ಪ್ಯಾರಿಸ್: ಚೊಚ್ಚಲ ಫ್ರೆಂಚ್ ಓಪನ್ ಟೆನಿಸ್ ಗ್ರ್ಯಾನ್ಸ್ಲಾಂ ಜಯಿಸುವ ಗುರಿಯಲ್ಲಿದ್ದ ಜೆಕ್ ಗಣರಾಜ್ಯದ ಆಟಗಾರ್ತಿ ಕ್ಯಾರೋಲಿನಾ ಮುಕೋವಾ ಅವರನ್ನು ತೀವ್ರ ಹಣಾಹಣಿಯಲ್ಲಿ ಮಣಿಸಿದ ಪೋಲೆಂಡ್ ಆಟಗಾರ್ತಿ ಇಗಾ ಸ್ವಿಯಾಟೆಕ್ ಚಾಂಪಿಯನ್ ಆಗಿ ಹೊರಹೊಮ್ಮಿದರು. ರೋಚಕ ಫೈನಲ್ ಗೆಲ್ಲುವ ಮೂಲಕ ಸತತ ಮೂರನೇ ಬಾರಿಗೆ ಫ್ರೆಂಚ್ ಓಪನ್ ಪ್ರಶಸ್ತಿ ಎತ್ತಿ ಹಿಡಿದರು. ಈ ಮೂಲಕ ಪ್ರತಿಷ್ಠಿತ ಟ್ರೋಫಿ ಗೆದ್ದ ಅತ್ಯಂತ ಕಿರಿಯ ಆಟಗಾರ್ತಿ (22 ವರ್ಷ) ಎಂಬ ಹೆಗ್ಗಳಿಕೆಯೂ ಅವರದ್ದಾಯಿತು.
-
Emotions all around on Philippe-Chatrier this afternoon 🥹 #RolandGarros pic.twitter.com/oc1iQr9i23
— Roland-Garros (@rolandgarros) June 10, 2023 " class="align-text-top noRightClick twitterSection" data="
">Emotions all around on Philippe-Chatrier this afternoon 🥹 #RolandGarros pic.twitter.com/oc1iQr9i23
— Roland-Garros (@rolandgarros) June 10, 2023Emotions all around on Philippe-Chatrier this afternoon 🥹 #RolandGarros pic.twitter.com/oc1iQr9i23
— Roland-Garros (@rolandgarros) June 10, 2023
ಶನಿವಾರ ನಡೆದ ಫೈನಲ್ ಪಂದ್ಯದಲ್ಲಿ ಪೋಲೆಂಡ್ನ 22 ವರ್ಷದ ಟೆನಿಸ್ ತಾರೆ ಇಗಾ, ಕ್ಯಾರೋಲಿನಾ ಮುಕೋವಾ ವಿರುದ್ಧ 6-2, 5-7, 6-4 ಅಂತರದಿಂದ ಜಯ ಸಾಧಿಸಿದರು. ಈ ಮೂಲಕ 'ಪ್ಯಾರಿಸ್ ರಾಣಿ' ಪಟ್ಟದಲ್ಲಿ ಅವರು ಮುಂದುವರಿದರು. ತೀವ್ರ ಜಿದ್ದಾಜಿದ್ದಿನಿಂದ ಕೂಡಿದ್ದ ಅಂತಿಮ ಸೆಣಸಾಟದಲ್ಲಿ ಉಭಯ ಆಟಗಾರ್ತಿಯರು ಕೆಚ್ಚೆದೆಯ ಪ್ರದರ್ಶನ ನೀಡಿದರು. ಮೊದಲ ಸೆಟ್ ಅನ್ನು ಇಗಾ ಜಯಿಸಿದರೆ, 2ನೇ ಸೆಟ್ನಲ್ಲಿ ಮುಕೋವಾ ತಿರುಗೇಟು ನೀಡಿದರು. ನಿರ್ಣಾಯಕ ಮೂರನೇ ಸೆಟ್ ಒಂದು ಹಂತದಲ್ಲಿ ಸಮಬಲದಲ್ಲಿ ಸಾಗಿದ್ದಾಗ ಪುಟಿದೆದ್ದ ಇಗಾ ಸ್ವಿಯಾಟೆಕ್ ಚಾಂಪಿಯನ್ ಆಗಿ ಹೊರಹೊಮ್ಮಿದರು. ಈ ಮೂಲಕ ಸ್ವಿಯಾಟೆಕ್ 2005-07ರ ಬಳಿಕ ಇಲ್ಲಿ ಪ್ರಶಸ್ತಿ ಉಳಿಸಿಕೊಂಡ ಮೊದಲ ಆಟಗಾರ್ತಿ ಎಂಬ ಖ್ಯಾತಿಗೆ ಪಾತ್ರರಾದರು. ಈ ಹಿಂದೆ ಜಸ್ಟಿನ್ ಹೆನಿನ್ ಪ್ರಶಸ್ತಿಗಳ ಹ್ಯಾಟ್ರಿಕ್ ಸಾಧಿಸಿದ್ದರು.
