ETV Bharat / sports

ಪ್ಯಾರಾಲಿಂಪಿಕ್ಸ್​ನಲ್ಲಿ ಕನ್ನಡಿಗ ಸೇರಿದಂತೆ ಭಾರತಕ್ಕೆ ಪದಕ ತಂದುಕೊಟ್ಟಿರುವ ವಿಜೇತರ ವಿವರ ಇಲ್ಲಿದೆ - ಮರಿಯಪ್ಪನ್ ತಂಗವೇಲು

ಭಾರತ 1968ರಲ್ಲಿ ಪ್ಯಾರಾಲಿಂಪಿಕ್ಸ್​ಗೆ ಪದಾರ್ಪಣೆ ಮಾಡಿದ್ದಾಗಿನಿಂದ ಒಟ್ಟು 12 ಮೆಡಲ್ ಗೆದ್ದಿದೆ. ಇದರಲ್ಲಿ ತಲಾ 4 ಚಿನ್ನ, ಬೆಳ್ಳಿ ಮತ್ತು ಕಂಚಿನ ಪದಕ ಸೇರಿವೆ. ಪದಕ ಗೆದ್ದ ಪ್ರಮುಖ ಕ್ರೀಡಾಪಟುಗಳ ವಿವಿರ ಇಲ್ಲಿದೆ..

India at Paralympics: Meet the past medallists
ಪ್ಯಾರಾಲಿಂಪಿಕ್ಸ್​ನಲ್ಲಿ ಪದಕ ಗೆದ್ದವರ ವಿವರ
author img

By

Published : Aug 23, 2021, 3:38 PM IST

ನವದೆಹಲಿ : ಭಾರತ ಟೋಕಿಯೊ ಒಲಿಂಪಿಕ್ಸ್​ನಲ್ಲಿ 7 ಪದಕ ಗೆಲ್ಲುವ ಮೂಲಕ ದಾಖಲೆ ಬರೆದಿತ್ತು. ಇದೀಗ ಮಂಗಳವಾರದಿಂದ ಪ್ಯಾರಾಲಿಂಪಿಕ್ಸ್​ ಆರಂಭವಾಗುತ್ತಿದೆ. 50ಕ್ಕೂ ಹೆಚ್ಚು ಕ್ರೀಡಾಪಟುಗಳು ಈ ಬಾರಿ ಸ್ಪರ್ಧಿಸುತ್ತಿದ್ದು, ಇವರೂ ಕೂಡ ಈ ಹಿಂದಿನ ದಾಖಲೆ ಮುರಿಯುವ ಉತ್ಸಾಹದಲ್ಲಿದ್ದಾರೆ.

ಭಾರತ 1968ರಲ್ಲಿ ಪ್ಯಾರಾಲಿಂಪಿಕ್ಸ್​ಗೆ ಪದಾರ್ಪಣೆ ಮಾಡಿದ್ದಾಗಿನಿಂದ ಒಟ್ಟು 12 ಮೆಡಲ್ ಗೆದ್ದಿದೆ. ಇದರಲ್ಲಿ ತಲಾ 4 ಚಿನ್ನ, ಬೆಳ್ಳಿ ಮತ್ತು ಕಂಚಿನ ಪದಕ ಸೇರಿವೆ. ಪದಕ ಗೆದ್ದ ಪ್ರಮುಖ ಕ್ರೀಡಾಪಟುಗಳ ವಿವಿರ ಇಲ್ಲಿದೆ.

1972ರ ಹೀಡೆಲ್​ಬರ್ಗ್​

ಮುರಳೀಕಾಂತ್​ ಪೇಟ್ಕರ್​-ಚಿನ್ನ

ಮುರಳೀಕಾಂತ್​ ಪೇಟ್ಕರ್​ ಪ್ಯಾರಾಲಿಂಪಿಕ್ಸ್​ನಲ್ಲಿ ಭಾರತಕ್ಕೆ ಮೊದಲ ಪದಕ ತಂದುಕೊಟ್ಟ ಅಥ್ಲೀಟ್ ಆಗಿದ್ದಾರೆ. ಅವರು 1972ರ ಹೀಡೆಲ್​ಬರ್ಗ್​ ಕ್ರೀಡಾಕೂಟದಲ್ಲಿ 50 ಮೀಟರ್​ ಫ್ರಿಸ್ಟೈಲ್​ ವಿಭಾಗದಲ್ಲಿ ಚಿನ್ನದ ಪದಕ ಗೆದ್ದಿದ್ದರು. ಅವರು ವಿಶ್ವದಾಖಲೆಯ 37.33 ಸೆಕೆಂಡ್​ಗಳಲ್ಲಿ ಗುರಿ ತಲಿಪಿದ್ದರು.

