಎಂದಿಗೂ ಸೋಲುವುದಿಲ್ಲ" ಎಂದಿದ್ದಾರೆ.

"ಭಾರತವು ಯಾವಾಗಲೂ ಉತ್ತಮ ಕ್ರೀಡಾಪಟುಗಳನ್ನು ಹೊಂದಿದೆ. ಆದರೆ, ಬೆಂಬಲ ಅಥವಾ ಆರ್ಥಿಕ ಬೆಂಬಲದ ಕೊರತೆ ಅವರಿಗೆ ಇತ್ತು. ಒಂಬತ್ತು ವರ್ಷಗಳಲ್ಲಿ ಹಳೆಯ ಆಲೋಚನೆ ಬದಲಾಗಿದೆ. ಇಂದು ವೈಯಕ್ತಿಕ ಕ್ರೀಡಾಪಟುಗಳಿಗೆ 4-5 ಕೋಟಿ ರೂಪಾಯಿಗಳನ್ನು ಖರ್ಚು ಮಾಡಲಾಗುತ್ತಿದೆ. ಸರ್ಕಾರವು ಅಥ್ಲೀಟ್​ಗಳ ದಾರಿಯ ಅಡಚಣೆಗಳನ್ನು ತೆರವುಗೊಳಿಸಿದೆ. ಸಾಮರ್ಥ್ಯವು ಸರಿಯಾದ ವೇದಿಕೆಯನ್ನು ಪಡೆದಾಗ ಮಾತ್ರ, ಕಾರ್ಯಕ್ಷಮತೆಯನ್ನು ಖಚಿತಪಡಿಸಿಕೊಳ್ಳಬಹುದು. ಖೇಲೋ ಇಂಡಿಯಾ ಮತ್ತು ಟಾರ್ಗೆಟ್ ಒಲಿಂಪಿಕ್ ಪೋಡಿಯಂ ಸ್ಕೀಮ್‌ ನಂತಹ ಯೋಜನೆಗಳು ಕ್ರೀಡಾಪಟುಗಳಿಗೆ ಸಹಕಾರವಾಗಿದೆ" ಎಂದಿದ್ದಾರೆ.

ಕಾರ್ಯಕ್ರಮದಲ್ಲಿ ಕ್ರೀಡಾಪಟುಗಳು, ಅವರ ತರಬೇತುದಾರರು, ಪ್ಯಾರಾಲಿಂಪಿಕ್ ಸಮಿತಿ ಆಫ್ ಇಂಡಿಯಾ ಮತ್ತು ಭಾರತೀಯ ಒಲಿಂಪಿಕ್ ಅಸೋಸಿಯೇಷನ್‌ನ ಅಧಿಕಾರಿಗಳು, ರಾಷ್ಟ್ರೀಯ ಕ್ರೀಡಾ ಫೆಡರೇಶನ್‌ಗಳ ಪ್ರತಿನಿಧಿಗಳು ಮತ್ತು ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕೂರ್ ಉಪಸ್ಥಿತರಿದ್ದರು.

29 ಚಿನ್ನ, 31 ಬೆಳ್ಳಿ ಮತ್ತು 51 ಕಂಚಿನ ಒಟ್ಟು 111 ಪದಕಗಳೊಂದಿಗೆ ಚೀನಾದ ಹ್ಯಾಂಗ್‌ಝೌನಲ್ಲಿ ಭಾರತ ತನ್ನ ಪ್ಯಾರಾ ಏಷ್ಯನ್ ಗೇಮ್ಸ್ ಅಭಿಯಾನವನ್ನು ಕೊನೆಗೊಳಿಸಿತು. ಭಾರತ ಪದಕ ಪಟ್ಟಿಯಲ್ಲಿ ಐದನೇ ಸ್ಥಾನ ಗಳಿಸಿತು. ಇದು ಕ್ರೀಡಾಕೂಟಗಳಲ್ಲಿ ಭಾರತ ಗಳಿಸಿದ ದಾಖಲೆಯ ಪದಕಗಳಾಗಿದೆ.

ಇದನ್ನೂ ಓದಿ: ವಿಶ್ವಕಪ್​ ಕ್ರಿಕೆಟ್​​: ಹರಿಣಗಳ ಮುಂದೆ ಮಂಡಿಯೂರಿದ ಕಿವೀಸ್​: ದಕ್ಷಿಣ ಆಫ್ರಿಕಾಕ್ಕೆ 190 ರನ್​ಗಳ ಗೆಲುವು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.