ಪ್ರಶಸ್ತಿ ಗೆಲುವಿನೊಂದಿಗೆ ತಮ್ಮ ಮೊದಲ ನಾಲ್ಕೂ ಗ್ರ್ಯಾನ್‌ಸ್ಲಾಮ್ ಫೈನಲ್‌ಗಳನ್ನು ಗೆದ್ದ ವಿಶ್ವದ 3ನೇ ಆಟಗಾರ್ತಿ(3 ಫ್ರೆಂಚ್, 1 ಅಮೆರಿಕ ಓಪನ್) ಎಂಬ ದಾಖಲೆಗೆ ಇಗಾ ಪಾತ್ರರಾದರು. ಮೋನಿಕಾ ಸೆಲೆಸ್ ಮತ್ತು ನವೋಮಿ ಒಸಾಕಾ ಅವರು ಆಡಿದ ಮೊದಲ ನಾಲ್ಕು ಫೈನಲ್ಗಳಲ್ಲಿ ಗೆಲುವು ಸಾಧಿಸಿದ್ದರು.
-
Suz and Iga, together again 😘🏆#RolandGarros pic.twitter.com/Nwd5Das6rD
— Roland-Garros (@rolandgarros) June 10, 2023 " class="align-text-top noRightClick twitterSection" data="
">Suz and Iga, together again 😘🏆#RolandGarros pic.twitter.com/Nwd5Das6rD
— Roland-Garros (@rolandgarros) June 10, 2023Suz and Iga, together again 😘🏆#RolandGarros pic.twitter.com/Nwd5Das6rD
— Roland-Garros (@rolandgarros) June 10, 2023
ಹೀಗಿತ್ತು ಫೈನಲ್ ಕದನ: ಮೊದಲ ಸೆಟ್ ಆರಂಭದಲ್ಲಿ ಹಾಲಿ ಚಾಂಪಿಯನ್ ಇಗಾ 0-2 ಯಲ್ಲಿ ಹಿನ್ನಡೆಯಲ್ಲಿದ್ದರು. ನಿಖರ ಹೊಡೆತಗಳು ಕೈತಪ್ಪುತ್ತಿದ್ದವು. ಬಳಿಕ ತನ್ನೆಲ್ಲಾ ಸಾಮರ್ಥ್ಯ ಧಾರೆ ಎರೆದ ಆಟಗಾರ್ತಿ ಬಳಿಕ 6-2 ರಲ್ಲಿ ಮೊದಲ ಸೆಟ್ ಅನ್ನು ವಶಪಡಿಸಿಕೊಂಡರು. ಇದು ಟೂರ್ನಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡುತ್ತಾ ಒಂದೂ ಸೆಟ್ ಸೋಲದೇ ಫೈನಲ್ಗೆ ಬಂದಿದ್ದ ಮುಕೋವಾಗೆ ಆಘಾತ ನೀಡಿತು.
ಇದಾದ ಬಳಿಕ 2 ನೇ ಸೆಟ್ ಮದಗಜಗಳ ಕಾದಾಟಕ್ಕೆ ಸಾಕ್ಷಿಯಂತಿತ್ತು. ಚೊಚ್ಚಲ ಪ್ರಶಸ್ತಿ ಗೆಲ್ಲಬೇಕೆಂಬ ಹಠದಲ್ಲಿದ್ದ ಕ್ಯಾರೋಲಿನಾ ಮುಕೋವಾ ಆರಂಭದಲ್ಲಿ 3-0 ಯಲ್ಲಿ ಹಿಂದಿದ್ದರೂ, ಪುಟಿದೆದ್ದು ಕೊನೆಯಲ್ಲಿ 5-7 ರ ಮುನ್ನಡೆ ಸಾಧಿಸಿ ಸೆಟ್ ವಶಪಡಿಸಿಕೊಂಡರು. ಇದರಿಂದ ಗೇಮ್ ನಿರ್ಣಾಯಕ ಮೂರನೇ ಸೆಟ್ಗೆ ಹೋಯಿತು.