ಭಾರತೀಯ ಸೈನ್ಯದಲ್ಲಿದ್ದ ಪೇಟ್ಕರ್ ​ಮೂಲತಃ ಬಾಕ್ಸರ್​ ಆಗಿದ್ದರು. 1965ರ ಇಂಟೋ-ಪಾಕ್​ ಯುದ್ದದಲ್ಲಿ ಒಂದು ಕೈ ಕಳೆದುಕೊಂಡಿದ್ದರಿಂದ ಸ್ವಿಮ್ಮಿಂಗ್​ ಕಡೆಗೆ ತಮ್ಮ ಕ್ರೀಡೆಯನ್ನು ಬದಲಾಯಿಸಿಕೊಂಡಿದ್ದರು.

1984ರ ನ್ಯೂಯಾರ್ಕ್​ (ಯುಎಸ್)​ ಮತ್ತು ಸ್ಟೋಕ್ ಮ್ಯಾಂಡೆವಿಲ್ಲೆ (ಯುಕೆ)

ಜೋಗಿಂದರ್​ ಸಿಂಗ್ ಬೇಡಿ ಒಂದು ಬೆಳ್ಳಿ ಮತ್ತು 2 ಕಂಚಿನ ಪದಕ ​

ಬೇಡಿ 1984ರ ಪ್ಯಾರಾಲಿಂಪಿಕ್ಸ್​ನಲ್ಲಿ ಒಟ್ಟು ಮೂರು ಪದಕ ಪಡೆಯುವ ಮೂಲಕ ಅತಿ ಹೆಚ್ಚು ಪದಕ ಗೆದ್ದಿರುವ ಭಾರತೀಯ ಪ್ಯಾರಾ ಕ್ರೀಡಾಪಟು ಎಂಬ ದಾಖಲೆಗೆ ಪಾತ್ರರಾಗಿದ್ದಾರೆ. ಅವರು ಶಾಟ್​ಪುಟ್​ನಲ್ಲಿ ಬೆಳ್ಳಿ, ಡಿಸ್ಕಸ್​ ಥ್ರೋ ಮತ್ತು ಜಾವಲಿನ್​ ಥ್ರೋನಲ್ಲಿ ಕಂಚಿನ ಪದಕ ಪಡೆದಿದ್ದರು.

ಭೀಮರಾವ್​ ಕೇಸರ್ಕರ್​, ಬೆಳ್ಳಿ

1984ರ ನ್ಯೂಯಾರ್ಕ್​ (ಯುಎಸ್)​ ಮತ್ತು ಸ್ಟೋಕ್ ಮ್ಯಾಂಡೆವಿಲ್ಲೆ (ಯುಕೆ) ಆಶ್ರಯದಲ್ಲಿ ನಡೆದಿದ್ದ ಪ್ಯಾರಾಲಿಂಪಿಕ್ಸ್​ನಲ್ಲಿ ಕೇಸರ್ಕರ್​ ಜಾವಲಿನ್ ಥ್ರೋನಲ್ಲಿ ಬೆಳ್ಳಿ ಪದಕ ಗೆದ್ದಿದ್ದರು.

2004 ಅಥೆನ್ಸ್​ ಪ್ಯಾರಾಲಿಂಪಿಕ್ಸ್

ದೇವೇಂದ್ರ ಜಜಾರಿಯಾ, ಚಿನ್ನ

ಅಥೆನ್ಸ್​ ಕ್ರೀಡಾಕೂಟದಲ್ಲಿ ಜಾವಲಿನ್​ ಥ್ರೋದಲ್ಲಿ ಚಿನ್ನದ ಪದಕ ಗೆಲ್ಲುವ ಮೂಲಕ ಜಜಾರಿಯಾ 20 ವರ್ಷಗಳ ಪದಕದ ಬರ ನೀಗಿಸಿದ್ದರು. ಅವರು 62.15 ಮೀಟರ್​ ಎಸೆಯುವ ಮೂಲಕ ವಿಶ್ವದಾಖಲೆ ಬರೆದಿದ್ದರು. ದೇವೇಂದ್ರ ಈ ಬಾರಿ ಟೋಕಿಯೊದಲ್ಲೂ ಕಣಕ್ಕಿಳಿಯುತ್ತಿದ್ದಾರೆ.

ರಾಜೀಂದರ್ ಸಿಂಗ್ ರಹೇಲು : ಕಂಚು

ಪಂಜಾಬ್​ನ ಜಲಂದರ್​ ಜಿಲ್ಲೆಯಲ್ಲಿ ಮೆಹ್ಶಾಪುರ್​ ಎಂಬ ಹಳ್ಳಿಯಲ್ಲಿ ಜನಿಸಿದ್ದ ರಹೇಲು, ಕೇವಲ 8 ತಿಂಗಳ ಮಗುವಿದ್ದಾಗಲೇ ಪೋಲಿಯೋಗೆ ತುತ್ತಾಗಿದ್ದರು. ಅವರು 56 ಕೆಜಿ ಪವರ್​ಲಿಫ್ಟಿಂಗ್​ನಲ್ಲಿ 147.5 ಕೆಜಿ ಭಾರ ಎತ್ತುವ ಮೂಲಕ ಕಂಚಿನ ಪದಕ ಪಡೆದಿದ್ದರು.

