ನವದೆಹಲಿ : ಹಿಮಾದಾಸ್ ಪ್ರಸ್ತುತ ಪಟಿಯಾಲಾದ ನೇತಾಜಿ ಸುಭಾಷ್ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಸ್ಪೋರ್ಟ್ಸ್ನಲ್ಲಿ ಮುಂಬರುವ ಟೋಕಿಯೊ ಒಲಿಂಪಿಕ್ ಅರ್ಹತೆಗಾಗಿ ತಯಾರಿ ನಡೆಸುತ್ತಿದ್ದಾರೆ. ಆಟಗಾರರು ವಿವಿಧ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿದ್ದರೂ, ಅವರು ಕ್ರೀಡೆಯನ್ನು ಮುಂದುವರೆಸಲಿದ್ದಾರೆ ಎಂದು ಕೇಂದ್ರ ಕ್ರೀಡಾ ಮತ್ತು ಯುವಜನ ಸಚಿವ ಕಿರಣ್ ರಿಜಿಜು ಹೇಳಿದರು.
ಈ ಕುರಿತು ಟ್ವೀಟ್ ಮಾಡಿರುವ ಅವರು, ಹಿಮಾ ಅವರ ಕ್ರೀಡಾ ಭವಿಷ್ಯದ ಬಗ್ಗೆ ಹಲವರು ಕೇಳುತ್ತಿದ್ದಾರೆ. ಹಿಮಾ ಅವರು ಎನ್ಐಎಸ್ ಪಟಿಯಾಲದಲ್ಲಿ ಒಲಿಂಪಿಕ್ ಅರ್ಹತೆಗಾಗಿ ತರಬೇತಿ ಪಡೆಯುತ್ತಿದ್ದಾರೆ ಮತ್ತು ಭಾರತದ ಪರ ಓಟದಲ್ಲಿ ಭಾಗವಹಿಸುವುದನ್ನು ಅವರು ಮುಂದುವರಿಸುತ್ತಾರೆ. ನಮ್ಮ ಗಣ್ಯ ಕ್ರೀಡಾಪಟುಗಳು ವಿವಿಧ ಉದ್ಯೋಗಗಳಲ್ಲಿ ತೊಡಗಿಕೊಂಡಿದ್ದಾರೆ. ಆದರೂ, ಅವರು ಆಟ ಮುಂದುವರೆಸಲಿದ್ದಾರೆ. ನಿವೃತ್ತಿಯ ನಂತರವೂ ಅವರು ಕ್ರೀಡೆಗಳನ್ನು ಉತ್ತೇಜಿಸುವುದನ್ನು ಮುಂದುವರಿಸುತ್ತಾರೆ ಎಂದಿದ್ದಾರೆ.
-
Many people are asking, what about Hima's sports career? She is training for Olympic qualification at NIS Patiala & will keep running for India. Our elite Athletes are employed in various jobs yet continue to play. Even after retirement, they'll be engaged in promoting sports. https://t.co/TT1k34xCSL
— Kiren Rijiju (@KirenRijiju) February 11, 2021 " class="align-text-top noRightClick twitterSection" data="
">Many people are asking, what about Hima's sports career? She is training for Olympic qualification at NIS Patiala & will keep running for India. Our elite Athletes are employed in various jobs yet continue to play. Even after retirement, they'll be engaged in promoting sports. https://t.co/TT1k34xCSL
— Kiren Rijiju (@KirenRijiju) February 11, 2021Many people are asking, what about Hima's sports career? She is training for Olympic qualification at NIS Patiala & will keep running for India. Our elite Athletes are employed in various jobs yet continue to play. Even after retirement, they'll be engaged in promoting sports. https://t.co/TT1k34xCSL
— Kiren Rijiju (@KirenRijiju) February 11, 2021
ಓದಿ : ಹಿಮಾ ದಾಸ್ಗೆ ಡಿಎಸ್ಪಿ ಹುದ್ದೆ: ಅಸ್ಸೋಂ ಸರ್ಕಾರದ ಮಹತ್ವದ ನಿರ್ಧಾರ
ಇದಕ್ಕೂ ಮೊದಲು, ಹಿಮಾದಾಸ್ ಅವರನ್ನು ಡಿಎಸ್ಪಿಯಾಗಿ ನೇಮಿಸುವ ಅಸ್ಸೋಂ ಕ್ಯಾಬಿನೆಟ್ ನಿರ್ಧಾರವನ್ನು ರಿಜಿಜು ಶ್ಲಾಘಿಸಿದ್ದಾರೆ. ಸರ್ಬಾನಂದ್ ಸೋನ್ವಾಲ್ ನೇತೃತ್ವದ ಸಂಪುಟ ಹಿಮಾದಾಸ್ ಅವರನ್ನು ಅಸ್ಸೋಂ ಪೊಲೀಸ್ ಇಲಾಖೆಯಲ್ಲಿ ಡಿಎಸ್ಪಿಯಾಗಿ ನೇಮಿಸಿರುವುದು ಶ್ಲಾಘಣೀಯ ಎಂದು ರಿಜಿಜು ಟ್ವೀಟ್ ಮಾಡಿದ್ದಾರೆ.
ಗುವಾಹಟಿಯ ಜನತಾ ಭವನದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ, ಹಿಮಾದಾಸ್ನ್ನು ಡಿಎಸ್ಪಿಯಾಗಿ ನೇಮಿಸಲು ಅಸ್ಸೋಂ ಮುಖ್ಯಮಂತ್ರಿ ಸರ್ಬಾನಂದ್ ಸೊನ್ವಾಲ್ ನಿರ್ಧರಿಸಿದ್ದಾರೆ.