-
Congratulations on an incredible fortnight @karomuchova7 👏#RolandGarros pic.twitter.com/rpeIkXX0QN
— Roland-Garros (@rolandgarros) June 10, 2023 " class="align-text-top noRightClick twitterSection" data="
">Congratulations on an incredible fortnight @karomuchova7 👏#RolandGarros pic.twitter.com/rpeIkXX0QN
— Roland-Garros (@rolandgarros) June 10, 2023Congratulations on an incredible fortnight @karomuchova7 👏#RolandGarros pic.twitter.com/rpeIkXX0QN
— Roland-Garros (@rolandgarros) June 10, 2023
ಮೂರನೇ ಸೆಟ್ನಲ್ಲಿ 2-0 ಮುನ್ನಡೆ ಸಾಧಿಸಿದ ಮುಕೋವಾ ಪ್ರಶಸ್ತಿಯತ್ತ ಧಾವಿಸುತ್ತಿದ್ದರೆ, ಹಾಲಿ ಚಾಂಪಿಯನ್ ಇಗಾ ಒಂದು ಹಂತದಲ್ಲಿ 4-4 ರಲ್ಲಿ ಸಮಬಲ ಸಾಧಿಸಿದರು. ಇದಾದ ಬಳಿಕ ಸರ್ವ್ ವೇಳೆ ಮುಕೋವಾ ಡಬಲ್ ಫಾಲ್ಟ್ ಮಾಡಿ ಸೆಟ್ ಬಿಟ್ಟುಕೊಟ್ಟರು. ಇದರಿಂದ ಕೊನೆಯ ಸೆಟ್ ಅನ್ನು ಇಗಾ 6-4 ರಲ್ಲಿ ಗೆದ್ದು ಫ್ರೆಂಚ್ ಕಿರೀಟವನ್ನು ವಶಪಡಿಸಿಕೊಂಡರು. ಗೆಲುವಿನ ಬಳಿಕ ಮೈದಾನದಲ್ಲೇ ಕಣ್ಣು ಮುಚ್ಚಿಕೊಂಡು ಕುಳಿತು ಸಂಭ್ರಮಿಸಿದರು. ಇತ್ತ ಸೋತ ದುಖಃದಲ್ಲಿ ಮುಕೋವಾ ಪ್ರಶಸ್ತಿ ಪ್ರದಾನದ ವೇಳೆ ಕಣ್ಣೀರು ಹಾಕಿದರು.
ಗೆಲುವಿನ ಬಳಿಕ ಮಾತನಾಡಿ ಇಗಾ ಸ್ವಿಯಾಟೆಕ್, "ಮೂರನೇ ಫ್ರೆಂಚ್ ಪ್ರಶಸ್ತಿ ಗೆದ್ದಿರುವುದು ಖುಷಿ ತಂದಿದೆ. ಪಂದ್ಯ ನಿಜವಾಗಿಯೂ ಪೈಪೋಟಿಯಿಂದ ಕೂಡಿತ್ತು. ಬಹಳಷ್ಟು ಏರಿಳಿತಗಳು ಕಂಡು ಬಂದವು. ಒತ್ತಡವನ್ನು ನಿಭಾಯಿಸಿ ಗೆದ್ದೆ. ಮುಕೋವಾ ಕೂಡ ಅದ್ಭುತ ಆಟವಾಡಿದರು" ಎಂದರು.