2012ರ ಲಂಡನ್​ ಪ್ಯಾರಾಲಿಂಪಿಕ್ಸ್

ಗಿರೀಶ್ ನಾಗರಾಜೇಗೌಡ, ಬೆಳ್ಳಿ

ಲಂಡನ್​ ಪ್ಯಾರಾಲಿಂಪಿಕ್ಸ್​ನಲ್ಲಿ ಕರ್ನಾಟಕದ ಗಿರೀಶ್​ ಏಕೈಕ ಭಾರತೀಯನಾಗಿ ಪದಕ ಗೆದ್ದಿದ್ದರು. ಅವರು ಹೈಜಂಪ್​ನಲ್ಲಿ 1.74 ಮೀಟರ್​ ಎತ್ತರ ಜಿಗಿದು ಬೆಳ್ಳಿ ಪದಕ ಪಡೆದಿದ್ದರು. ಇವರು ಈ ಸ್ಪರ್ಧೆಯಲ್ಲಿ ಪದಕ ಗೆದ್ದ ಭಾರತದ ಮೊದಲ ಕ್ರೀಡಾಪಟುವಾಗಿದ್ದರು.

2016ರ ರಿಯೋ ಪ್ಯಾರಾಲಿಂಪಿಕ್ಸ್

ದೇವೇಂದ್ರ ಜಜಾರಿಯಾ, ಚಿನ್ನ

2004ರಲ್ಲಿ ಜಾವಲಿನ್​ನಲ್ಲಿ ಚಿನ್ನ ಗೆದ್ದಿದ್ದ ಜಜಾರಿಯಾ ಮತ್ತೆ 12 ವರ್ಷಗಳ ಬಳಿಕ ರಿಯೋದಲ್ಲೂ 2ನೇ ಚಿನ್ನದ ಪದಕ ಪಡೆದರು. ದಾಖಲೆಯ 63.97 ಮೀಟರ್​ ಎಸೆದು ಪ್ಯಾರಾಲಿಂಪಿಕ್ಸ್​ನಲ್ಲಿ 2 ಚಿನ್ನ ಗೆದ್ದ ಭಾರತದ ಮೊದಲ ಕ್ರೀಡಾಪಟು ಎನಿಸಿದ್ದರು.

ಮರಿಯಪ್ಪನ್ ತಂಗವೇಲು, ಚಿನ್ನ

ತಂಗವೇಲು ಹೈಜಂಪ್​ ಸ್ಪರ್ಧೆಯಲ್ಲಿ 1.89 ಮೀಟರ್​ ಜಿಗಿದು ಚಿನ್ನದ ಪದಕ ಪಡೆದಿದ್ದರು. ಈ ಮೂಲಕ ದೇಶಕ್ಕೆ ಚಿನ್ನದ ಪದಕ ತಂದುಕೊಟ್ಟ 3ನೇ ಕ್ರೀಡಾಪಟು ಎನಿಸಿದ್ದರು. ತಂಗವೇಲು 5 ವರ್ಷದವನಾಗಿದ್ದಾಗ ಬಲಗಾಲಿನ ಮೇಲೆ ಬಸ್​ ಚಕ್ರ ಹರಿದು ಕಾಲು ಕಳೆದುಕೊಂಡಿದ್ದರು. ಇವರು ಟೋಕಿಯೊ ಗೇಮ್ಸ್​ನಲ್ಲೂ ಸ್ಪರ್ಧಿಸುತ್ತಿದ್ದ ಮತ್ತೊಂದು ಪದಕದ ಮೇಲೆ ಕಣ್ಣಟ್ಟಿದ್ದಾರೆ.

ದೀಪಾ ಮಲಿಕ್, ಬೆಳ್ಳಿ

ದೀಪಾ ಮಲಿಕ್​ ಶಾಟ್​​ಪುಟ್​ನಲ್ಲಿ ಬೆಳ್ಳಿ ಪದಕ ಗೆಲ್ಲುವ ಮೂಲಕ ಪ್ಯಾರಾಲಿಂಪಿಕ್ಸ್​ನಲ್ಲಿ ಪದಕ ಗೆದ್ದ ಭಾರತದ ಮೊದಲ ಮಹಿಳಾ ಕ್ರೀಡಾಪಟು ಎಂಬ ದಾಖಲೆಗೆ ಪಾತ್ರರಾಗಿದ್ದಾರೆ. ಅವರು ರಿಯೋದಲ್ಲಿ 4.61 ಮೀಟರ್​ ಎಸೆದು ಬೆಳ್ಳಿ ಪದಕ ಪಡೆದಿದ್ದರು.

ವರುಣ್ ಸಿಂಗ್ ಭಾಟಿ, ಕಂಚು

ಹೈಜಂಪ್​ನಲ್ಲಿ ತಂಗವೇಲು ಚಿನ್ನದ ಪದಕ ಪಡೆದರೆ, ವರುಣ್ ಸಿಂಗ್ ಮೂರನೇ ಸ್ಥಾನ ಪಡೆದು ಕಂಚಿನ ಪದಕ ಪಡೆದಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.