"ವಿಶ್ವದ ಪ್ರಭಾವಿ ಆಟಗಾರ್ತಿ ಮುಂದೆ ಆಡುವುದು ಸುಲಭವಲ್ಲ. ಇಗಾ ಅವರು ಪ್ರಶಸ್ತಿ ಗೆದ್ದಿರುವುದು ಅರ್ಹವಾಗಿದೆ. ಅವರ ಸವಾಲು ಎದುರಿಸಿದ್ದು ನನಗೆ ಖುಷಿ ಇದೆ. ಚೊಚ್ಚಲ ಪ್ರಶಸ್ತಿ ಜಯಿಸುವ ಕನಸು ಈಡೇರಲಿಲ್ಲ" ಎಂದು ಪರಾಜಯಗೊಂಡ ಕ್ಯಾರೋಲಿನಾ ಮುಕೋವಾ ಹೇಳಿದರು.
-
NOW SHOWING
— Roland-Garros (@rolandgarros) June 10, 2023 " class="align-text-top noRightClick twitterSection" data="
Iga in Paris - Season 3 🇫🇷#RolandGarros| @iga_swiatek pic.twitter.com/Nup1DwWHF9
">NOW SHOWING
— Roland-Garros (@rolandgarros) June 10, 2023
Iga in Paris - Season 3 🇫🇷#RolandGarros| @iga_swiatek pic.twitter.com/Nup1DwWHF9NOW SHOWING
— Roland-Garros (@rolandgarros) June 10, 2023
Iga in Paris - Season 3 🇫🇷#RolandGarros| @iga_swiatek pic.twitter.com/Nup1DwWHF9
ಕಿರಿಯ ಆಟಗಾರ್ತಿ: 22 ವರ್ಷದ ಇಗಾ 4 ಗ್ರ್ಯಾನ್ಸ್ಲಾಂ ಗೆದ್ದ ಅತಿ ಕಿರಿಯ ಆಟಗಾರ್ತಿ ಎಂಬ ಗೌರವಕ್ಕೆ ಪಾತ್ರರಾದರು. ಇದಕ್ಕೂ ಮೊದಲು 2002 ರ ಅಮೆರಿಕ ಓಪನ್ ಗೆದ್ದಿದ್ದ ಸೆರೆನಾ ವಿಲಿಯಮ್ಸ್ 20 ವರ್ಷವಿದ್ದಾಗಲೇ 4 ಪ್ರಶಸ್ತಿ ಜಯಿಸಿದ್ದರು. ಇದು ಈವರೆಗಿನ ದಾಖಲೆಯಾಗಿಯೇ ಉಳಿದಿದೆ.
2 ನೇ ಟೆನಿಸ್ ತಾರೆ: ಫ್ರೆಂಚ್ ಗ್ರ್ಯಾನ್ಸ್ಲಾಂ ಗೆಲ್ಲುವ ಮೂಲಕ ಇಗಾ ಸ್ವಿಯಾಟೆಕ್ 20.5 ಕೋಟಿ ಬಹುಮಾನ ಜೇಬಿಗಿಳಿಸಿಕೊಂಡರೆ, ರನ್ನರ್ ಅಪ್ ಆದ ಮುಕೋವಾ ಅವರು 10.2 ಕೋಟಿ ಪಡೆದರು. ಇದಲ್ಲದೇ, ವಿಶ್ವ ನಂಬರ್ 1 ಟೆನಿಸ್ ತಾರೆ ಇಗಾ ಸ್ವಿಯಾಟೆಕ್ 2007 ರ ಬಳಿಕ ಸತತ 2 ಬಾರಿ ಫ್ರೆಂಚ್ ಚಾಂಪಿಯನ್ ಪಟ್ಟ ಅಲಂಕರಿಸಿದ ಆಟಗಾರ್ತಿ ಎಂಬ ದಾಖಲೆ ಬರೆದರು. ಇದಕ್ಕೂ ಮೊದಲು ಬೆಲ್ಜಿಯಂನ ಜಸ್ಟಿನ್ ಹೆನಿನ್ ಈ ದಾಖಲೆ ಮಾಡಿದ್ದಾರೆ
ಇದನ್ನೂ ಓದಿ: French Open 2023: ಮಹಿಳಾ ಸಿಂಗಲ್ಸ್ ಫೈನಲ್ಸ್ನಲ್ಲಿ ಕುತೂಹಲದ ಕಾದಾಟ.. ಹಾಲಿ ಚಾಂಪಿಯನ್ ಇಗಾ ವಿರುದ್ಧ ಮುಚೋವಾ ಕಣಕ್ಕೆ